'ರೀಬೂಟ್ ನಮ್ಮ ಬೆಂಗಳೂರು'ನಲ್ಲಿ ಪಾಲ್ಗೊಂಡ ಡಿಸಿಎಂ ಅಶ್ವಥ್ ನಾರಾಯಣ
ಬೆಂಗಳೂರು, ಮೇ 16: ಕೋವಿಡ್ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ಅವರು, ನಮ್ಮ ಬೆಂಗಳೂರು ಫೌಂಡೇಶನ್‌ನ 'ರೀಬೂಟ್ ನಮ್ಮ ಬೆಂಗಳೂರು' ಕಾರ್ಯಕ್ರಮದ ಮೂಲಕ ನಾಗರಿಕರು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ವೀಡೀಯೋ ಸಂವಾದ ನಡೆಸಿದರು.
ಶುಕ್ರವಾರ ಸಂಜೆ ಈ ಕಾರ್ಯಕ್ರಮ ಜರುಗಿತು. ಈ ವೇಳೆ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ಅವರು ನಾಗರಿಕರು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಟನೆಗಳಿಗೆ ಹೇಳಿದ ಪ್ರಮುಖ ಸಂಗತಿಗಳು ಇಲ್ಲಿವೆ.
* ಎಲ್ಲಾ ಶಾಲಾ ಸಂಸ್ಥೆಗಳಿಗೆ ಶುಲ್ಕ ಹೆಚ್ಚಳ ಮಾಡಬಾರದು, ಶುಲ್ಕ ಸಂಗ್ರಹಕ್ಕೆ ಒತ್ತಾಯಿಸಬಾರದು ಎಂದು ನಿರ್ದೇಶಿಸಲಾಗಿದೆ. ಮುಂದಿನ ಮೂರು ತಿಂಗಳಾದರೂ ಶುಲ್ಕ ಸಂಗ್ರಹವನ್ನು ಸ್ವಯಂಪ್ರೇರಿತವಾಗಿ ಮಾಡಲು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಸಲಹೆಯನ್ನು ಈಗಾಗಲೇ ಕಳುಹಿಸಲಾಗಿದೆ. ಶುಲ್ಕವನ್ನು ಹೆಚ್ಚಿಸಿದ್ದಲ್ಲಿ ಹೆಚ್ಚಳವನ್ನು ಹಿಂತಿರುಗಿಸಲು ಆಯಾ ಶಾಲೆಗಳಿಗೆ ಸುತ್ತೋಲೆಗಳನ್ನು ಕಳುಹಿಸಲಾಗುತ್ತದೆ.
* ಬೀದಿಗಳು ಮತ್ತು ಫುಟ್‌ಪಾತ್‌ಗಳು ನಾಗರಿಕರಿಗೆ ಸೇರಿವೆ. ಬೀದಿ ಬದಿಯ ಮಾರಾಟಗಾರರ ಹಕ್ಕುಗಳಿಗಿಂತ ಪಾದಚಾರಿ ಹಕ್ಕುಗಳು ಹೆಚ್ಚು. ಅದೇ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಅವರ ಜೀವನೋಪಾಯ ಮತ್ತು ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಅದನ್ನು ಎಚ್ಚರಿಕೆಯಿಂದ ಗಮನಿಸಬೇಕು.
* ಮಾಲಿನ್ಯಕಾರಕ ಉದ್ಯಮಗಳು ಮುಚ್ಚಲ್ಪಟ್ಟ ಕಾರಣ ಜಲಮಾರ್ಗಗಳು ಸ್ವಚ್ಛವಾಗಿವೆ ಎಂಬುದು ಬಹಳ ಸ್ಪಷ್ಟವಾಗಿದೆ. ಜವಾಬ್ದಾರಿಯುತ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಪೂರ್ಣ ಪ್ರಮಾಣದಲ್ಲಿ ಮಾಡುತ್ತಿಲ್ಲ ಎಂದು ಸಂಪೂರ್ಣವಾಗಿ ಒಪ್ಪಿಕೊಳ್ಳಿ. ಕಾರ್ಖಾನೆಗಳಿಂದ ವಿಸರ್ಜನೆಯಾಗುವ ಮಾಲಿನ್ಯವನ್ನು ಜಲಮಾರ್ಗಗಳು / ಮಳೆ ನೀರು ಚರಂಡಿಗಳಿಗೆ ಹೋಗಬಾರದು.
* ವಿವಿಧ ದುರ್ಬಲ ವರ್ಗದವರಿಗೆ ಒದಗಿಸಲಾದ ಪ್ಯಾಕೇಜ್‌ನಲ್ಲಿ ಯಾವುದೇ ಸೋರಿಕೆ ಇರುವುದಿಲ್ಲ. ಆಧಾರ್ ಸಂಪರ್ಕದೊಂದಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಯಾವುದೇ ದುರುಪಯೋಗವಿರುವುದಿಲ್ಲ.
* ಉದ್ಯೋಗದಾತರಿಗೆ ಪಾವತಿ ಮಾಡುವಂತೆ ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ. ಯಾರೇ ಕ್ವಾರಂಟೈನ್ ಗೆ ವ್ಯವಸ್ಥೆ ಕೇಳಿದರೂ ನಾವು ಉಚಿತವಾಗಿ ವ್ಯವಸ್ಥೆ ಮಾಡಿದ್ದೇವೆ. ಮತ್ತು ಕೆಲವರಿಗೆ ನಿಭಾಯಿಸಲು ಶಕ್ತಿ ಇರುವವರಿಗೆ ಸ್ಟಾರ್ ಹೋಟೆಲ್ ಗಳಲ್ಲಿ ಸೌಕರ್ಯವನ್ನು ಕಲ್ಪಿಸಲಾಗಿದೆ
* ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ, ಹಸಿರು ಮತ್ತು ಹಳದಿ ವಲಯಗಳಲ್ಲಿ ಅನುಮತಿಸಿದಂತೆ ಕೆಂಪು ವಲಯದಲ್ಲಿ ಚಟುವಟಿಕೆಗಳನ್ನು ಅನುಮತಿಸುವಂತೆ ನಾವು ಭಾರತ ಸರ್ಕಾರಕ್ಕೆ ವಿನಂತಿಸಿದ್ದೇವೆ.