ಬೆಂಗಳೂರಲ್ಲಿ ಕೋವಿಡ್ ಪ್ರಕರಣ ಏರಿಕೆ; ಆಸ್ಪತ್ರೆ ಸೇರುವವರು ಎಷ್ಟು?

ಬೆಂಗಳೂರು, ಜನವರಿ 10; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಭಾನುವಾರ ನಗರದಲ್ಲಿ 9020 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಸಹ ಹೆಚ್ಚಾಗಿದೆ.

ಒಂದು ವೇಳೆ ನಗರದಲ್ಲಿನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ನಗರದಲ್ಲಿ ಮತ್ತೆ ಬೆಡ್‌ಗಳ ಸಮಸ್ಯೆ ಎದುರಾಗಲಿದೆ. ಪ್ರಸ್ತುತ ಅಂದಾಜಿನ ಪ್ರಕಾರ ನಗರದ ಹೊಸ ಪ್ರಕರಣಗಳ ಸಂಖ್ಯೆ 40 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ. ಫೆಬ್ರವರಿಯಲ್ಲಿ ನಗರದಲ್ಲಿ 1.2 ಲಕ್ಷ ಪ್ರಕರಣ ದಾಖಲಾಗುವ ನಿರೀಕ್ಷೆ ಇದೆ.

ಡಿಸೆಂಬರ್ ಕೊನೆಯ ವಾರದಿಂದ ಬೆಂಗಳೂರು ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನಕ್ಕೆ 21 ರಿಂದ 26. ಕಳೆದ 10 ದಿನಗಳಿಂದ ಈ ಸಂಖ್ಯೆ 33 ರಿಂದ 80ಕ್ಕೆ ಏರಿಕೆಯಾಗಿದೆ.

Covid Case Rise Hospital Admissions 33 To 80 Per Day At Bengaluru

ಕರ್ನಾಟಕ ಕೋವಿಡ್ ವಾರ್‌ ರೂಂ ನಿರ್ದೇಶಕ ಮೌನೀಲ್ ಮೌದ್ಗಿಲ್ ಪ್ರಕಾರ, ಡಿಸೆಂಬರ್ 1 ರಿಂದ ಜನವರಿ 7ರ ತನಕ ಬೆಂಗಳೂರು ನಗರದಲ್ಲಿ 34,904 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಯಾವ ಸೋಂಕಿತರು ಸಹ ಲಸಿಕೆ ಪಡೆದಿರಲಿಲ್ಲ. ಈ ಪ್ರಕರಣಗಳಲ್ಲಿ ಹಲವು ಪ್ರಕರಣಗಳು ಐಸಿಯುಗೆ ದಾಖಲಾಗಿದ್ದಾರೆ.

ಅಂಕಿ ಸಂಖ್ಯೆಗಳ ಪ್ರಕಾರ ನಗರದಲ್ಲಿ ಶನಿವಾರ ಸಂಜೆಯ ತನಕ ಮೊದಲ ಡೋಸ್ ಲಸಿಕೆ ಪಡೆದವರು ಶೇ 98.84. 49,793,996 ಜನರು ಇನ್ನೂ ಸಹ ಮೊದಲ ಡೋಸ್ ಲಸಿಕೆ ಪಡೆದಿಲ್ಲ.

ಭಾನುವಾರ ರಾತ್ರಿಯ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಸರ್ಕಾರಿ ಕೋಟಾ 4,491. ಇವುಗಳಲ್ಲಿ ಎಚ್‌ಡಿಯು 1,720, 346 ಐಸಿಯು, 429 ಐಸಿಯು ವೆಂಟಿಲೇಟರ್ ಹಾಸಿಗೆಗಳು ಲಭ್ಯವಿದೆ. ಇವುಗಳಲ್ಲಿ ಶೇ 6ರಷ್ಟು ಹಾಸಿಗೆಗಳು ಭರ್ತಿಯಾಗಿವೆ.

ಇನ್ನು ಖಾಸಗಿ ಆಸ್ಪತ್ರೆಗಳಲ್ಲಿನ ಸರ್ಕಾರಿ ಕೋಟಾದಲ್ಲಿ 1,675 ಬೆಡ್‌ಗಳು ಖಾಲಿ ಇವೆ. ಕಳೆದ ಒಂದು ವಾರದಲ್ಲಿ ಐಸಿಯುಗೆ ದಾಖಲಾದ ಸೋಂಕಿತರ ಸಂಖ್ಯೆ 22 ಮತ್ತು ಐಸಿಯು ವೆಂಟಿಲೇಟರ್ ಬೆಡ್‌ಗೆ ದಾಖಲಾದವರ ಸಂಖ್ಯೆ 9.

ಪ್ರಸ್ತುತ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಪೈಕಿ 0.47ರಷ್ಟು ಹೊಸ ಪ್ರಕರಣಗಳಿಗೆ ಐಸಿಯು ಬೆಡ್‌ನ ಅಗತ್ಯವಿದೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಆಸ್ಪತ್ರೆ ಸೇರುವವರ ಸಂಖ್ಯೆ ಸಹ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+