India
 • search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ: ಒಂದು ಗುಡ್ ನ್ಯೂಸ್, ಇನ್ನೊಂದು ಬ್ಯಾಡ್ ನ್ಯೂಸ್

|
Google Oneindia Kannada News

ಬೆಂಗಳೂರು, ಜೂನ್ 5: ಅಂತೂ ಇಂತೂ ಕೊರೊನಾ ಎರಡನೇ ಅಲೆಯ ಆರ್ಭಟ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಆದರೆ, ಸಾವಿನ ಸಂಖ್ಯೆ ಇಳಿಕೆಯಾಗದೇ ಇರುವುದು ಆತಂಕದ ವಿಚಾರಾಗಿದೆ.

ಹೊಸ ಸೋಂಕಿತರ ಸಂಖ್ಯೆ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದ್ದು, ಜೂನ್ ನಾಲ್ಕರಂದು 3,221 ಕೇಸ್ ದಾಖಲಾಗಿದೆ. ಇನ್ನು, ಒಂದೇ ದಿನಕ್ಕೆ 206 ಜನ ಮೃತ ಪಟ್ಟಿದ್ದಾರೆ.

 ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ! ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ!

ರಾಜ್ಯವನ್ನು ಅಲ್ ಲಾಕ್ ಮಾಡಲು ಕೇಂದ್ರ ಸರಕಾರ ಕೆಲವೊಂದು ಷರತ್ತುಗಳನ್ನು ಹಾಕಿತ್ತು ಎಂದು ವರದಿಯಾಗಿತ್ತು. ಅದರಲ್ಲಿ, ಪಾಸಿಟಿವಿಟಿ ರೇಟ್ ಶೇ.ಐದಕ್ಕಿಂತ ಕಮ್ಮಿ ಇರಬೇಕೆನ್ನುವುದು.

ಈಗ, ಬೆಂಗಳೂರು ನಗರ ಆ ನಿಟ್ಟಿನಲ್ಲಿ ಸಾಗುತ್ತಿದ್ದು, ಇನ್ನೊಂದು ವಾರದ ಲಾಕ್ ಡೌನ್ ಮುಗಿದ ನಂತರ, ಐದಕ್ಕಿಂತ ಕಮ್ಮಿ ಇಳಿಯುವ ಸಾಧ್ಯತೆಯಿದೆ. ಒಂದೆಡೆ ನೆಮ್ಮದಿ, ಇನ್ನೊಂದೆಡೆ ಆತಂಕ, ಮುಂದೆ ಓದಿ..

2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು

 ಹೋಮ್ ಐಷೋಲೇಷನಲ್ಲಿ ಇರಲು ಆರೋಗ್ಯ ಇಲಾಖೆ ಅನುಮತಿ ನೀಡುತ್ತಿಲ್ಲ

ಹೋಮ್ ಐಷೋಲೇಷನಲ್ಲಿ ಇರಲು ಆರೋಗ್ಯ ಇಲಾಖೆ ಅನುಮತಿ ನೀಡುತ್ತಿಲ್ಲ

ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಅದರಲ್ಲಿ ಪ್ರಮುಖ ಕಾರಣಗಳಲ್ಲಿ ಒಂದು, ಐವತ್ತು ವರ್ಷ ಮೇಲ್ಪಟ್ಟವರಿಗೆ ಸೋಂಕು ತಗಲಿದರೆ, ಅಂತವರನ್ನು ಹೋಮ್ ಐಷೋಲೇಷನಲ್ಲಿ ಇರಲು ಆರೋಗ್ಯ ಇಲಾಖೆ ಅನುಮತಿ ನೀಡುತ್ತಿಲ್ಲ.

