ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಗುಮ್ಮ: Work from Home ಗೆ ಮೊರೆ ಹೋದ ಕಾರ್ಪೋರೇಟ್ ಕಂಪನಿಗಳು!

|
Google Oneindia Kannada News

ಬೆಂಗಳೂರು, ಮಾರ್ಚ್ 13: ವಿಶ್ವದಾದ್ಯಂತ ಭಾರತದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಯವರೆಗೂ ಭಾರತದಲ್ಲಿ 75 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿದೆ. ಇದರಿಂದ ಎಚ್ಚೆತ್ತುಕೊಂಡಿರುವ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳು 'ವರ್ಕ್ ಫ್ರಮ್ ಹೋಮ್' (ಮನೆಯಿಂದ ಕೆಲಸ)ಗೆ ಮೊರೆ ಹೋಗಿವೆ.

ಪ್ರತಿಷ್ಟಿತ ಕಂಪನಿಗಳಾದ ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್, ಊಬರ್, ಓಲಾ, ಸ್ವಿಗ್ಗಿ, ಪೇಟಿಎಂ, ವಿಪ್ರೋ, ಟೆಕ್ ಮಹಿಂದ್ರಾ ಸೇರಿದಂತೆ ಹಲವು ಐಟಿ ಕಂಪನಿಗಳು ತನ್ನ ಎಲ್ಲಾ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ.

ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!

ಇನ್ಸ್ಟಾಮೋಜೋ, ಬೌನ್ಸ್, ಮೀಶೋ ಸೇರಿದಂತೆ ಬೆಂಗಳೂರು ಮೂಲದ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ತನ್ನ ನೌಕರರಿಗೆ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಕಟ್ಟಪ್ಪಣೆ ಹೊರಡಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ

ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ

ವಿಡಿಯೋ ಕಾನ್ಫರೆನ್ಸ್ ಮೂಲಕ ಸಹೋದ್ಯೋಗಿ ಮತ್ತು ಗ್ರಾಹಕರ ಜೊತೆಗೆ ಸಂವಹನ ನಡೆಸುವ ಅವಕಾಶವನ್ನು ಮನೆಯಿಂದ ಕೆಲಸ ಮಾಡುವ ಎಲ್ಲಾ ನೌಕರರಿಗೆ ಫ್ಲಿಪ್ ಕಾರ್ಟ್ ಮಾಡಿಕೊಟ್ಟಿದೆ.

ಜನಸಂದಣಿ ಕಡಿಮೆಗೊಳಿಸುವ ಉದ್ದೇಶ

ಜನಸಂದಣಿ ಕಡಿಮೆಗೊಳಿಸುವ ಉದ್ದೇಶ

ಊಬರ್ ಕಂಪನಿಯ ಯಾವ ಉದ್ಯೋಗಿಗೂ ಇಲ್ಲಿಯವರೆಗೂ ಕೊರೊನಾ ಸೋಂಕು ತಗುಲಿಲ್ಲ. ಆದರೂ, ತನ್ನ ಎಲ್ಲಾ ಉದ್ಯೋಗಿಗಳಿಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಊಬರ್ ಒದಗಿಸಿದೆ. ''ಜನಸಂದಣಿಯನ್ನು ಕಡಿಮೆಗೊಳಿಸುವುದು ನಮ್ಮ ಉದ್ದೇಶ'' ಎಂದು ಊಬರ್ ನ ಉಪಾಧ್ಯಕ್ಷ ಆಂಡ್ರ್ಯೂ ಮ್ಯಾಕ್ ಡೊನಾಲ್ಡ್ ತಿಳಿಸಿದ್ದಾರೆ.

ಕೊರೊನಾ ಕರಿನೆರಳು: ಎಚ್ಚರ ತಪ್ಪಿದ್ರೆ ಬೆಂಗಳೂರಿಗೆ ಅಪಾಯ ಕಟ್ಟಿಟ್ಟಬುತ್ತಿ!ಕೊರೊನಾ ಕರಿನೆರಳು: ಎಚ್ಚರ ತಪ್ಪಿದ್ರೆ ಬೆಂಗಳೂರಿಗೆ ಅಪಾಯ ಕಟ್ಟಿಟ್ಟಬುತ್ತಿ!

ಮನೆಯಿಂದ ಕೆಲಸ ಮಾಡುವುದು ಕಡ್ಡಾಯ

ಮನೆಯಿಂದ ಕೆಲಸ ಮಾಡುವುದು ಕಡ್ಡಾಯ

ಇನ್ನೂ ಟ್ವಿಟ್ಟರ್, ನೋಕಿಯಾ ಕಂಪನಿಗಳು ಕೂಡ ವರ್ಕ್ ಫ್ರಮ್ ಹೋಮ್ ಪಾಲಿಸಿಯನ್ನು ಕಡ್ಡಾಯಗೊಳಿಸಿದೆ. ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಉದ್ಯೋಗಿಗಳಿಗೆ ಕಂಪನಿಗಳು ಸೂಚಿಸಿವೆ. ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ರಜೆ ತೆಗೆದುಕೊಂಡು ಚಿಕಿತ್ಸೆ ಪಡೆಯುವಂತೆಯೂ ನೌಕರರಿಗೆ ಕಂಪನಿಗಳು ತಿಳಿಸಿವೆ.

ಕೊರೊನಾ ಸೋಂಕಿನ ಭೀತಿ

ಕೊರೊನಾ ಸೋಂಕಿನ ಭೀತಿ

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿರುವ ತೆಲಂಗಾಣ ಮೂಲದ ಓರ್ವ ಟೆಕ್ಕಿಗೆ, ಅಮೇರಿಕಾದಿಂದ ಬೆಂಗಳೂರಿಗೆ ಬಂದ ಡೆಲ್ ಕಂಪನಿಯ ಉದ್ಯೋಗಿಗೆ ಮತ್ತು ಗೂಗಲ್ ಕಂಪನಿಯ ಓರ್ವ ಉದ್ಯೋಗಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ, ಅನಿವಾರ್ಯವಾಗಿ ಈ ಎಲ್ಲಾ ಕಂಪನಿಗಳು ವರ್ಕ್ ಫ್ರಮ್ ಹೋಮ್ ಪಾಲಿಸಿಗೆ ಮೊರೆ ಹೋಗಿವೆ.

ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್

ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣ ಬೆಳೆಸುವ ಟೆಕ್ಕಿಗಳು

ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣ ಬೆಳೆಸುವ ಟೆಕ್ಕಿಗಳು

ಮೂರು ಮಿಲಿಯನ್ (ಮೂವತ್ತು ಲಕ್ಷ)ಗೂ ಅಧಿಕ ಮಂದಿ ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಈ ಪೈಕಿ ಬಹುತೇಕ ಮಂದಿ ಕಂಪನಿಯ ಪ್ರಾಜೆಕ್ಟ್ ನಿಮಿತ್ತ ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಹಾಗೆ ವಿದೇಶಗಳಿಂದ ಈಗ ಭಾರತಕ್ಕೆ ಮರಳಿದ ಎಲ್ಲಾ ಟೆಕ್ಕಿಗಳೂ 14 ದಿನಗಳ ಕಾಲ ಪ್ರತ್ಯೇಕವಾಗಿ ಇರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

English summary
Coronavirus scare: Big Corporations are asking employees to work from home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X