ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 3ನೇ ಅಲೆ ಭೀತಿ: ಕರ್ನಾಟಕದಲ್ಲಿ ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆ

|
Google Oneindia Kannada News

ಬೆಂಗಳೂರು, ಮೇ 24: ಕರ್ನಾಟಕದಲ್ಲಿ ಇನ್ನೂ ಕೊರೊನಾ ವೈರಸ್ 2ನೇ ಅಲೆ ತಾಂಡವಾಡುತ್ತಿದೆ. ಆದರೂ ದಾಖಲೆಯ ಸಂಖ್ಯೆಯಲ್ಲಿ ಮಕ್ಕಳಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ ಆಗಲೇ ಕೋವಿಡ್ 3ನೇ ಅಲೆ ಪ್ರಾರಂಭವಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.

ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸುತ್ತಿದ್ದು, ಕೊರೊನಾ ಮೊದಲ ಅಲೆಗಿಂತ 2ನೇ ಅಲೆಯ ವೇಳೆ ಮಕ್ಕಳಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ನೇತೃತ್ವದಲ್ಲಿ ಕಾರ್ಯಪಡೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಕೋವಿಡ್ ಆರೈಕೆ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ.

ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ! ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!

ಮಾರ್ಚ್ 2020 ಮತ್ತು ಸೆಪ್ಟೆಂಬರ್ 2020ರ ನಡುವೆ ಕೊರೊನಾ ಮೊದಲ ಅಲೆ ಹೆಚ್ಚಾಗಿದ್ದಾಗ, ಕರ್ನಾಟಕದಲ್ಲಿ 10 ವರ್ಷದೊಳಗಿನ ಮಕ್ಕಳಲ್ಲಿ 19,378 ಪ್ರಕರಣಗಳು ವರದಿಯಾಗಿದ್ದವು. ಅಂದಿನಿಂದ 2021ರ ಮೇ ತಿಂಗಳವರೆಗೆ ಈ ವಯಸ್ಸಿನ 49,257 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 2021ರ ಮೇ 20 ರವರೆಗೆ 10 ವರ್ಷದೊಳಗಿನ ಒಟ್ಟು 68,635 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ.

Coronavirus 3rd Wave Fear: Set Up Of Special Child Care Centers In Karnataka


"ವೃದ್ಧರೂ ಸೇರಿದಂತೆ ಹೆಚ್ಚಿನ ಮಕ್ಕಳು ಭವಿಷ್ಯದ ಕೊರೊನಾ ಅಲೆಗಳಲ್ಲಿ ಸೋಂಕಿಗೆ ಒಳಗಾಗುತ್ತಾರೆ. ಆದರೆ ಕಿರಿಯ ವಯಸ್ಸಿನವರಲ್ಲಿ ಯಾವ ಪ್ರಮಾಣದ ತೀವ್ರವಾದ ರೋಗಲಕ್ಷಣ ಹೊಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ'' ಎಂದು ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಗಿರಿಧರ್ ಬಾಬು ಹೇಳುತ್ತಾರೆ.

ಈ ಪ್ರಕರಣವು 10-19 ವಯಸ್ಸಿನವರಲ್ಲಿಯೂ ಕಂಡುಬರುತ್ತಿದ್ದು, ಮಾರ್ಚ್ 2020 ರಿಂದ ಸೆಪ್ಟೆಂಬರ್ 2020 ರವರೆಗೆ, 41,895 ಮಕ್ಕಳು ಕೊರೊನಾ ವೈರಸ್‌ ಪಾಸಿಟಿವ್ ಆಗಿದ್ದರೆ, ಅಂದಿನಿಂದ 1,31,391 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ, ಇದುವರೆಗೆ ಒಟ್ಟು 1,73,286ಕ್ಕೆ ಈ ಸಂಖ್ಯೆ ತಲುಪಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಮಾತನಾಡಿ, ಸೋಂಕಿತ ಮಕ್ಕಳನ್ನು ನೋಡಿಕೊಳ್ಳುವ ದಾರಿಗಳನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

"ನಮ್ಮ ಮಕ್ಕಳು ತೊಂದರೆ ಅನುಭವಿಸುವುದನ್ನು ನಾವು ಬಯಸುವುದಿಲ್ಲ. ಸೋಂಕಿತ ಮಕ್ಕಳನ್ನು ಹೇಗೆ ಕಾಳಜಿ ವಹಿಸಬೇಕು ಎಂದು ನಾವು ನೋಡುತ್ತಿದ್ದೇವೆ. ಅಲ್ಲದೆ, ಕೊರೊನಾ ವೈರಸ್‌ಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಗುವಿಗಾಗಿ ನಮ್ಮ ಇಲಾಖೆಯು ರಾಜ್ಯದ 30 ಜಿಲ್ಲೆಗಳಲ್ಲಿ ಮಕ್ಕಳ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸುತ್ತಿದೆ. ಮೊರಾರ್ಜಿ ದೇಸಾಯಿ ಶಾಲೆ ಅಥವಾ ರಾಣಿ ಚೆನ್ನಮ್ಮ ಶಾಲೆಗಳು ಮತ್ತು ನಮ್ಮೊಂದಿಗೆ ಕೆಲಸ ಮಾಡುವ ಅಥವಾ ವಿಶೇಷ ಶಾಲೆಗಳನ್ನು ನಡೆಸುವ ಎನ್‌ಜಿಒಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ "ಎಂದು ಜೊಲ್ಲೆ ಹೇಳಿದರು.

English summary
The government of Karnataka has taken steps to set up Covid-19 special care centers in all districts as Covid-19 cases reported in a large number of children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X