ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವೈರಸ್ ಭಯ; ನಮ್ಮ ಮೆಟ್ರೋ ಸಂಚಾರವೂ ರದ್ದು!

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಪ್ಯೂ ಗೆ ಕರೆ ನೀಡಿದ್ದಾರೆ.

ಇದಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಕೂಡ ಮಾರ್ಚ್ 22 ರಂದು ಭಾನುವಾರ ಮೆಟ್ರೋ ಓಡಿಸದಿರಲು ನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಎಂಆರ್‌ಸಿಎಲ್, ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ. ಜನರೂ ಕೂಡ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದೆ.

ಕೊರೊನಾ ಎಫೆಕ್ಟ್; ರಾಜ್ಯದಲ್ಲಿ ಬಾರ್ ಬಂದ ಮಾಡಲು ಸಿಎಂ ಆದೇಶ!ಕೊರೊನಾ ಎಫೆಕ್ಟ್; ರಾಜ್ಯದಲ್ಲಿ ಬಾರ್ ಬಂದ ಮಾಡಲು ಸಿಎಂ ಆದೇಶ!

ಅಲ್ಲದೇ ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಅನುಸರಿಸಿ ಎಂದು ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸೂಚನೆ ನೀಡಿದೆ.

Coronavirus Scare: Namma Metro Ban March 22 Rails

ಅತಿ ತುರ್ತು ಅವಶ್ಯಕತೆಗಳಿಗಾಗಿ ಮೆಟ್ರೋ ಪ್ರಯಾಣ ನಡೆಸಬೇಕು, ಅನವಶ್ಯಕ ಪ್ರಯಾಣಕ್ಕೆ ಬ್ರೇಕ್ ಹಾಕಿ, ಸರ್ಕಾರದ ನಿಯಮಾವಳಿಗಳ್ನು ಪಾಲಿಸಿ, ಥರ್ಮಲ್ ಸ್ಕ್ಯಾನಿಂಗ್‌ಗೆ ಸಹಕರಿಸಿ, ಮೆಟ್ರೋ ನಿಲ್ದದಾಣದಲ್ಲಿ ಸಹ ಪ್ರಯಾಣಿಕರ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೇ ರೈಲು ನಿಲುಗಡೆ ಆಗದಿರಬಹುದು ಎಂದು ಎಚ್ಚರಿಕೆ ನೀಡಿದೆ.

English summary
Coronavirus Scare: Namma Metro Ban March 22 Rails. BMRCL Tweet On Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X