 ಗಣನೀಯ ಪ್ರಮಾಣದಲ್ಲಿ ಸೋಂಕು ಇಳಿಕೆ, ಸದ್ಯ ಇದು ಶೇ. 7ರ ಆಸುಪಾಸಿನಲ್ಲಿದೆ

ಗಣನೀಯ ಪ್ರಮಾಣದಲ್ಲಿ ಸೋಂಕು ಇಳಿಕೆ, ಸದ್ಯ ಇದು ಶೇ. 7ರ ಆಸುಪಾಸಿನಲ್ಲಿದೆ

ಕಳೆದ ಹತ್ತು ದಿನಗಳಿಂದ ಪಾಸಿಟಿವಿಟಿ ರೇಟ್ ದಿನಾ ಒಂದೊಂದೆ ಪರ್ಸೆಂಟ್ ಕಮ್ಮಿಯಾಗುತ್ತಿದೆ. ಏಪ್ರಿಲ್ ಆರಂಭದಲ್ಲಿ ಶೇ. 9ರಷ್ಟಿದ್ದ ಇದು, ಮೇ ಮೊದಲ ವಾರದಲ್ಲಿ ಶೇ. 39ಕ್ಕೆ ಏರಿತ್ತು. ಈಗ ಮತ್ತೆ ಗಣನೀಯ ಪ್ರಮಾಣದಲ್ಲಿ ಸೋಂಕು ಇಳಿಕೆಯಾಗುತ್ತಿದ್ದು, ಸದ್ಯ ಇದು ಶೇ. 7ರ ಆಸುಪಾಸಿನಲ್ಲಿದೆ.

 ಮೃತ ಪಡುತ್ತಿರುವವರ ಸಂಖ್ಯೆ ಇನ್ನೂ ಇನ್ನೂರರ ಮೇಲಿದೆ

ಮೃತ ಪಡುತ್ತಿರುವವರ ಸಂಖ್ಯೆ ಇನ್ನೂ ಇನ್ನೂರರ ಮೇಲಿದೆ

ಆದರೆ, ಮೃತ ಹೊಂದುತ್ತಿರುವವರ ಸಂಖ್ಯೆ ಹತೋಟಿಗೆ ಸಿಗುತ್ತಿಲ್ಲ. ರೋಗ ಲಕ್ಷಣ ಹೊಂದಿರುವವರ ಅಸಡ್ಡೆ, ಸೋಂಕು ತೀವ್ರವಾದ ನಂತರ ಆಸ್ಪತ್ರೆಗೆ ದೌಡಾಯಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೃತ ಪಡುತ್ತಿರುವವರ ಸಂಖ್ಯೆ ಇನ್ನೂ ಇನ್ನೂರರ ಮೇಲಿದೆ.

  ಲೆಕ್ಕ ಕೊಟ್ಟು DC Rohini Sindhuri ತಿರುಗೇಟು ಕೊಟ್ಟ Shilpa Nag | Oneindia Kannada
   ಜೂನ್ ಮೊದಲ ವಾರದಲ್ಲಿ ಅದು ಶೇ. 6.07ಕ್ಕೆ ಏರಿರುವುದು ಗಂಭೀರ ವಿಚಾರ

  ಜೂನ್ ಮೊದಲ ವಾರದಲ್ಲಿ ಅದು ಶೇ. 6.07ಕ್ಕೆ ಏರಿರುವುದು ಗಂಭೀರ ವಿಚಾರ

  ಏಪ್ರಿಲ್ ಆರಂಭದಲ್ಲಿ ಮೃತ ಪಡುತ್ತಿರುವವರ ಪ್ರಮಾಣ ಸರಾಸರಿ ಶೇ. 0.46ರಷ್ಟಿದ್ದದ್ದು ಈಗ, ಅಂದರೆ ಜೂನ್ ಮೊದಲ ವಾರದಲ್ಲಿ ಅದು ಶೇ. 6.07ಕ್ಕೆ ಏರಿರುವುದು ಗಂಭೀರ ವಿಚಾರವಾಗಿದೆ. ಐಸಿಯುನಲ್ಲಿ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತ ಪಡುತ್ತಿದ್ದಾರೆ.

  English summary
  Corona In Bengaluru, Positivity Rate Decreasing And Death Rate Increasing.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X