• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೊಂಚ ಇಳಿದ ಕೋವಿಡ್ ಪಾಸಿಟಿವಿಟಿ ದರ

|
Google Oneindia Kannada News

ಬೆಂಗಳೂರು ಜು.6: ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿತ್ಯ ಏರಿಳಿತದಿಂದ ಸಾಗಿದೆ. ಕಳೆದ ಕೆಲವು ದಿನಗಳಿಗೆ ಹೋಲಿಕೆ ಮಾಡಿದರೆ ಪಾಸಿಟಿವಿ ದರವೂ ತುಸು ತಗ್ಗಿದೆ ಎನ್ನಬಹುದು.

ಕಳೆದೊಂದು ತಿಂಗಳ ಹಿಂದಿನಿಂದಲೂ ನಗರದಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗುವವರ ಪ್ರಮಾಣದ ನಿಧಾನಗತಿಯಲ್ಲಿ ಏರಿಕೆ ಕಂಡಿದೆ. ಪಾಸಿಟಿವಿಟಿ ದರ ಸಹ ಏರುಗತಿಯಲ್ಲಿ ಸಾಗಿತ್ತು. ಇದೀಗ ಮಂಗಳವಾರಕ್ಕೆ ನಗದಲ್ಲಿನ ಪಾಸಿಟಿವಿಟಿ ದರ ಶೇ.5.8ಕ್ಕೆ ಇಳಿಕೆ ಆಗಿದೆ.

ಇದರಿಂದ ನಗರದಲ್ಲಿ ಕೊರೊನಾ ಭೀತಿ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಪತ್ತೆಯಾಗುವ ಪಾಸಿಟಿವ್ ಪ್ರಕರಣಗಳಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.

ಬೆಂಗಳೂರಿನ ಸಂಚಾರ ದಟ್ಟಣೆ, ಆಯುಕ್ತರಿಂದ ಜಂಕ್ಷನ್ ಪರಿಶೀಲನೆಬೆಂಗಳೂರಿನ ಸಂಚಾರ ದಟ್ಟಣೆ, ಆಯುಕ್ತರಿಂದ ಜಂಕ್ಷನ್ ಪರಿಶೀಲನೆ

ಜೂನ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 1.1 ರಷ್ಟಿತ್ತು. ಎರಡನೇ ವಾರದ ಹೊತ್ತಿಗೆ ಹೆಚ್ಚೆಚ್ಚು ಜನರು ಸೋಂಕಿಗೆ ತುತ್ತಾದರು. ಇದರಿಂದ ಜೂ.12ರ ವೇಳೆಗೆ 2.9ಕ್ಕೆ ಏರಿಕೆ ಆಗಿತ್ತು. ಹೀಗೆ ಹಂತ ಹಂತವಾಗಿ ಪ್ರಕರಣಗಳು ಮತ್ತು ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡು ಬಂದಿತ್ತು.

ಪಾಸಿಟಿವಿಟಿ ದರ ಶೇ.5.8ಕ್ಕೆ ಇಳಿಕೆ

ಪಾಸಿಟಿವಿಟಿ ದರ ಶೇ.5.8ಕ್ಕೆ ಇಳಿಕೆ

ಸೋಮವಾರ ನಗರದಲ್ಲಿ ಒಟ್ಟು 696 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಪಾಸಿಟಿವಿಟಿ ದರ ಶೇ.6ಕ್ಕೆ ಏರಿಕೆ ಆಗಿತ್ತು. ಮಂಗಳವಾರ 775 ಕೇಸ್ ಗಳು ಪತ್ತೆಯಾಗಿವೆ. ಒಂದೇ ದಿನ ಒಟ್ಟು 862 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ನಗರದ ಪಾಸಿಟಿವಿಟಿ ದರ ಶೇ.5.8ಕ್ಕೆ ಇಳಿಕೆ ಆಗಿದೆ. ಇದು ಹೀಗೆ ಸಾಗಿದರೆ ಕೆಲವೇ ವಾರದಲ್ಲಿ ಕೋವಿಡ್ ಸಂಪೂರ್ಣವಾಗಿ ತಹಬದಿಗೆ ಬರುವ ಸಾಧ್ಯತೆ ಇದೆ.

ಎಸಿಬಿ ದಾಳಿ: ಜಮೀರ್ ಅಹ್ಮದ್ ಪ್ಲ್ಯಾಟ್‌ನಲ್ಲಿ 24 ಜೀವಂತ ಮದ್ದು ಗುಂಡು ಪತ್ತೆಎಸಿಬಿ ದಾಳಿ: ಜಮೀರ್ ಅಹ್ಮದ್ ಪ್ಲ್ಯಾಟ್‌ನಲ್ಲಿ 24 ಜೀವಂತ ಮದ್ದು ಗುಂಡು ಪತ್ತೆ

ಹತ್ತು ವಾರ್ಡ್‌ಗಳಲ್ಲಿ ಅಧಿಕ ಸೋಂಕು

ಹತ್ತು ವಾರ್ಡ್‌ಗಳಲ್ಲಿ ಅಧಿಕ ಸೋಂಕು

ಕಳೆದ ಒಂದು ವಾರದಿಂದ ಬಿಬಿಎಂಪಿ ವ್ಯಾಪ್ತಿಯ ಬೆಳ್ಳಂದೂರು (74), ಕಾಡುಗೋಡಿ (40), ದೊಡ್ಡಾನೆಕ್ಕುಂದಿ (37), ವರ್ತೂರು (31), ಎಚ್.ಎಸ್. ಆರ್ ಬಡಾವಣೆ (27), ಹೊರಮಾವು (25), ಹಗದೂರು (21), ಹೂಡಿ (18), ಬೇಗೂರು (14), ಗುರಡಾಚಾರ್ ಪಾಳ್ಯ (14) ವಾರ್ಡ್‌ಗಳಲ್ಲಿ ಅಧಿಕ ಸೋಂಕು ಕಾಣಿಸಿಕೊಂಡಿದೆ.

