ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಪಾಸಣೆ: ಪೊಲೀಸರ ಮೇಲೆ ಸಿಟ್ಟಾದ ಶಾಸಕಿ

|
Google Oneindia Kannada News

ಬೆಂಗಳೂರು, ಮಾರ್ಚ್ 19: ಕೊರೊನಾ ವೈರಸ್ ತಪಾಸಣೆ ಕಾರ್ಯ ಅನೇಕ ಕಡೆ ನಡೆಯುತ್ತಿದೆ. ಆದರೆ, ವಿಧಾನಸೌಧದಲ್ಲಿ ನಡೆಯುತ್ತಿರುವ ತಪಾಸಣೆ ಶಾಸಕಿ ಅಂಜಲಿ ನಿಂಬಾಳ್ಕರ್ ಸಿಟ್ಟಿಗೆ ಕಾರಣವಾಗಿದೆ.

ಇಂದು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ವಿಧಾನ ಸೌಧದ ಪಶ್ಚಿಮ ದ್ವಾರದ ಬಳಿ ಆಗಮಿಸುತ್ತಿದ್ದರು. ಈ ವೇಳೆ ಪೊಲೀಸರು ಕೊರೊನಾ ವೈರಸ್ ತಪಾಸಣೆಗೆ ಮಾಡುತ್ತಿದ್ದರು. ಅಲ್ಲಿ ಕೆಲವರು ಸ್ಕ್ರೀನಿಂಗ್ ಮಾಡಿಸದೆ ಹಾಗೆಯೇ ಒಳಗೆ ಹೋಗುತ್ತಿದ್ದರು.

ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಕೊರೊನಾ ಶಂಕಿತರ ಕೈಗೆ ಸ್ಟಾಂಪ್ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಕೊರೊನಾ ಶಂಕಿತರ ಕೈಗೆ ಸ್ಟಾಂಪ್

ಹೀಗಾಗಿ ''ಎಲ್ಲರನೂ ಸ್ಕ್ರೀನಿಂಗ್ ಮಾಡಿ. ಸ್ಕ್ರೀನಿಂಗ್ ಮಾಡಿಸದೆ ಕೆಲವರು ಹೋಗುತ್ತಿದ್ದಾರೆ. ನೀವು ಏನ್ ಮಾಡ್ತೀದ್ದೀರಾ ಇಲ್ಲಿ. ನಾವೆಲ್ಲ ಶಾಸಕರು ಇದ್ದೇವೆ.'' ಎಂದು ಅಂಜಲಿ ನಿಂಬಾಳ್ಕರ್ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Coronavirus Mla Anjali Nimbalkar Unhappy With Police

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ 15 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಕೊಡಗಿನಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದೆ. ಕೊರೊನಾದಿಂದ ಕಲಬುರ್ಗಿಯ ಒಬ್ಬ ವೃದ್ದ ಮೃತಪಟ್ಟಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಿದೆ.

English summary
Coronavirus in karnataka: Kanakapura MLA Anjali Nimbalkar unhappy with police in vidhana soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X