ಎಂಟಿಬಿ ನಾಗರಾಜ್, ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ದೂರು
ಬೆಂಗಳೂರು, ನವೆಂಬರ್ 21: ಹೊಸಕೋಟೆಯಲ್ಲಿ ಬಿಜೆಪಿ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಮೇಲೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡ ಹೇಮಂತ್ ಕುಮಾರ್ ದೂರು ನೀಡಿದ್ದಾರೆ. ಇದೇ ನವೆಂಬರ್ 18ರಂದು ಎಂಟಿಬಿ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಯಿಂದ 60 ಮೀಟರ್ ದೂರದಲ್ಲೇ ಅನುಮತಿ ಪಡೆಯದೇ ಬೃಹತ್ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Recommended Video
ಎಂಟಿಬಿ ಗೆ ಬಂಪರ್ ಆಫರ್ ಕೊಟ್ಟ ಯಡಿಯೂರಪ್ಪ | Oneindia Kannada

ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಗೆಲ್ಲಿಸಿದರೆ 24 ಗಂಟೆಯಲ್ಲಿ ಮಂತ್ರಿ ಆಗುತ್ತಾರೆ. ಹೋಸಕೋಟೆಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದೀನಿ ಎಂದು ಸಿಎಂ ಮತದಾರರಲ್ಲಿ ಪ್ರಭಾವ ಬೀರಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ಉಪ ಚುನಾವಣೆ ಡಿಸೆಂಬರ್ 5ರಂದು 15 ಕ್ಷೇತ್ರಹಳಿಗೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications