ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಹೈರಿಸ್ಕ್ ದೇಶಗಳ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ

|
Google Oneindia Kannada News

ಬೆಂಗಳೂರು, ಜನವರಿ 02: ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥಾಯ್ಲೆಂಡ್ ನಂತಹ ಹೈರಿಸ್ಕ್‌ ದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸರ್ಕಾರ ಏಳು ದಿನಗಳ ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ ನಿಯಮವನ್ನು ಕಡ್ಡಾಯಗೊಳಿಸಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಸೋಂಕು ಹೆಚ್ಚಾಗಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ. ಅಷ್ಟೇ ಅಲ್ಲದೇ ಇದೀಗ ಬೆಂಗಳೂರಿಗೆ ಬರುವರಲ್ಲಿ ಕೊರೊನಾ ಕಾಣಿಸಿಕೊಂಡರೆ ಅವಂತವರು ಮನೆಯಲ್ಲಿ ಕ್ವಾರಂಟೈನ್ ಆಗಬೇಕು. ಒಂದು ವೇಳೆ ಏಳು ದಿನಗಳ ನಂತರ ಜಿನೋಮ್ ಸಿಕ್ವೆನ್ಸಿಂಗ್ ನಿಂದ ಕೊರೊನಾ ಬಿಎಫ್‌ 7 ಉಪತಳಿ ಕಂಡು ಬಂದಿದ್ದೇ ಆದಲ್ಲಿ ಅವರು ಆರೋಗ್ಯ ಇಲಾಖೆ ಸೂಚಿಸುವ ನಿಯಮ ಅನುಸರಿಸಬೇಕು ಎಂದು ತಿಳಿಸಲಾಗಿದೆ.

ಈ 5 ದೇಶಗಳ ಪ್ರಯಾಣಿಕರಿಗೆ ಭಾರತದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ ಈ 5 ದೇಶಗಳ ಪ್ರಯಾಣಿಕರಿಗೆ ಭಾರತದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ

ರಾಜ್ಯದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಈ ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥಾಯ್ಲೆಂಡ್ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರ ಬೆಂಗಳೂರು ವಿಮಾನ ನಿಲ್ದಾಣ ಹೊರ ಬರುವ ಮುನ್ನ ಕೋವಿಡ್ ತಪಾಸಣೆಗೆ ಒಳಗಾಗಬೇಕು. ವಿದೇಶಿ ಪ್ರಯಾಣಿಕರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನು ತಕ್ಷಣವೇ ಪ್ರತ್ಯೇಕಿಸಿ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯಕ್ಕೆ (ಸರ್ಕಾರಿ ಅಥವಾ ಖಾಸಗಿ) ವರ್ಗಾಯಿಸಬೇಕು. ಸೋಂಕಿತರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ಜೀನೋಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Covid-19 wave Government Home quarantine must for arrivals at Bengaluru from 6 Countries

ಸ್ವಯಂಪ್ರೇರಿತ ಆರೋಗ್ಯ ಕಾಳಜಿ ವಹಿಸಿ

ಒಂದು ವೇಳೆ ಕೊರೊನಾ ಇಲ್ಲದಿದ್ದರೂ ಸಹ ಇನ್ನಿತರ ರೋಗದ ಲಕ್ಷಣಗಳಿದ್ದರೆ, ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದರೆ ಅವರು ಸ್ವತಃ ತಾವಾಗಿಯೇ ಆರೋಗ್ಯ ರಕ್ಷಣೆಗೆ, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು. ಮುಖ್ಯವಾಗಿ ಮಾಸ್ಕ್ ಧರಿಸುವುದು, ಉಸಿರಾಟ ಸಮಸ್ಯೆ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕು ತಗುಲಿದ್ದರೆ ಏಳು ದಿನ ಕಟ್ಟುನಿಟ್ಟಾಗಿ ಹೋಮ್ ಕ್ವಾರಂಟೈನ್‌ನಲ್ಲಿರಬೇಕು ಎಂದು ಸರ್ಕಾರ ಸೂಚಿಸಿದೆ.

ಜ್ವರ, ಕೆಮ್ಮು, ಶೀತ, ದೇಹ ನೋವು, ರುಚಿ ಮತ್ತು ವಾಸನೆ ಬಾರದಿದ್ದರೆ ಮತ್ತು ಉಸಿರಾಟ ಸಮಸ್ಯೆ ಇದ್ದರೆ ಅಂತವರು ಸ್ವಯಂ ಪ್ರೇರಿತರಾಗಿ ಪ್ರತ್ಯೇಕವಾಗಿರಬೇಕು. ಹಾಗೂ ಸ್ಥಳೀಯ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
Covid-19 wave Government Home quarantine must for arrivals at Bengaluru from 6 Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X