ಕಾಂಗ್ರೆಸ್ ಗೂಂಡಾಗಿರಿ ಮೂಲಕ ಮೇಯರ್ ಸ್ಥಾನ ಹಿಡಿದಿದೆ: ಆರ್.ಅಶೋಕ್
ಬೆಂಗಳೂರು, ಸೆಪ್ಟೆಂಬರ್ 28: ಕಾಂಗ್ರೆಸ್ ಪಕ್ಷವು ಗೂಂಡಾಗಿರಿ ಮಾಡುವ ಮೂಲಕ ಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು.
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಭಾಗವಹಿಸಿದ್ದ ಅವರು, ಮೇಯರ್ ಆಯ್ಕೆಗೆ ತನ್ನ ಬಲ ಕಡಿಮೆಯಾದ ಕಾರಣ ಸಭಾತ್ಯಾಗ ಮಾಡಿ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾಜರಾತಿಯಲ್ಲಿ ನಮ್ಮ ಬಲ ಅವರಿಗಿಂತ ಕೇವಲ ಒಂದು ಮತ ಕಡಿಮೆ ಇದೆ ಎಂದು ಪ್ರತಿಪಾಧಿಸಿದ ಆರ್.ಅಶೋಕ್ ಅವರು, ಹಾಜರಾತಿಯಲ್ಲೂ ಸಹ ಕಾಂಗ್ರೆಸ್ ಗೋಲ್-ಮಾಲ್ ಮಾಡಿದೆ ಎಂದು ಆರೋಪಿಸಿದರು.

ಮೇಯರ್ ಚುನಾವಣೆ ಮತದಾನ ಪ್ರಕ್ರಿಯೆಗೂ ಮುನ್ನಾ ಬಿಬಿಎಂಪಿ ಯಲ್ಲಿ ಎರಡೂ ಪಕ್ಷಗಳ ಸದಸ್ಯರ ನಡುವೆ ಭಾರಿ ಜಟಾಪಟಿ ನಡೆಯಿತು. ಎರಡೂ ಪಕ್ಷದ ಸದಸ್ಯರು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದರು.
ತಮ್ಮ ಪರವಾಗಿ ಬೆಂಬಲ ಎಂದು ಗೊತ್ತಾದ ನಂತರ ಬಿಜೆಪಿಯು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಸಭಾತ್ಯಾಗ ಮಾಡಿತು. ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿ ಶೋಭಾ ಆಂಜಿನಪ್ಪ ಅವರನ್ನು ಆಯ್ಕೆ ಮಾಡಲಾಗಿತ್ತು.
ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿ ಆಯ್ಕೆಯಾದರೆ ಜೆಡಿಎಸ್‌ನ ಆರ್.ರಮೀಳಾ ಅವರು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.












Click it and Unblock the Notifications