• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್, ಡಾಕ್ಟ್ರು ಅಗ್ನಿಶಾಮಕ ವಾಹನ ರಿಪೇರಿ, PitStopಗೆ ಕರೆ ಮಾಡಿ

|

ಬೆಂಗಳೂರು, ಮಾರ್ಚ್ 29: ದೇಶದ ಸೇವೆಯಲ್ಲಿ ತೊಡಗಿರುವವರಿಗಾಗಿ ಯಾವುದೇ ಸೇವಾ ಶುಲ್ಕ ಅಥವಾ ಕಾರ್ಮಿಕ ಶುಲ್ಕವನ್ನು ವಿಧಿಸದೇ ವಾಹನ ದುರಸ್ತಿ ಮಾಡುವ #AtYoirService ಅಭಿಯಾನವನ್ನು ಪಿಟ್‍ಸ್ಟಾಪ್, ಬೆಂಗಳೂರು, ಮುಂಬೈ, ದೆಹಲಿ, ಪುಣೆ, ಹೈದರಾಬಾದ್, ಚೆನ್ನೈ, ನೋಯ್ಡಾ, ಗುರುಗ್ರಾಮ ಮತ್ತು ಫರಿದಾಹಾದ್ ಹೀಗೆ ಒಂಬತ್ತು ನಗರಗಳಲ್ಲಿ ಆರಂಭಿಸಿದೆ.

ದಿನಸಿ ವಿತರಣಾ ಸಿಬ್ಬಂದಿ, ಅಗ್ನಿಶಾಮಕ, ಪೊಲೀಸ್, ಆ್ಯಂಬುಲೆನ್ಸ್, ವೈದ್ಯರು, ಇತರ ಉದ್ಯೋಗಿಗಳ ವಾಹನಗಳಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡರೆ ಪಿಟ್‍ಸ್ಟಾಪ್‍ಗೆ 6262621234 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಅಥವಾ ಗೆಟ್ ಪಿಟ್ ಸ್ಟಾಪ್.ಕಾಂಗೆ ಲಾಗ್ ಆನ್ ಮಾಡಬಹುದು.

ಪಿಟ್‍ಸ್ಟಾಪ್ ಆಯ್ದ ಗ್ಯಾರೇಜ್‍ಗಳ ಜತೆ ಪಾಲುದಾರಿಕೆಯಲ್ಲಿ ಈ ಸೇವೆ ಒದಗಿಸುತ್ತಿದ್ದು ಮನೆಬಾಗಿಲಲ್ಲೇ ಸೇವೆ ಒದಗಿಸುವ ಸಂಚಾರಿ ವಾಹನ ತಂಡವನ್ನು ಕಳುಹಿಸಿ ತಕ್ಷಣವೇ ಸಮಸ್ಯೆಗಳನ್ನು ಬಗೆಹರಿಸಿ ವಾಹನ ಚಾಲನೆಯಾಗುವಂತೆ ದುರಸ್ತಿ ಮಾಡಿಕೊಡುತ್ತದೆ.

" ಸಾಂಕ್ರಾಮಿಕದ ಸಂದರ್ಭದಲ್ಲಿ ಕೂಡಾ ನಮ್ಮ ಅಗತ್ಯತೆಗಳನ್ನು ಸಕಾಲಿಕವಾಗಿ ಪೂರೈಸಲು ಶ್ರಮಿಸುತ್ತಿರುವ, ಬೀದಿಗಳಲ್ಲಿ ನಮಗಾಗಿ ಹೋರಾಟ ಮಾಡುತ್ತಿರುವ ಹೀರೊಗಳಿಗೆ ನಾವು ಸೆಲ್ಯೂಟ್ ಮಾಡುತ್ತಿದ್ದೇವೆ. ಇವರಿಗೆ ಕಾರ್ಯಾಚರಣೆ ವೇಳೆ ಯಾವುದೇ ವಾಹನ ಸರ್ವೀಸ್ ಅಗತ್ಯ ಕಂಡುಬಂದಲ್ಲಿ ದಿನದ ಯಾವುದೇ ಸಂದರ್ಭದಲ್ಲಿ ಅದನ್ನು ಪೂರೈಸುವುದಕ್ಕಾಗಿ ಈ ಅಭಿಯಾನ ಆರಂಭಿಸಲು ಅತೀವ ಸಂತಸವಾಗುತ್ತಿದೆ. ಪೊಲೀಸರು, ಸ್ಥಳೀಯ ಅಧಿಕಾರಿಗಳು ಹಾಗೂ ಪಾಲುದಾರ ಗ್ಯಾರೇಜ್‍ಗಳ ಜತೆ ಸಮನ್ವಯದಿಂದ ನಾವು ಕಾರ್ಯ ನಿರ್ವಹಿಸುತ್ತಿದ್ದು, ನಿಮ್ಮ ವಾಹನಗಳ ಸೇವೆ ನಿರಂತರವಾಗಿ ಮುಂದುವರಿಯುವಂತೆ ಮಾಡಲು ಸಾಧ್ಯವಾಗುತ್ತಿರುವುದು ಸಂತಸದ ವಿಚಾರ" ಎಂದು ಪಿಟ್‍ಸ್ಟಾಪ್ ಸಂಸ್ಥಾಪಕ & ಸಿಇಒ ಮಿಹಿರ್ ಮೋಹನ್ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುವ ಸಲುವಾಗಿ ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಪಿಟ್‍ಸ್ಟಾಪ್ ಎಲ್ಲ ಮನೆಬಾಗಿಲ ಸೇವೆ ಮತ್ತು ಗ್ಯಾರೇಜ್ ಸೇವೆಗಳನ್ನು (ಅಗತ್ಯ ಸೇವೆಗಳನ್ನು ಒದಗಿಸುವವರ ವಾಹನ ಹೊರತುಪಡಿಸಿ) 2020ರ ಏಪ್ರಿಲ್ 14ರವರೆಗೆ ಸ್ಥಗಿತಗೊಳಿಸಿದೆ.

English summary
Pitstop has launched the #AtYourService campaign in nine cities - Bengaluru, Mumbai, Delhi, Pune, Hyderabad, Chennai, Noida, Gurugram and Faridabad as a service to the ones who are serving the nation, without any service or labour charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X