ಬೆಂಗಳೂರು: ಕೋವಿಡ್ 19ನಿಂದ ಗುಣಮುಖರಾದವರಲ್ಲಿ ಹೊಸ ಸೋಂಕು ಪತ್ತೆ

ಬೆಂಗಳೂರು, ಜುಲೈ 10: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಸೈಟೊಮೆಗಾಲೋವೈರಸ್(ಸಿವಿಎಂ) ಸಮಸ್ಯೆಗಳು ಕಾಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸೈಟೊಮೆಗಾಲೋವೈರಸ್ ವೈರಲ್ ಸೋಂಕಾಗಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಪೀಡಿಸುತ್ತಿದೆ. ಸ್ಟೀರಾಯ್ಡ್ ಚಿಕಿತ್ಸೆ ಪಡೆದವರಿಗೆ ಈ ಸೋಂಕು ಕಾಡುತ್ತಿದೆ.

ಬೆಂಗಳೂರಿನಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದೆ. ದೆಹಲಿಯಲ್ಲೂ ಕೂಡ ಇಂತಹ ಪ್ರಕರಣಗಳು ಪತ್ತೆಯಾಗಿದ್ದವು.

ಇದು ಹೊಸ ಮಾದರಿಯ ಆರೋಗ್ಯ ಸಮಸ್ಯೆಯಾಗಿದೆ. ಗುದನಾಳದ ರಕ್ತಸ್ರಾವದ ಬಗ್ಗೆ ಕೆಲವು ರೋಗಿಗಳು ಮೊದಲು ದೂರು ನೀಡಿದ್ದರು, ಪರೀಕ್ಷೆ ಬಳಿಕ ಇದು ಸೈಟೊಮೆಗಾಲೋವೈರಸ್ ಎಂಬುದು ತಿಳಿದುಬಂದಿದೆ.

ಏಪ್ರಿಲ್-ಮೇ ತಿಂಗಳಿನಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕು ತಗುಲಿರುವ ರೋಗಿಗಳಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

ಕೊವಿಡ್-19 ಸೋಂಕು ತಗುಲಿದ 20 ರಿಂದ 30 ದಿನಗಳಲ್ಲಿ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ, ಹೊಟ್ಟೆ ನೋವು ಹಾಗೂ ಗುದನಾಳದಲ್ಲಿ ರಕ್ತಸ್ರಾವ ಆಗುತ್ತಿರುವುದು ಗೊತ್ತಾಗಿದೆ.

ಇಬ್ಬರು ರೋಗಿಗಳಲ್ಲಿ ತೀವ್ರ ರಕ್ತಸ್ರಾವ ಆಗುತ್ತಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ನೀಡಲಾಯಿತು. ಅದಾಗ್ಯೂ, ಒಬ್ಬ ರೋಗಿಯು ಎದೆನೋವು ಹಾಗೂ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಸಾಮಾನ್ಯ ರೋಗಾಣು

ಸಾಮಾನ್ಯ ರೋಗಾಣು

ಮಾಯೋ ಕ್ಲಿನಿಕ್ ಪ್ರಕಾರ, ಒಂದು ಬಾರಿ ಈ ವೈರಸ್ ಮನುಷ್ಯನ ದೇಹ ಹೊಕ್ಕರೆ ಅದು ಜೀವಿತಾವಧಿ ವರಿಗೂ ಜೀವಂತವಾಗಿ ಉಳಿದುಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಈ ರೋಗಾಣುವಿನಿಂದ ಆರೋಗ್ಯ ಸಮಸ್ಯೆಗಳು ಎದುರಾಗುವುದು ತೀರಾ ಕಡಿಮೆಯಾಗಿರುತ್ತದೆ.
ಆದರೆ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ ಹೊಂದಿರುವವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಾಣು ಒಂದು ಬಾರಿ ಅಂಟಿಕೊಂಡರೆ ಸುಲಭವಾಗಿ ರಕ್ತ, ಲಾಲಾರಸ, ಮೂತ್ರ ಸೇರಿದಂತೆ ದ್ರವರೂಪವಿರುವ ಭಾಗಗಳಿಗೆ ಬೇಗನೇ ಹರಡುತ್ತವೆ. ಈ ರೋಗಾಣುವಿನಿಂದ ನೀರುಗುಳ್ಳಿಗಳು ಕಾಣಿಸಿಕೊಳ್ಳುತ್ತವೆ.
ಆರೋಗ್ಯವಂತ ವ್ಯಕ್ತಿಗಳಲ್ಲಿ ಸೈಟೊಮೆಗಾಲೊವೈರಸ್ ಯಾವುದೇ ರೀತಿ ಸಮಸ್ಯೆ ಇರುವುದಿಲ್ಲ, ಹೆಚ್ಚಾಗಿ ಎಷ್ಟೋ ಜನರಲ್ಲಿ ಈ ರೋಗಾಣು ಪ್ರವೇಶಿಸಿದ್ದರೂ ಗೊತ್ತಾಗುವುದಿಲ್ಲ. ಈ ಸೋಂಕು ಹೆಚ್ಚಾಗಿ ಪುಟ್ಟ ಮಕ್ಕಳಲ್ಲಿ ಹೆಚ್ಚಾಗಿ ಹರಡುತ್ತವೆ. ಡೇ ಕೇರ್ ಮತ್ತು ನರ್ಸರಿಗಳಿಗೆ ತೆರಳುವ ಮಕ್ಕಳಲ್ಲಿ ಈ ರೋಗಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

