ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ; ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಸೂಚನೆ

|
Google Oneindia Kannada News

ಬೆಂಗಳೂರು, ಮಾರ್ಚ್ 13: ಜಾಗತಿಕವಾಗಿ ಬಿರುಗಾಳಿ ಎಬ್ಬಿಸಿರುವ ಕೊರೊನಾ ವೈರಸ್ ಸೋಂಕು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ತೀವ್ರ ಆತಂಕ ಹುಟ್ಟಿಹಾಕಿದೆ.

ಪ್ರತಿನಿತ್ಯ ಸುಮಾರು ಐದು ಲಕ್ಷ ಪ್ರಯಾಣಿಕರು ಪ್ರಯಾಣಿಸುವ ನಮ್ಮ ಮೆಟ್ರೋ ಕೂಡ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದೆ. ಕೊರೊನಾ ಆತಂಕದಿಂದ ಕಳೆದ ನಾಲ್ಕಾರು ದಿನಗಳಿಂದ ನಮ್ಮ ಮೆಟ್ರೋ ಪ್ರಯಾಣಿಕ ಸಂಖ್ಯೆಯಲ್ಲೂ ಗಣನೀಯ ಕುಸಿತ ಕಂಡಿದೆ.

ಮೆಟ್ರೋದಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ಮಾರ್ಡ್ ಕಾರ್ಡ್ ಬಳಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ ಸಂಶೋಧಕರೊಬ್ಬರು ಸ್ಮಾರ್ಟ್ ಕಾರ್ಡ್ ಸೋಂಕು ಮುಕ್ತವಾಗಿ ಬಳಸುವ ವಿಧಾನವನ್ನು ತಿಳಿಸಿದ್ದಾರೆ.

Coronavirus; Important Instructions To Metro Smart Card Users

''ಕೊರೊನಾ ವೈರಸ್‌ ಪ್ಲಾಸ್ಟಿಕ್‌ ವಸ್ತುಗಳಲ್ಲೇ ಹೆಚ್ಚು ಹೊತ್ತು ಅಂದರೆ ಒಂದು ದಿನಕ್ಕಿಂತಲೂ ಹೆಚ್ಚು ದಿನ ಜೀವಂತ ಇರಬಹುದಾಗಿದೆ. ಹಾಗಾಗಿ ಪ್ಲಾಸ್ಟಿಕ್ ಆಧಾರಿತ ಮೆಟ್ರೋ ಕಾರ್ಡ್‌ನ್ನು ಸೆನ್ಸಾರ್ ಯಂತ್ರಕ್ಕೆ ಉಜ್ಜುವಾಗ ವೈರಸ್ ಸೋಂಕು ತಗಲಬಹುದು. ಹಾಗಾಗಿ ಕಾರ್ಡ್ ಬಳಕೆದಾರರು ಹುಶಾರಾಗಿ ಕಾರ್ಡ್ ಬಳಸಬೇಕು. ಇದು ಮೈಕ್ರೋ ಸೆನ್ಸಾರ್ ಚಿಪ್ ಆಧರಿತ ಕಾರ್ಡ್ ಆಗಿರುವುದರಿಂದ ಸೆನ್ಸಾರ್ ಯಂತ್ರಕ್ಕೆ ಸುಮಾರು ಕನಿಷ್ಠ 2 ರಿಂದ 2 ಸೆಂಟಿ ಮೀಟರ್‌ನಷ್ಟು ಮೇಲೆ ಹಿಡಿದು ಕಾರ್ಡ್ ತೋರಿಸಬೇಕು. ಇದು ಸಾಧ್ಯವಿದೆ'' ಎಂದು ಗುರುಗಾಂವ್‌ನ ಪೋರ್ಟಿಸ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ನಿರಂಜನ್ ನಾಯಕ್ ತಿಳಿಸಿದ್ದಾರೆ

English summary
Coronavirus; Important Instruction To Metro Smart Card Users. al leats be gap between metro smart card and smart card machine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X