ಕೋವಿಡ್ ಬಗ್ಗೆ ಭಯಬೇಡ: ಶಾಲೆಗಳು ನಿಗದಿಯಂತೆ ಆರಂಭವಾಗಲಿವೆ: ಶಿಕ್ಷಣ ಸಚಿವ
ಬೆಂಗಳೂರು, ಏಪ್ರಿಲ್ 27: ಕೋವಿಡ್ ನಾಲ್ಕನೇ ಅಲೆ ಪ್ರಾರಂಭದ ಹಂತದಲ್ಲಿರುವುದರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತವೆಯೇ ಇಲ್ಲವೇ ಎಂಬ ಅನುಮಾನಗಳು ಪ್ರಾರಂಭವಾಗಿವೆ. ಎರಡು ವರ್ಷ ಪರೀಕ್ಷೆಯೇ ಇಲ್ಲದೇ ಮಕ್ಕಳು ಉತ್ತೀರ್ಣರಾಗಿದ್ದಾರೆ. 2021-22ನೇ ಸಾಲಿನಲ್ಲಿ ಶಾಲೆಗಳು ಕಡೆಯ ಆರು ತಿಂಗಳು ಮಾತ್ರವೇ ಸರಿಯಾಗಿ ನಡೆದು, ಪರೀಕ್ಷೆಗಳು ನಡೆದು ಫಲಿತಾಂಶವನ್ನು ನೀಡಿದ್ದಾರೆ. ಇದೀಗ ಮತ್ತೆ ನಾಲ್ಕನೇ ಅಲೆ ಬಂದೇ ಬಿಡ್ತು ಅನ್ನೋ ಅಬ್ಬರದ ಪ್ರಚಾರ ಪೋಷಕರನ್ನು ಕಂಗಾಲಾಗಿದ್ದಾರೆ.
ಆದರೆ, 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಪುನರಾರಂಭದ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, 'ಶಾಲೆಗಳು ಪ್ರಾರಂಭವಾಗುವ ಬಗ್ಗೆ ಗೊಂದಲ ಬೇಡ,'' ಎಂದಿದ್ದಾರೆ.
ಕೊರೋನಾ ನಾಲ್ಕನೇ ಅಲೆ ಪ್ರಾರಂಭದ ಹಂತದಲ್ಲಿದೆ. ಸದ್ಯ ಶಾಲಾ ಕಾಲೇಜುಗಳಿಗೆೆ ಬೇಸಿಗೆ ರಜೆ ಇರುವ ಕಾರಣ ಯಾವುದೇ ಆತಂಕವಿಲ್ಲ. ಕೋವಿಡ್‌ನಿಂದ ಶೈಕ್ಷಣಿಕ ಕಲಿಕೆಗೆ ನಷ್ಟವಾಗಿದ್ದು, ಮೇ 16ರಿಂದ ಶಾಲೆಗಳನ್ನು ಪುನಾರಾರಂಭ ಮಾಡಲು ಶಿಕ್ಷಣ ಇಲಾಖೆ ಈಗಾಗಲೇ ಸಜ್ಜಾಗಿದೆ. ಶೈಕ್ಷಣಿಕ ಚಟುವಟಿಕೆಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಶೈಕ್ಷಣಿಕ ವರ್ಷದ ದಾಖಲಾತಿ ಮುಗಿಸಿರುವ ಪ್ರತಿಷ್ಟಿತ ಶಾಲೆಗಳು
ಕೋವಿಡ್ ನಾಲ್ಕನೇ ಅಲೆಯ ಆತಂಕದ ನಡುವೆಯು ಕೆಲವು ಪ್ರತಿಷ್ಟಿತ ಶಾಲೆಗಳು 2022 -23ನೇ ಸಾಲಿನ ದಾಖಲಾತಿಯನ್ನು ಪೂರ್ಣಗೊಳಿಸಿವೆ. ಸರ್ಕಾರಿ ಶಾಲೆಗಳು ಮತ್ತು ಬಜೆಟ್ ಖಾಸಗಿ ಶಾಲೆಗಳು ಮಾತ್ರವೇ ದಾಖಲಾತಿಯನ್ನು ನಡೆಸುತ್ತಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಯನ್ನು ಮಾಡಬೇಕಿದೆ. ಆದರೆ, ಶಿಕ್ಷಣ ಮತ್ತು ಜೀವದ ಪ್ರಶ್ನೆ ಮೂಡಿದಾಗ ಜೀವವೇ ಮುಖ್ಯವಾಗುತ್ತದೆ. ಜೀವನ ನಡೆಸಲು ಶಿಕ್ಷಣ ಮುಖ್ಯವಾಗುತ್ತದೆ. ಕೋವಿಡ್ ನಾಲ್ಕನೇ ಅಲೆ ಹೇಗೆ ವಿಸ್ತರಿಸಲಿದೆ ಅನ್ನೋದನ್ನು ಗಮನಿಸಿ ಕೆಲವು ಪೋಷಕರು ದಾಖಲಾತಿಯನ್ನು ಮಾಡಲು ನಿರ್ಧರಿಸಿದ್ದಾರೆ.

