ಬೆಂಗಳೂರಿನಲ್ಲಿ 395 ಪೊಲೀಸರಿಗೆ ಕೊರೊನಾ, 20 ಠಾಣೆ ಸೀಲ್‌ಡೌನ್

ಬೆಂಗಳೂರು, ಜುಲೈ 9: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ನಿನ್ನೆ ಒಂದೇ ದಿನ 1148 ಮಂದಿಗೆ ಕೊವಿಡ್ ಸೋಂಕು ದೃಢವಾಗಿದೆ. ಈ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12509ಕ್ಕೆ ಏರಿಕೆಯಾಗಿದೆ.

Recommended Video

      WHO ಹಾಡಿ ಹೊಗಳಿದ ಚೀನಾ | Oneindia Kannada

      ಬೆಂಗಳೂರು ಪೊಲೀಸ್ ಇಲಾಖೆಗೂ ಕೊರೊನಾ ಭೀತಿ ಬೆಂಬಿಡದೆ ಕಾಡುತ್ತಿದೆ. ಸತತವಾಗಿ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗುತ್ತಿದೆ. ಹಲವು ಕಡೆ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗುತ್ತಿದೆ.

      ಜುಲೈ 9ರ ವರದಿಯಂತೆ ಬೆಂಗಳೂರಿನಲ್ಲಿ 395 ಜನ ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಉಳಿದ 390 ಜನರು ವಿವಿಧ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಇಲ್ಲಿಯವರೆಗೂ ಸಿಲಿಕಾನ್ ಸಿಟಿಯಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಠಾಣೆಗಳು ಸೀಲ್‌ಡೌನ್ ಆಗಿದೆ. ವೈಟ್‌ಫೀಲ್ಡ್, ಶಿವಾಜಿನಗರ, ಕೋರಮಂಗಲ ಸೇರಿದಂತೆ ನಗರ ಹಲವು ಸ್ಟೇಷನ್ ಬಂದ್ ಆಗಿದೆ. ನೂರಾರು ಪೊಲೀಸರು ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.

      Coronavirus Cases, Bengaluru Police: 395 Total Cases, 5 Deaths, 20 Stations Sealed Down

      ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಪೊಲೀಸರಿಗೆ ಕೊವಿಡ್ ತಗುಲಿದೆ. ಅದರಲ್ಲಿ ಮುಂಬೈ ನಗರದಲ್ಲಿ ಮಾತ್ರ 2500ಕ್ಕಿಂತ ಹೆಚ್ಚು ಸಿಬ್ಬಂದಿಗೆ ಕೊವಿಡ್ ಗೆ ತುತ್ತಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಪೊಲೀಸರು ಕೊರೊನಾಗೆ ಸಿಲುಕಿಕೊಂಡಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ.

      ಇನ್ನು ಕರ್ನಾಟಕದಲ್ಲಿ ಕೊವಿಡ್ ಸೋಂಕಿನಿಂದ ಮೃತಪಟ್ಟ ಪೊಲೀಸ್ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ದಾಸರಹಳ್ಳಿ ಜೆಡಿಸ್ ಶಾಸಕ ಆರ್.ಮಂಜುನಾಥ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+