ಈ ಭಾಗದಲ್ಲಿ ಸೂಕ್ತ ಎಚ್ಚರಿಕೆ ವಹಿಸಲಾಗಿದೆ. ಆದರೆ ಇಷ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಗುಣಮುಖರ ಸಂಖ್ಯೆ ಹೆಚ್ಚಿದ್ದು, ಯಾವುದೇ ಲಕ್ಷಣಗಳು ಇಲ್ಲದ್ದರಿಂದ ಆಸ್ಪತ್ರೆ ದಾಖಲಾಗುವವರ ಸಂಖ್ಯೆಯೂ ತೀರಾ ಕಡಿಮೆ ಇದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ನಿತ್ಯ 18-20-ಸಾವಿರ ಪರೀಕ್ಷೆ

ನಿತ್ಯ 18-20-ಸಾವಿರ ಪರೀಕ್ಷೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 18-20-ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ನಿತ್ಯ 600-700 ಆಸುಪಾಸಿಗೆ ಪಾಸಿಟಿವ್ ಪ್ರಕರಣ ಪತ್ತೆ ಆಗುತ್ತಿವೆ. ಹೊಸ ತಳಿಗಳ ಪ್ರಭಾವ, ಸೋಂಕಿನ ತೀವ್ರತೆ ಅಥವಾ ಮಾರಕ ಗುಣಲಕ್ಷಣಗಳು ಇಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯಲ್ಲ. ಮುಂದಿನ ಎರಡು ವಾರದಲ್ಲಿ ಕೊರೊನಾ ಇಳಿಕೆ ಆಗಲಿದೆ. ಇಳಿಕೆ ಆಗದಿದ್ದರೂ, ಒಂದು ವೇಳೆ ಇದೇ ಪ್ರಮಾಣದಲ್ಲಿ ಸಾಗಿದರೂ ಜನರು ಭಯಪಡುವ ಅಗತ್ಯತೆ ಇಲ್ಲ. ಸಾರ್ವಜನಿಕರು ಲಸಿಕೆ ಪಡೆದ ಹಿನ್ನೆಲೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಸಾವಿನ ಸಂಖ್ಯೆಯು ಶೂನ್ಯಕ್ಕೆ ಬಂದಿದೆ. ಸಾಧ್ಯವಾದಷ್ಟು ಜನಸಂದಣಿ ಪ್ರದೇಶದಲ್ಲಿ ನಿಯಮ ಪಾಲಿಸುವಂತೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ ಕೋರಿದ್ದಾರೆ.

ನಿಯಮ ಪಾಲನೆಗೆ ಸೂಚನೆ

ನಿಯಮ ಪಾಲನೆಗೆ ಸೂಚನೆ

ಬೆಳ್ಳಂದೂರು ಸೇರಿದಂತೆ ಹತ್ತು ವಾರ್ಡ್‌ಗಳಲ್ಲಿ ಅಧಿಕ ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ. ಈ ಭಾಗದಲ್ಲಿ ಐಟಿ ಕಂಪನಿಗಳು, ಇನ್ನಿತರ ಕಾರ್ಖಾನೆಗಳು ಹೆಚ್ಚಿದ್ದು, ಅಲ್ಲಿನ ನೌಕರರು ಒಂದೆಡೆಯಿಂದ ಮತ್ತೊಂದೆಡೆ, ಇತರ ರಾಜ್ಯಗಳಿಗೆ ಸಂಚರಿಸುತ್ತಿರುತ್ತಾರೆ. ಹೀಗಾಗಿ ಇಲ್ಲಿ ಕೋವಿಡ್ ವ್ಯಾಪಿಸಿದೆ. ಈ ಸಂಬಂಧ ಕೆಲವು ಐಟಿ ಕಂಪನಿಗಳ ಜತೆ ಮಾತನಾಡಿದ್ದು, ಉದ್ಯೋಗಿಗಳು ಕೋವಿಡ್ ನಿಯಮ ಪಾಲಿಸಲು ಸೂಚಿಸುವಂತೆ ಮತ್ತು ಉದ್ಯೋಗದ ಸ್ಥಳದಲ್ಲಿ ಮಾಸ್ಕ್ ಕಡ್ಡಾಗೊಳಿಸುವಂತೆ ತಿಳಿಸಿದ್ದೇವೆ ಎಂದು ಡಾ. ಬಾಲಸುಂದರ ಮಾಹಿತಿ ನೀಡಿದರು.

Recommended Video

   ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಮಾಡಿದ ಈ ತಪ್ಪಿನಿಂದ ಪಾಕಿಸ್ತಾನಕ್ಕೆ ಅದೃಷ್ಟ ಖುಲಾಯಿಸ್ತು | OneIndia Kannada
   English summary
   Covid positivity rate down from 6 to 5.85 per cent in Bengaluru city. The number of recoveries higher than new positive cases.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X