• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಎಷ್ಟು ಜನ ಕ್ವಾರಂಟೈನ್‌ನಲ್ಲಿದ್ದಾರೆ ಗೊತ್ತಾ?

|

ಬೆಂಗಳೂರು, ಮೇ 12: ಕಳೆದ ಒಂದು ವಾರದಿಂದ ಸಿಲಿಕಾನ್‌ ಸಿಟಿಯಲ್ಲಿ ಕೊರೊನಾ ವೈರಸ್‌ ನಿಯಂತ್ರಣದಲ್ಲಿದೆ. ಹೊಂಗಸಂದ್ರ ಪ್ರಕರಣದ ನಂತರ ಅಷ್ಟು ದೊಡ್ಡ ಮಟ್ಟದ ಕೇಸ್‌ಗಳು ಪತ್ತೆಯಾಗಿಲ್ಲ. ಹಾಗಂತ ಬೆಂಗಳೂರಿಗೆ ಗಂಡಾಂತರ ತಪ್ಪಿತು ಎನ್ನುವಂತಿಲ್ಲ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಯಾವುದೇ ಕ್ಷಣದಲ್ಲೂ ಹೊಸ ಕೇಸ್‌ಗಳಲ್ಲಿ ದಿಢೀರ್ ಏರಿಕೆ ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಈಗ ಕ್ವಾರೆಂಟೈನ್‌ನಲ್ಲಿರುವವರ ಬಗ್ಗೆ ಆತಂಕ ಹೆಚ್ಚಿಸಿದೆ.

ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್!

ಹೌದು, ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕ್ವಾರೆಂಟೈನ್‌ನಲ್ಲಿದ್ದಾರೆ. ಖುದ್ದು ಆರೋಗ್ಯ ಇಲಾಖೆ ನಗರದಲ್ಲಿ ಕ್ವಾರೆಂಟೈನ್ ಮಾಡಿರುವವರ ಸಂಖ್ಯೆ 1019. ಇಷ್ಟು ಜನರ ಕುರಿತು ಆತಂಕವನ್ನು ಸದ್ಯಕ್ಕೆ ದೂರ ಮಾಡುವಂತಿಲ್ಲ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಇದರಲ್ಲಿ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು 393 ಮಂದಿ ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದವರು 626 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ 1019 ಜನರ ತಪಾಸಣೆಯನ್ನು ಮಾಡಬೇಕಾಗಿದೆ.

ಕ್ವಾರಂಟೈನ್‌ ಮಾಡಿದ 12ನೇ ದಿನಕ್ಕೆ ಇವರನ್ನು ಸ್ವಾಬ್ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ಆ ವರದಿ ಬಂದ ಬಳಿಕವಷ್ಟೇ ಕೊರೊನಾ ಬಗ್ಗೆ ಮಾಹಿತಿ ತಿಳಿಯಲಿದೆ. ಹೀಗಾಗಿ ಕ್ವಾರಂಟೈನ್‌ನಲ್ಲಿರುವ ಮೇಲೆ ಆರೋಗ್ಯ ಇಲಾಖೆ ಮತ್ತು ಪಾಲಿಕೆ ನಿಗಾ ವಹಿಸಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಇನ್ನುಳಿದಂತೆ ಬೆಂಗಳೂರಿನಲ್ಲಿ 178 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 91 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 79 ಜನರ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 7 ಮಂದಿ ಕೊವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
1019 People still quarantine in bengaluru, after 12 days thay all going to swab test. once report come then we will sent them: Bengaluru Health Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X