DK Shivakumar: ಕಾಂಗ್ರೆಸ್‌ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ

ಬೆಂಗಳೂರು, ಮಾರ್ಚ್ 28: ಕರ್ನಾಟಕ ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಗಾಳಿ ಮತ್ತೆ ಬೀಸಿದೆ. ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ತರುವ ಮೂಲಕ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

2023ರಲ್ಲಿ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಬಳಿಕ ಕಾಂಗ್ರೆಸ್‌ನಯಲ್ಲಿ ಸಿಎಂ ಯಾರು? ಎಂಬ ಪ್ರಶ್ನೆ ಉದ್ಭವವಾಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ವೇಳೆ ಕಾಂಗ್ರೆಸ್ ವರಿಷ್ಠರು ಡಿಕೆ ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಅದರಂತೆ ಅವರನ್ನು ಡಿಸಿಎಂ ಮಾಡಲಾಯಿತು.

Congress Will Decided to Make Me As CM of Karnataka in Future Says DK Shivakumar

ಅರ್ಧ ಅವಧಿಗೆ ಒಬ್ಬ ಮುಖ್ಯಮಂತ್ರಿ ಸೂತ್ರದ ಆಧಾರದಲ್ಲಿ ಮನವೊಲಿಸಲಾಗಿದೆ ಎಂದೆಲ್ಲ ಆಗ ವರದಿ ಆದವು. ಅದರ ಪ್ರಕಾರ ಮುಂದಿನ ಎರಡೂವರೆ ವರ್ಷದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇದೀಗ ಒಂದು ವರ್ಷ ಪೂರೈಸುವ ಹೊತ್ತಿಗೆ ಸ್ವತಃ ಡಿಸಿಎಂ ಅವರೇ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.

ದೇವಸ್ಥಾನ ಅರ್ಚಕರಿಂದ ಪ್ರಾರ್ಥನೆ

ಎರಡೂವರೆ ವರ್ಷಗಳ ನಂತರ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಈವರೆಗೆ ಎಐಸಿಸಿ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಅರ್ಚಕರೊಬ್ಬರು ಶಿವಕುಮಾರ್‌ ಮುಖ್ಯಮಂತ್ರಿಗಳಾಗಲಿ, ದೇವರ ಅವರಿಗೆ ಆಶೀರ್ವಾದ ಕರಣಿಸಲಿ ಎಂದು ಪ್ರಾರ್ಥಿಸಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಅವರು ವಿಧಾನಸಭೆ ಚುನಾವಣೆ ಬಳಿಕ ಎದ್ದಿದ್ದ ಈ ವಿಚಾರವನ್ನು ಅವರು ಮುಚ್ಚಿಡದೇ ಬಹಿರಂಗವಾಗಿ ಮುನ್ನೆಲೆಗೆ ತರುತ್ತಿರುವುದು ಕುತೂಹಲ ಕೆರಳುವಂತೆ ಮಾಡಿದೆ.

Congress Will Decided to Make Me As CM of Karnataka in Future Says DK Shivakumar

ಸಿಎಂ ಆಗಬೇಕೆಂದು ಬಯಸಿದರೆ ತಪ್ಪೇನು?

ಅರ್ಚಕನು ಪ್ರಾರ್ಥನೆ ಮಾಡುವಾಗ ದೇವರ ಮುಂದೆ ತನ್ನ ಆಸೆಯನ್ನು ವ್ಯಕ್ತಪಡಿಸಿದರೆ ತಪ್ಪೇನು? ಪೂಜಾರಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ, ಅವರ ಅಡಿಯಲ್ಲಿ ಉಪಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದೇನೆ. ಜನರು ಡಿಕೆಶಿ ಸಿಎಂ ಆಗಬೇಕೆಂದು ಬಯಸಿದರೆ ತಪ್ಪೇನು. ಸಿಎಂ ಸ್ಥಾನ ನೀಡುವ ಬಗ್ಗೆ ಪಕ್ಷ ನಿರ್ಧರಿಸುತ್ತದೆ ಎಂದು ತಿಳಿಸಿದರು.

ಸದ್ಯ ನಾವೆಲ್ಲರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರ ಅವಧಿಯಲ್ಲಿ ರಾಜ್ಯ ಮತ್ತಷ್ಟು ಪ್ರಗತಿಯಾಗಬೇಕು ಎಂಬುದು ನಮ್ಮ ಆಸೆ ಎಂದು ಅವರು ಹೇಳಿದರು.

ನಮಗಾಗಿ ಪ್ರಾರ್ಥಿಸುವ ಬೆಂಬಲಿಗರು ಮತ್ತು ಅರ್ಚಕರು, ಜನರು ಇರುತ್ತಾರೆ. ಸಿಎಂ ಆಗಲಿ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗಾದರೆ ದೇವರದಲ್ಲಿ ಪ್ರಾರ್ಥಿಸದಂತೆ ನಾವು ತಡೆಬೇಕೆ?. ಅವರರವ ಇಷ್ಟಗಳನ್ನು ಕೇಳಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+