ಬೆಂಗಳೂರಲ್ಲಿ ಕೊರೊನಾ ಚಿಕಿತ್ಸೆಗೆ ಕ್ಯಾಂಪ್: ಕರವೇ ಆಕ್ರೋಶ
ಬೆಂಗಳೂರು, ಫೆಬ್ರವರಿ 13: ಮಾರಣಾಂತಿಕ ಕೊರೊನಾ ರೋಗಕ್ಕೆ ಹೆದರಿ ದೇಶದಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಕೇಂದ್ರ ಸರ್ಕಾರವು ನಗರದ ಯಲಹಂಕ ಬಿಎಸ್ಸೆಫ್ ಕೇಂದ್ರದಲ್ಲಿ ಶಂಕಿತ ಸೋಂಕಿತರಿಗೆ ತುರ್ತಾಗಿ ಅಗತ್ಯ ಪರೀಕ್ಷೆ ಹಾಗೂ ಚಿಕಿತ್ಸೆ ಒದಗಿಸುವ ಸಲುವಾಗಿ ಯಲಹಂಕದಲ್ಲಿ ಶಿಬಿರಗಳನ್ನು ಏರ್ಪಡಿಸಿದೆ.
ದೇಶದಲ್ಲಿ ಹೆಚ್ಚು ವಿದೇಶಿ ಪ್ರಯಾಣಿಕರು ಆಗಮಿಸುತ್ತಿದ್ದು, ಚೀನಾದಿಂದ ಬಂದ 300 ಜನರಿಗೆ ನೆಲೆ ಕಲ್ಪಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ಆದೇಶಿಸಿದೆ.
ಯಲಹಂಕ ಬಿಎಸ್‌ಎಫ್ ಕೇಂದ್ರದಲ್ಲಿ ವೈದ್ಯಕೀಯ ಶಿಬಿರಕ್ಕೆ ಸಿದ್ಧತೆ ಮಾಡಿಕೊಂಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ವಿರೋಧಿಸಿದ್ದಾರೆ.

ಶಂಕಿತ ಸೋಂಕಿತ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ
ಭಾರಿ ಸಂಖ್ಯೆಯ ವಿದೇಶಿಗರು ಆಗಮಿಸುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಶಂಕಿತ ಸೋಂಕಿತರನ್ನು ತುರ್ತು ಪರೀಕ್ಷೆ ಹಾಗೂ ಚಿಕಿತ್ಸೆಗೆ ಒಳಪಡಿಸಲು ಯಲಹಂಕ ಬಿಎಸ್‌ಎಫ್ ಕೇಂದ್ರದಲ್ಲೂ ವೈದ್ಯಕೀಯ ಶಿಬಿರ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ದೃಢಪಟ್ಟಿಲ್ಲ
ಇದುವರೆಗೂ ರಾಜ್ಯದಲ್ಲಿ ಕೊರೊನಾ ವೈರಸ್ ದೃಢಪಟ್ಟಿಲ್ಲ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕಡೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬಾರದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಮತ್ತಿಬ್ಬರು ಭಾರತೀಯರಿಗೆ ಸೋಂಕು
ಓರ್ವ ಕನ್ನಡಿಗ ಸೇರಿ 138 ಭಾರತೀಯರು ಹಾಗೂ 3700 ಪ್ರವಾಸಿಗರು ಇರುವ ಜಪಾನ್ ಡೈಮಂಡ್ ಪ್ರಿನ್ಸ್ ಹಡಗಿನಲ್ಲಿ ಮತ್ತೆ 39 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ ಇಬ್ಬರು ಭಾರತೀಯರಾಗಿದ್ದಾರೆ. ಇದರೊಂದಿಗೆ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

ಜಪಾನ್ ಪ್ರವಾಸಿ ಹಡಿಗಿನಲ್ಲಿ ಇರುವವರೆಷ್ಟು
ಜಪಾನ್‌ನ ಪ್ರವಾಸಿ ಹಡಗಿನಲ್ಲಿ 132 ಭಾರತೀಯ ಸಿಬ್ಬಂದಿ ಮತ್ತು 6 ಭಾರತೀಯ ಪ್ರವಾಸಿಗರು ಇದ್ದಾರೆ. ಈ ಪೈಕಿ ಯಾವ ಭಾರತೀಯ ಸಿಬ್ಬಂದಿಗೆ ಸೋಂಕು ತಗುಲಿದೆ ಎಂಬುದರ ಮಾಹಿತಿ ಬಹಿರಂಗವಾಗಿಲ್ಲ.











Click it and Unblock the Notifications