ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳು ರಸ್ತೆ ಗುಂಡಿ ಮುಚ್ಚುತ್ತಿರುವ ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

|
Google Oneindia Kannada News

ಬೆಂಗಳೂರು, ನವೆಂಬರ್‌ 22: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷವಾದ ಕಾಂಗ್ರೆಸ್‌ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯತೆಯನ್ನು ಒಂದೊಂದಾಗಿ ಎತ್ತಿ ಹಿಡಿಯುತ್ತಿದೆ. ಟ್ವೀಟ್‌ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುವ ಕಾಂಗ್ರೆಸ್‌ ಇದೀಗ ವಿದ್ಯಾರ್ಥಿ ರಸ್ತೆ ಗುಂಡಿ ಮುಚ್ಚುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಕರ್ನಾಟಕ ಕಾಂಗ್ರೆಸ್‌ ಟ್ವೀಟ್ ಖಾತೆಯಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ರಸ್ತೆ ಗುಂಡಿ ಮುಚ್ಚುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಶಾಲೆ ಎದುರಿಗೆ ಇರುವ ರಸ್ತೆಗುಂಡಿಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಾವೇ ಸ್ವತಃ ಮಣ್ಣು ತುಂಬಿಸಿ ಸರಿ ಪಡಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದು ಮೈಸೂರಿನ ಹುಣಸೂರು ಪ್ರದೇಶದ ಸರ್ಕಾರಿ ಶಾಲೆಯೊಂದರ ಬಳಿಯ ವಿಡಿಯೋ ಎನ್ನಲಾಗಿದೆ.

ಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು: ಎಚ್.ಡಿ ಕುಮಾರಸ್ವಾಮಿಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು: ಎಚ್.ಡಿ ಕುಮಾರಸ್ವಾಮಿ

ನಿಷ್ಪ್ರಯೋಜ ಸರ್ಕಾರದ ಬಂಡವಾಳ ಮಕ್ಕಳಿಗೂ ಅರ್ಥವಾಗಿ ರಸ್ತೆ ಗುಂಡಿಗಳನ್ನು ಮಕ್ಕಳೇ ಮುಚ್ಚುತ್ತಿದ್ದಾರೆ. ಮಕ್ಕಳು ಮಾಡುತ್ತಿರುವ ಈ ಕಾಮಗಾರಿಯನ್ನು ಸರ್ಕಾರವೇ ಮಾಡಿದ್ದಿದ್ದರೆ 40% ಕಮಿಷನ್ ಲೂಟಿ ಮಾಡಿ ಗುಂಡಿಗಳನ್ನು ಹಾಗೇ ಬಿಟ್ಟಿರುತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ಮಕ್ಕಳನ್ನಾದರೂ ನೋಡಿ ಬುದ್ಧಿ ಕಲಿಯಿರಿ ಎಂದು ಕಾಂಗ್ರೆಸ್‌ ವ್ಯಂಗ್ಯಮಾಡಿದೆ.

Congress Shares Video Of Students Filling Potholes In Karnataka

ಬಿಜೆಪಿಯ ಪ್ರಣಾಳಿಕೆಯ 40% ಅಂಶಗಳನ್ನು ಈಡೇರಿಸಿದ್ದರೂ ಕರ್ನಾಟಕವನ್ನು ನೋಡಿ ಸ್ವರ್ಗ ಲೋಕದ ಇಂದ್ರ ನಾಚಿಕೊಳ್ಳುತ್ತಿದ್ದ. ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಮೆಟ್ರೋಪಾಲಿಟನ್ ಯೋಜನಾ ಸಮಿತಿ ರಚಿಸುತ್ತೇವೆ ಎಂದಿತ್ತು ಬಿಜೆಪಿ. ಈಗ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ ಎಂದು ಕಾಂಗ್ರೆಸ್‌ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ.

ವಾಣಿ ವಿಲಾಸ ಜಲಾಶಯ ಅಭಿವೃದ್ಧಿಗೆ 738 ಕೋಟಿ ರೂ ಮೀಸಲು: ಬೊಮ್ಮಾಯಿವಾಣಿ ವಿಲಾಸ ಜಲಾಶಯ ಅಭಿವೃದ್ಧಿಗೆ 738 ಕೋಟಿ ರೂ ಮೀಸಲು: ಬೊಮ್ಮಾಯಿ

ಇನ್ನು ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಬಗ್ಗೆ ಕೂಡ ಕಾಂಗ್ರೆಸ್‌ ವ್ಯಂಗ್ಯವಾಡಿದೆ. ಶಾಲಾ ಕಾಲೇಜುಗಳಲ್ಲಿ ಡೆಸ್ಕ್, ಟೇಬಲ್‌ಗಳಿಲ್ಲದೆ ಚಾಪೆ ಹಾಸಿಕೊಂಡು ಕೂರುವ ಸ್ಥಿತಿ ಇದೆ. ಸರ್ಕಾರ ಮಾತ್ರ ಕೇಸರಿ ಬಣ್ಣ ಹೊಡೆಯಲು ಹೊರಟಿದೆ. ಮೂಲ ಸೌಕರ್ಯ ನೀಡದೆ ಶಿಕ್ಷಣ ವ್ಯವಸ್ಥೆಯನ್ನು ದುಸ್ಥಿತಿ ತಳ್ಳಿ ಯುವ ಸಮುದಾಯಕ್ಕೆ ಅನ್ಯಾಯ ಮಾಡುತ್ತಾ ಬಣ್ಣದ ಹಿಂದೆ ಬಿದ್ದಿರುವ ತಮಗೆ ಸ್ವಲ್ಪವೂ ಆತ್ಮಸಾಕ್ಷಿ ಕಾಡದೇ..? ಎಂದು ಪ್ರಶ್ನಿಸಿದೆ.

ಇನ್ನು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಕೂಡ ಮಕ್ಕಳು ರಸ್ತೆಯ ಗುಂಡಿ ಮುಚ್ಚುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸರ್ಕಾರವು ಶಾಲೆಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತರಾಗಿರುವಾಗ, ವಿದ್ಯಾರ್ಥಿಗಳು ಗುಂಡಿಗಳನ್ನು ತುಂಬುತ್ತಿದ್ದಾರೆ. ಇದರಿಂದ ಸರ್ಕಾರದ ಆದ್ಯತೆಗಳು ಏನು ಎನ್ನುವುದು ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಮಿತಿ ಮೀರುತ್ತಿದ್ದು, ನೂರಾರು ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ ಅನೇಕರು ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಲವಾರು ಪ್ರತಿಭಟನೆಗಳು ಹೋರಾಟಗಳು ನಡೆದರೂ ಕೂಡ ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಂಡಂತೆ ಕಾಣುತ್ತಿಲ್ಲ.

English summary
Karnataka Congress shares video of students filling potholes in Karnataka. Congress tweet against BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X