ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಒಂದು ವಾರದಲ್ಲಿ 10 ವಾರ್ಡ್‌ಗಳಲ್ಲಿ ಕೋವಿಡ್ ಸಂಖ್ಯೆ ಏರಿಕೆ

|
Google Oneindia Kannada News

ಬೆಂಗಳೂರು, ಜೂನ್ 23: ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಲೇ ಇದೆ. ಕಳೆದ ಒಂದು ವಾರದಲ್ಲಿ ಬಿಬಿಎಂಪಿ ವ್ಯಾಪ್ತಿಯ 10 ವಾರ್ಡಗಳಲ್ಲಿ ಸೋಂಕು ತೀವ್ರಗತಿ ಪಡೆದುಕೊಂಡಿದೆ. ನಗರದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳು 4,665.

ಬೆಳ್ಳಂದೂರು, ಕಾಡುಗೋಡಿ ವಾರ್ಡ್ ಸೇರಿದಂತೆ ಸುಮಾರು 10 ವಾರ್ಡ್‌ಗಳ ಜನರೇ ಹೆಚ್ಚಾಗಿ ಕೋವಿಡ್‌ಗೆ ತುತ್ತಾಗಿರುವುದು ಬಿಬಿಎಂಪಿಯ ಕೋವಿಡ್ ಹೆಲ್ತ್ ಬುಲೆಟಿನ್‌ನಿಂದ ದೃಢಪಟ್ಟಿದೆ. ನೆರೆ ರಾಜ್ಯಗಳಲ್ಲಿ ಸೋಂಕಿನ ಅಬ್ಬರ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಲ್ಲೂ ಕೊರೋನಾ ಪರೀಕ್ಷೆಗಳನ್ನು ಹೆಚ್ಚಿಸಲಾಗಿತ್ತು.

ಹೀಗಾಗಿ ಕೋವಿಡ್ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಲಾಗಿತ್ತು. ಈ ಮಧ್ಯೆ ಕೊರೋನಾ ತಪಾಸಣೆಗೆ ಒಳಪಡದ ವ್ಯಕ್ತಿಯೊಬ್ಬರು ಟೆಸ್ಟ್ ಪ್ರಕ್ರಿಯೆ ಕುರಿತು ಮೊಬೈಲ್ ಸಂದೇಶ ಸ್ವೀಕರಿಸಿದ್ದರಿಂದ ನಕಲಿ ಕೊರೋನಾ ಟೆಸ್ಟ್‌ಗಳ ವಿಚಾರ ಸಹ ಬೆಳಕಿಗೆ ಬಂದಿತ್ತು.

ಕರ್ನಾಟಕದಲ್ಲಿ ಬುಧವಾರ ಒಂದೇ ದಿನ 676 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದ ಪಾಸಿಟಿವ್ ದರ ಶೇ 7.2ಕ್ಕೆ ಏರಿಕೆ ಆಗಿದೆ. ಇದೇ ಅವಧಿಯಲ್ಲಿ 804 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

 10 ವಾರ್ಡ್‌ಗಳ ನಿವಾಸಿಗಳಲ್ಲಿ ಕೊರೊನಾ ಅಧಿಕ

10 ವಾರ್ಡ್‌ಗಳ ನಿವಾಸಿಗಳಲ್ಲಿ ಕೊರೊನಾ ಅಧಿಕ

ಕಳೆದ ಒಂದೇ ವಾರದಲ್ಲಿ ಬೆಳ್ಳಂದೂರಿನಲ್ಲಿ 69 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಅದೇ ರೀತಿ ದೊಡ್ಡಾನೆಕ್ಕುಂದಿಯಲ್ಲಿ 34, ಕಾಡುಗೋಡಿ ವಾರ್ಡನಲ್ಲಿ32, ವರ್ತೂರು 24, ಹಗದೂರಿನಲ್ಲಿ18 ಜನರಿಗೆ ಸೋಂಕು ತಗುಲಿದೆ. ಇನ್ನು ಎಚ್‌ಎಸ್‌ಆರ್ ಬಡಾವಣೆಯಲ್ಲಿ15, ಹೊರಮಾವು ಮತ್ತು ಹೂಡಿಯಲ್ಲಿ ತಲಾ 14 ಮಂದಿಗೆ, ಬೇಗೂರು 10 ಹಾಗೂ ವಿಜ್ಞಾನ ನಗರದಲ್ಲಿ 9ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.

 40ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

40ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

ಈ ವಾರ್ಡಗಳಲ್ಲಿ ಕೋವಿಡ್ ಹೆಚ್ಚಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಇಷ್ಟು ವಾರ್ಡಗಳಲ್ಲಿ ಸೋಂಕಿಗೆ ತುತ್ತಾದವರ ಪೈಕಿ ಸುಮಾರು 40ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 33ಮಂದಿ ಆಸ್ಪತ್ರೆಯ ಸಾಮಾನ್ಯ ವಾರ್ಡಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಜನರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಾಗಿದ್ದಾರೆ ಎಂದು ತಿಳಿದು ಬಂದಿದೆ.

 ಕಳೆದ ಒಂದು ವಾರದ ಪಾಸಿಟಿವ್ ಮಾಹಿತಿ

ಕಳೆದ ಒಂದು ವಾರದ ಪಾಸಿಟಿವ್ ಮಾಹಿತಿ

ಬಿಬಿಎಂಪಿ ಕೋವಿಡ್ ವರದಿ ಪ್ರಕಾರ, ಕಳೆದ ಏಳು ದಿನಗಳಲ್ಲಿ ನಗರದಲ್ಲಿ ಗುಣಮುಖವಾದವರಿಗಿಂತ ಸೋಂಕಿಗೆ ತುತ್ತಾದವರ ಸಂಖ್ಯೆ ಹೆಚ್ಚಾಗಿದೆ. ಕಳೆದ 7 ದಿನದಲ್ಲಿ ಒಟ್ಟು 4523 ಪಾಸಿಟಿವ್ ಪ್ರಕರಣ ಪತ್ತೆ ಆಗಿವೆ. ಇದೇ ವೇಳೆ 3700 ಮಂದಿ ಮಾತ್ರ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

 ಹೆಲ್ತ್ ಬುಲೆಟಿನ್ ಹೇಳುವುದೇನು?

ಹೆಲ್ತ್ ಬುಲೆಟಿನ್ ಹೇಳುವುದೇನು?

ಇನ್ನು ಕಳೆದ 24 ಗಂಟೆಯಲ್ಲಿ ನಗರದಲ್ಲಿ 626 ಜನರಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ ಒಟ್ಟು 780ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಯಾವುದೇ ಸೋಂಕಿತರು ಸಹ ಮೃತಪಟ್ಟಿಲ್ಲ.

ನಿತ್ಯ ನಗರದಲ್ಲಿ 15ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಈ ಪೈಕಿ 15,553 ಟೆಸ್ಟ್ ಪೈಕಿ 3,222 ಆಂಟಿಜೆನ್ ಮತ್ತು 12,351 ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ ಹೆಲ್ತ್ ಬುಲೆಟಿನ್ ಹೇಳಿದೆ.

Recommended Video

Shah Rukh Khan ಮಗನ ಜೊತೆ ನನ್ನ‌ ಮಗನನ್ನು ಹೋಲಿಸಬೇಡಿ ಎಂದ Madhavan | *International | OneIndia Kannada

English summary
Covid-19 case increase in ten wards in BBMP limits in last one week. In Covid case reported in Bellandur and Kadugodi wards said Covid health bulletin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X