ನವೆಂಬರ್‌ಗೆ ಮುನ್ನ ಎಲ್ಲರಿಗೂ ಲಸಿಕೆ ದೊರೆಯಲಿದೆ: ಆರೋಗ್ಯ ಸಚಿವ ಡಾ. ಸುಧಾಕರ್

ಬೆಂಗಳೂರು, ಮೇ 19: ಕೊರೊನಾ ವೈರಸ್‌ನ ನಿಯಂತ್ರಣಕ್ಕೆ ಎಲ್ಲರಿಗೂ ಲಸಿಕೆ ನೀಡುವುದು ಪ್ರಮುಖ ಅಸ್ತ್ರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಆದರೆ ಸದ್ಯ ಉಂಟಾಗಿರುವ ಲಸಿಕೆಯ ಕೊರತೆ ವೈರಸ್ ವಿರುದ್ಧದ ಹೋರಾಟಕ್ಕೆ ಹಿನ್ನಡೆಯುಂಟು ಮಾಡಿದೆ. ಈ ಮಧ್ಯೆ ರಾಜ್ಯದ ಪ್ರತಿಯೊಬ್ಬರಿಗೂ ನವೆಂಬರ್ ಒಳಗೆ ಲಸಿಕೆ ದೊರೆಯಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ಭಾರತ್ ಬಯೋಟೆಕ್ ಲಸಿಕೆಯನ್ನು ಪೂರೈಸಲಿದೆ ಎಂದು ಆರೋಗ್ಯ ಸಚಿವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಮುಂದೆ ನಮ್ಮ ರಾಜ್ಯದಲ್ಲೇ ಲಸಿಕೆ‌ಉತ್ಪಾದನೆಯಾಗಲಿದೆ ಎಂದಿದ್ದಾರೆ. ರಷ್ಯಾದ ಸ್ಪುಟ್ನಿಕ್ ಕೂಡ ರಾಜ್ಯದಲ್ಲಿಯೇ ಉತ್ಪಾದನೆಯಾಗಲಿದೆ. ಅದೂ ಆದರೆ ಎಲ್ಲರಿಗೂ ಬೇಗನೆ ಲಸಿಕೆ ಲಭ್ಯವಾಗಲಿದೆ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.

ಕೋವ್ಯಾಕ್ಸಿನ್ ನಮ್ಮ ರಾಜ್ಯದಲ್ಲೇ ಉತ್ಪಾದನೆಯಾಗಲಿದೆ. ಭಾರತ್ ಬಯೋಟೆಕ್ ಇದನ್ನ ಉತ್ಪಾದನೆ ಮಾಡಲಿದೆ. ಅವರ ಜೊತೆ ಮಾತುಕತೆ ನಡೆಸಿದ್ದು ತುರ್ತು ಅಗತ್ಯವಿರುವ ಲಸಿಕೆ ನೀಡುವ ಭರವಸೆಯನ್ನು ಅದು ಕೊಟ್ಟಿದೆ. ಮುಂದಿನ ವಾರ ಹೆಚ್ಚು ವಯಲ್ಸ್ ಸಿಗಲಿದೆ. ತುರ್ತಾಗಿ 500 ವಯಲ್ಸ್ ನೀಡುವಂತೆ ಕೇಳಿದ್ದೇವೆ. ಅದು ದೊರೆತರೆ ಲಸಿಕೆ ಸಮಸ್ಯೆ ಅರ್ಧ ಬಗೆಹರಿಯಲಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

Covid-19 vaccine likely to be distributed everyone before November month: Health Minister Dr K Sudhakar

ಇನ್ನು ಇದೇ ಸಂದರ್ಭದಲ್ಲಿ ಆರೋಗ್ಯವ ಸಚಿವರು ನವೆಂಬರ್ ಒಳಗೆ ಎಲ್ಲರಿಗೆ ಲಸಿಕೆ ಲಭ್ಯವಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನವೆಂಬರ್ ತಿಂಗಳಿನ ಒಳಗೆ ನಮ್ಮ ರಾಜ್ಯದ ಎಲ್ಲರಿಗೆ ಲಸಿಕೆ ದೊರೆಯುವ ವಿಶ್ವಾಸ ನಮಗಿದೆ ಎಂದಿದ್ದಾರೆ. ಕಳೆದ 24 ಗಂಟೆಯಲ್ಲಿ 58,396 ಜನ ಗುಣಮುಖರಾಗಿದ್ದು ಈವರೆಗೂ ಒಟ್ಟು 16,74,484 ಜನ ಗುಣಮುಖರಾಗಿದ್ದಾರೆ. ಇದು ಅಶಾದಾಯಗ ಸಂಗತಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+