ಗುಡ್ ನ್ಯೂಸ್: ಮೈಸೂರು ಯದುವಂಶದ ಕುಡಿ ಆಗಮನಕ್ಕೆ ಕ್ಷಣಗಣನೆ

ಬೆಂಗಳೂರು, ಡಿಸೆಂಬರ್ 6 : ಮೈಸೂರಿನ ಅರಮನೆಯಲ್ಲೀಗ ಸಂಭ್ರಮವೋ ಸಂಭ್ರಮ. ಸುಮಾರು ಆರು ದಶಕಗಳ ಬಳಿಕ ಯದುವಂಶದ ಕುಡಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೈಸೂರಿನ ರಾಜವಂಶಸ್ಥ ಯದುವೀರ್ ಅರಸ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಬುಧವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತ್ರಿಷಿಕಾ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ಅಥವಾ ಗುರುವಾರ ಹೆರಿಗೆ ಆಗುವು ಸಾಧ್ಯತೆಗಳಿವೆ. ಈ ಮೂಲಕ ಮೈಸೂರು ರಾಜವಂಶಸ್ಥರಿಗೆ ತಟ್ಟಿದೆ ಎನ್ನಲಾಗಿದ್ದ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗಿದೆ.

 Countdown begins for a new member of the Mysuru royal family

ಶ್ರೀರಂಗಪಟ್ಟಣದ ರಾಜನ ಪತ್ನಿ ಅಲಮೇಲಮ್ಮ ಶಾಪದಿಂದಾಗಿ ಒಡೆಯರ್ ವಂಶದ ಅರಸರಿಗೆ ಮಕ್ಕಳು ಆಗುತ್ತಿರಲಿಲ್ಲ ಎಂದು ಜನಪದೀಯ ಕಥೆಯೊಂದು ಇದೆ.

ಆದರೆ, ಆ ಶಾಪದಿಂದ ಮುಕ್ತಿ ದೊರೆತಂತಿದೆ. ಪ್ರಮೋದಾದೇವಿ ಒಡೆಯರ್ ದತ್ತುಪುತ್ರ ಯದುವೀರ ಅವರ ಪತ್ನಿ ತ್ರಿಷಿಕಾಗೆ ಇದೀಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇನ್ನೇನು ಯದುವಂಶದ ಕುಡಿ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+