ಟಿ.ಆರ್. ಮಿಲ್ ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಿದ ಸಿಬ್ಬಂದಿ !
ಬೆಂಗಳೂರು, ಮೇ. 03: ಬೆಂಗಳೂರಿನಲ್ಲಿ ಕೊರೊನಾ ಸಾವುಗಳಿಗೆ ನಿರ್ಮಿಸಿರುವ ಸ್ಮಶಾನಗಳು ಕೂಡ ಹೌಸ್ ಫುಲ್ ಬೋರ್ಡ್ ಆಗಿವೆ. ಚಾಮರಾಜಪೇಟೆಯಲ್ಲಿರುವ ಟಿ.ಆರ್. ಮಿಲ್ ಸೇರಿದಂತೆ ನಗರದಲ್ಲಿರುವ ಪ್ರಮುಖ ಸ್ಮಶಾನಗಳು ಕೂಡ ಸಿನಿಮಾ ಚಿತ್ರಮಂದಿರಗಳ ಮಾದರಿಯಲ್ಲಿ ಹೌಸ್ ಫುಲ್ ನಾಮ ಫಲಕ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದಡೆ ನಗರದ ಹೊರವಲಯದಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಸ್ಮಶಾನಗಳಲ್ಲಿ ಮೃತ ದೇಹಗಳನ್ನು ಸುಡದ ಕಾರಣ ಹದ್ದು ಮತ್ತು ನಾಯಿಗಳು ಎಳೆದು ಕೊಂಡು ಹೋಗಿ ತಿನ್ನುವಂತಾಗಿದೆ.
ಚಾಮರಾಜಪೇಟೆಯಲ್ಲಿರುವ ಟಿ.ಆರ್. ಮಿಲ್ ರುದ್ರಭೂಮಿಯಲ್ಲಿ ದಿನಕ್ಕೆ ಕೇವಲ 20 ಮೃತ ದೇಹಗಳನ್ನಷ್ಟೇ ಸುಡಲಿಕ್ಕೆ ಅವಕಾಶವಿದೆ. ಆದರೆ ಭಾನುವಾರ ಒಂದೇ ದಿನ ಇಲ್ಲಿ 40 ಕೊವಿಡ್ ಮೃತದೇಹಗಳನ್ನು ಸಾಗಿಸಲಾಗಿದೆ. ಇಷ್ಟು ಮೃತ ದೇಹಗಳನ್ನು ದಹನ ಮಾಡಲು ಎರಡು ದಿನ ಬೇಕಾಗಿದ್ದು, ಮೃತ ದೇಹ ಇಡಲು ಜಾಗವಿಲ್ಲ. ಹೀಗಾಗಿ ಹೌಸ್ ಫುಲ್ ಬೋರ್ಡ್ ಹಾಕುವ ಮೂಲಕ ಸೋಮವಾರ ಮೃತ ದೇಹ ಸ್ವೀಕರಿಸಲು ಸ್ಮಶಾನ ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಟಿ.ಆರ್ ಮಿಲ್ ಚಿತಾಗಾರಕ್ಕೆ ಬರುತ್ತಿರುವ ಮೃತ ದೇಹಗಳನ್ನು ಬೇರಡೆಗೆ ವಾಪಸು ರವಾನಿಸಲಾಗುತ್ತಿದೆ. ಒಂದೆಡೆ ಆಕ್ಸಿಜನ್, ಬೆಡ್‌ಗೆ ಪರದಾಡುತ್ತಿರುವ ಜನರು ಇದೀಗ ಸ್ಮಶಾನ ಜಾಗಕ್ಕೂ ಒದ್ದಾಡುವಂತಾಗಿದೆ.

ಇನ್ನು ಬೆಂಗಳೂರಿನ ಹೊರ ವಲಯದಲ್ಲಿ ನಿರ್ಮಿಸಿರುವ ಸಾಮೂಹಿಕ ಸ್ಮಶಾನಗಳಲ್ಲಿ ಬೇರೆಯದ್ದೇ ಸಮಸ್ಯೆ ಎದುರಾಗಿದೆ. ತಾವರೆಕೆರೆ ಹಾಗೂ ಎಲಚಿಕುಪ್ಪೆ ಸಮೀಪದ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲಿಕ್ಕೆ ಸೂಕ್ತವಾದ ಸೌದೆ ಸಿಗುತ್ತಿಲ್ಲ. ಹೀಗಾಗಿ ಪೆಟ್ರೊಲ್ ಹಾಕಿ ಸುಡುತ್ತಿರುವ ಆರೋಪ ಕೇಳಿ ಬಂದಿದೆ. ಮಿಗಿಲಾಗಿ, ಕೆಲವು ಮೃತ ದೇಹಗಳನ್ನು ಸರಿಯಗಿ ಸುಡದ ಕಾರಣ ನಾಯಿಗಳು ಎಳೆದುಕೊಂಡು ಬಂದು ತಿನ್ನುವ ಭಯಾನಕ ಸಂಗತಿಯ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಹದ್ದುಗಳು ಮತ್ತು ನಾಯಿಗಳು ಅರೆ ಬೆಂದ ಮೃತ ದೇಹಗಳ ತುಣಕುಗಳನ್ನು ಎಳೆದು ಸಮೀಪದ ಮನೆಗಳ ಮುಂದೆ ಹಾಕುತ್ತಿವೆ. ಹೀಗಾಗಿ ಸ್ಮಶಾನದ ಅಕ್ಕ ಪಕ್ಕದಲ್ಲಿರುವ ಮನೆಯವರು ಈ ಭಯಾನಕ ದೃಶ್ಯಗಳನ್ನು ನೋಡಲಾಗದೇ ಮನೆಗಳನ್ನು ಖಾಲಿ ಮಾಡಿದ್ದಾರೆ.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ












Click it and Unblock the Notifications