ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಹೊರದಬ್ಬಿದ್ದ ಕಂಡಕ್ಟರ್ ಅಮಾನತು

ಬೆಂಗಳೂರು, ನವೆಂಬರ್ 20: ಬಸ್ಸಿನಿಂದ ವಿದ್ಯಾರ್ಥಿನಿಯನ್ನು ಹೊರದಬ್ಬಿದ್ದ ಕಂಡಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿನಿಯು ಬಸ್ ಪಾಸ್ ಹೊಂದಿದ್ದು, ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದಳೆಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಿಂದ ಹೊರಕ್ಕೆ ದಬ್ಬಿದ್ದಾನೆ, ಇದೀಗ ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾಳೆ.

ವಿದ್ಯಾರ್ಥಿನಿ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ನವೆಂಬರ್ 11ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಊರಿಗೆ ಹೋಗಲು ಬಸ್‌ ಹತ್ತಿದಾಗ ಈ ಘಟನೆ ನಡೆದಿದೆ.

Conductor Who Pushed Student From The Bus Suspended

ಊರು ಕನಕಪುರಕ್ಕೆ ಹೋಗಲು ಕೆ.ಎಸ್.ಆರ್‌.ಟಿ.ಸಿ ಬಸ್ ಏರಿದ್ದಾಳೆ. ಆಗ ಆಕೆಯನ್ನು ಟಿಕೆಟ್ ಖರೀದಿಸುವಂತೆ ನಿರ್ವಾಹಕ ಕೇಳಿದ್ದಾನೆ. ಆದರೆ ತನ್ನ ಬಳಿ ಬಸ್ ಪಾಸ್ ಇರುವುದಾಗಿ ವಿದ್ಯಾರ್ಥಿನಿ ಉತ್ತರಿಸಿದ್ದಾಳೆ.

ಇದರಿಂದ ಸಿಟ್ಟುಕೊಂಡ ನಿರ್ವಾಹಕ, ಇದು ದೂರದ ಊರಿಗೆ ಪ್ರಯಾಣಿಸುವ ಬಸ್ಸು ಇದರಲ್ಲಿ ಪಾಸ್ ನಡೆಯುವುದಿಲ್ಲ ಖಡ್ಡಾಯವಾಗಿ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ. ತಾನು ಟಿಕೆಟ್ ತೆಗೆದುಕೊಳ್ಳುವುದಿಲ್ಲ, ಮುಂದಿನ ಸ್ಟಾಪ್‌ನಲ್ಲಿ ಇಳಿದುಬಿಡುತ್ತೇನೆ ಎಂದು ಭೂಮಿಕ ಮನವಿ ಮಾಡಿದ್ದಾಳೆ.

ಭೂಮಿಕಾ ಮನವಿಗೆ ಒಪ್ಪದ ನಿರ್ವಾಹಕ ಮಾರ್ಗಮಧ್ಯದಲ್ಲಿಯೇ ಇಳಿಯುವಂತೆ ಹೇಳಿದ್ದಾನೆ. ಆದರೆ ಇದಕ್ಕೆ ಭೂಮಿಕ ಒಪ್ಪದೇ ಇದ್ದಾಗ, ಆಕೆಯನ್ನು ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಶಿವಶಂಕರ್ ಅವರನ್ನು ಅಮಾನತುಗೊಳಸಿಸಲಾಗಿದೆ. ಈ ಕುರಿತು ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+