 ಪ್ರಾಥಮಿಕ ಲಕ್ಷಣಗಳು

ಪ್ರಾಥಮಿಕ ಲಕ್ಷಣಗಳು

* ಗಂಟಲು ನೋವು, * ಸ್ನಾಯು ನೋವು, * ಆಯಾಸ,* ಗ್ರಂಥಿಗಳ ಊದಿಕೊಳ್ಳುವಿಕೆ .* ಜ್ವರ, ಆರೋಗ್ಯವಂತರಲ್ಲಿ ಸೈಟೊಮೆಗಾಲೊವೈರಸ್ ರೋಗಾಣು ಯಾವುದೇ ರೀತಿ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರ ಹೊರತಾಗಿಯೂ ಪ್ರತಿಕಾಯ ವ್ಯವಸ್ಥೆ ದೋಷ, ರೋಗ ನಿರೋಧಕ ಶಕ್ತಿ ಪ್ರಮಾಣ ಕಡಿಮೆ ಇರುವವರು, ವಿಶೇಷವಾಗಿ ಅಂಗಾಂಶ, ಕಾಂಡಕೋಶ ಮತ್ತು ಮೂಳೆ ಮಜ್ಜೆಗಳ ಸಮಸ್ಯೆ ಹೊಂದಿರುವವರಿಗೆ ಮಾರಕವಾಗಿದೆ," ಎಂದು ಮಾಯೋ ಕ್ಲಿನಿಕ್ ಎಚ್ಚರಿಸಿದೆ.

 ಗರ್ಭಿಣಿಯರಿಗೆ ಕಷ್ಟ

ಗರ್ಭಿಣಿಯರಿಗೆ ಕಷ್ಟ

ಒಂದು ವೇಳೆ ಗರ್ಭಿಣಿಯರಲ್ಲಿ ರೋಗ ನಿರೋಧಕಶಕ್ತಿ ಕಡಿಮೆಯಾಗಿದ್ದು, ಸೈಟೊಮೆಗಾಲೊವೈರಸ್ ರೋಗಾಣು ತಗುಲಿದರೆ ಹೆಚ್ಚು ಅಪಾಯಕಾರಿ ಆಗಿರುತ್ತದೆ.

ಗರ್ಭಾವಸ್ಥೆಯಲ್ಲಿ ಸೈಟೊಮೆಗಾಲೊವೈರಸ್ ರೋಗಾಣುವನ್ನೂ ಬೆಳೆಸುವ ಮಹಿಳೆಯರು ತಮ್ಮ ಶಿಶುವಿಗೆ ಅದನ್ನು ರವಾನಿಸಬಹುದು. ಆಗ ಹುಟ್ಟುವ ಮಗುವಿನಲ್ಲೂ ಈ ರೋಗಾಣುವಿನ ಲಕ್ಷಣಗಳು ಕಾಣಸಿಕೊಳ್ಳುವ ಅಪಾಯವಿರುತ್ತದೆ ಎಂದು ಅದು ಹೇಳಿದೆ.
 ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರಲಿದೆ

ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರಲಿದೆ

ಅಲ್ಲದೇ, ಈ ವೈರಸ್‌ನ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಾದ ಶ್ವಾಸಕೋಶ, ಲಿವರ್, ಅನ್ನನಾಳ, ಹೊಟ್ಟೆ, ಕರುಳು ಮತ್ತು ಮೆದುಳಿನ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಹೆಚ್ಚಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+