6 ರಿಂದ 12 ವರ್ಷದ ಮಕ್ಕಳಿಗೂ ಕೊರೋನಾ ಲಸಿಕೆ
ಈಗಾಗಲೇ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಈ ಮಕ್ಕಳಿಗೆೆ ಕೋವಿಡ್ ಆತಂಕ ಕೊಂಚ ಕಡಿಮೆ ಎನ್ನಬಹುದು. ಇನ್ನು ಶಾಲೆ ಪ್ರಾರಂಭವಾಗುತ್ತಿದ್ದಂತೆ 6 ರಿಂದ 12 ವರ್ಷದ ಮಕ್ಕಳಿಗೂ ಶಾಲೆಯ ಆವರಣದಲ್ಲಿಯೇ ಕೊರೋನಾ ಲಸಿಕೆಯನ್ನು ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಶಾಲೆಗಳು ಪ್ರಾರಂಭವಾದರೇ ಮೊದಲು ಲಸಿಕೆಯನ್ನು ಮಕ್ಕಳು ಪಡೆಯಬೇಕಾಗಿದೆ. ಇನ್ನು ಶಿಕ್ಷಕರು ಮೂರನೇ ಲಸಿಕೆ ಬೂಸ್ಟರ್ ಡೋಸ್ ಪಡೆಯಬೇಕಾಗಿದೆ.

ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಂತೆ ಕ್ರಮ
ಕರ್ನಾಟಕ ಸರ್ಕಾರ ಈಗಾಗಲೇ ಸಾರ್ವಜನಿಕರಿಗೆ ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಿದೆ. ಶೈಕ್ಷಣಿಕವಾಗಿ ಮಕ್ಕಳ ಕಲಿಕೆಗೆ ಯಾವುದೇ ಕುಂದು ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸಿದ್ದತೆಯನ್ನು ಮಾಡಿಕೊಂಡಿದೆ. ಮಕ್ಕಳಿಗೂ ಲಸಿಕೆಯನ್ನು ನೀಡುವುದರಿಂದ ಶಾಲೆಗಳನ್ನು ಮುಚ್ಚುವ ಆತಂಕವಿಲ್ಲ. ಕೊರೋನಾ ಪ್ರಾರಂಭವಾದಗಿನಿಂದಲೂ ಕಲಿಕ ಮಕ್ಕಳು ತೀವ್ರ ಹಿಂದುಳಿದಿರುವುದು ಕಂಡು ಬಂದಿದೆ. ಇನ್ನು ಗ್ರಾಮೀಣ ಮಕ್ಕಳು ಸರಿಯಾಗಿ ವ್ಯಾಸಂಗ ಮಾಡದೇ ಶಾಲೆಯನ್ನೇ ಬಿಟ್ಟಿರುವ ಉದಾಹರಣೆಗಳು ಶಿಕ್ಷಣ ಇಲಾಖೆಯ ಮುಂದಿದೆ.

ಬಾಲಕಾರ್ಮಿಕ, ಬಾಲ್ಯ ವಿವಾಹ ಹೆಚ್ಚಳ
ಮಹಿಳಾ ಮಕ್ಕಳಾ ಕಲ್ಯಾಣ ಇಲಾಖೆಯು ನಡೆೆಸಿರುವ ಸರ್ವೆೆ ಮತ್ತು ಶಿಕ್ಷಣ ಇಲಾಖೆಯು ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಕಲೆೆ ಹಾಕಿತ್ತು. ಈ ವೇಳೆ ಕೊರೋನ ಸಮಯದಲ್ಲಿ ಕುಟುಂಬದ ಆರ್ಥಿಕ ಸಂಕಷ್ಟ ಎಂದುರಾಗಿ ಮಕ್ಕಳು ಶಾಲೆಗಳನ್ನು ಬಿಟ್ಟು ಕೆಲಸಕ್ಕೆ ಸೇರಿದ್ದರು. ಇನನ್ನು ಕೆಲವರು ಸಣ್ಣ ವಯಸ್ಸಿನ ಹೆಣ್ಮಕ್ಕಳಿಗೆ ಬಾಲ್ಯವಿವಾಹವನ್ನು ಮಾಡಿದ್ದರು ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿತ್ತು.ಇದರಿಂದಾಗಿ ನಾಲ್ಕನೇ ಅಲೆಯ ವೇಳೆ ಬಹಳಷ್ಟು ನಿಗಾವಹಿಸಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.

ಮಕ್ಕಳ ದಾಖಲಾತಿಗೆ ಪೋಷಕರು ಹಿಂದೇಟು ಹಾಕಬಾರದು
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, "ಶಾಲೆಗಳು ಈಗ ಚೇತರಿಸಿಕೊಳ್ಳುತ್ತಿದ್ದವು ದಾಖಲಾತಿ ಪ್ರಾರಂಭವಾಗಿದ್ದವು. ನಾಲ್ಕನೇ ಅಲೆ ಮುಂದಿಟ್ಟು ಪೋಷಕರು ಆತಂಕಗೊಳ್ಳುತ್ತಿದ್ದಾರೆ. ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಕೋವಿಡ್ ಮೂರು ಅಲೆಯಲ್ಲೂ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಕೋವಿಡ್ ನಾಲ್ಕನೇ ಅಲೆ ಅತೀಯಾದರೇ ಮಾತ್ರವೇ ಕೊನೆಯ ಹಂತದಲ್ಲಿ ಶಾಲೆಯನ್ನು ಮುಚ್ಚಬೇಕು. ಇಲ್ಲವಾದರೆ ಮಕ್ಕಳ ನಿರಂತರ ಕಲಿಕೆಗೆ ತೊಂದರೆಯಾಗದಂತೆ ದಾಖಲಾತಿ, ಪುಸ್ತಕ, ಸಮವಸ್ತ್ರವನ್ನು ಪೋಷಕರು ತೆಗೆದುಕೊಳ್ಳಬೇಕು,'' ಎಂದು ತಿಳಿಸಿದ್ದಾರೆ.












Click it and Unblock the Notifications