ಮಿಸೆಸ್ ಇಂಡಿಯಾ ಹೆಸರಲ್ಲಿ ವಂಚನೆ: ಸ್ಪರ್ಧಾಳುವಿಂದ ದೂರು

ಬೆಂಗಳೂರು, ಮಾರ್ಚ್ 24: ಮಿಸೆಸ್ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್ ಹೆಸರಲ್ಲಿ ಪ್ರತೀಸ್ ಈವೆಂಟ್ ಮತ್ತು ಮಿಸೆಸ್ ಇಂಡಿಯಾ ಪೇಜೆಂಟ್ ಅಂಡ್ ಪ್ರೊಡಕ್ಷನ್ ಪ್ರೈವೇಟ್ ಲಿ. ಆಯೋಜಕರು ಎಂದು ಸ್ಪರ್ಧಿಗಳಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಪರ್ಧಿಯೊಬ್ಬರು ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಹಾಲಕ್ಷ್ಮೀ ಲೇಔಟ್ ನಿವಾಸಿ ಮನೀಷ್ ಭಟ್ ಅವರು ನೀಡಿದ ದೂರಿನ ಮೇರೆಗೆ ಪ್ರತೀಸ್ ಈವೆಂಟ್ ನ ಪ್ರತಿಭಾ ಸೌಂಶಿಮಠ್ ಮತ್ತು ಮಿಸೆಸ್ ಇಂಡಿಯಾದ ಪೆಜೆಂಟ್ ಅಂಡ್ ಪ್ರೊಡಕ್ಷನ್ ನ ಆಯೋಜಕರಾದ ದೀಪಾಲಿ ಫಡ್ನಿಸ್ ವಿರುದ್ಧ ವಂಚನೆ ಮತ್ತು ಬೆದರಿಕೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲೇನಿದೆ: 2016ರಲ್ಲಿ ವಂಚಿತ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದರು. ಅದರಂತೆ ಮನೀಷ ಭಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮೊದಲ ಸುತ್ತಿನಲ್ಲಿ ಆಯ್ಕೆಯಾಗಿದ್ದರು. ಬಳಿಕ ಮುಂದಿನ ಸುತ್ತಿಗೆ ಅಯ್ಕೆಯಾಗಲು ಕಾರ್ಯಾಗಾರ ಮತ್ತು ತರಬೇತಿ ನೀಡಲು ನೋಂದಣಿ ಶುಲ್ಕ 20ಸಾವಿರ ಹಣವನ್ನು ವೆಬ್‌ಸೈಟ್ ಸಂಪರ್ಕಿಸಿ ಹಣ ಜಮೆ ಮಾಡಿಸಿಕೊಂಡಿದ್ದಾರೆ. ಆದರೆ, ಯಾವುದೇ ರೀತಿಯ ತರಬೇತಿ ನೀಡಿಲ್ಲ.

Complaint against Mrs India Karnataka organiser

ಇನ್ನು ಸೌಂದರ್ಯ ಸ್ಪರ್ಧೆ ವೀಕ್ಷಿಸಲು ಕುಟುಂಬದವರು 1500ರೂ ಕೊಟ್ಟು ಟಿಕೆಟ್ ಖರೀದಿಸಿದ್ದಾರೆ. ಆದರೆ, ಟಿಕೆಟ್ ಮೇಲೆ 20ರೂ ಮುದ್ರಿತವಾಗಿತ್ತು. ಇದನ್ನು ಆಯೋಜಕರಿಗೆ ಪ್ರಶ್ನಿಸಿದಾಗ ಮುದ್ರಣ ಸಮಸ್ಯೆ ಉಂಟಾಗಿದೆ ಎಂದು ಸಬೂಬು ಹೇಳಿದ್ದಾರೆ. ಆದರೆ ಕೆಲ ದಿನಗಳ ಬಳಿಕ ವಂಚನೆಗೆ ಒಳಗಾಗಿರುವುದು ಗೊತ್ತಾಯಿತು.

ಕೂಡಲೇ ವಾಣಿಜ್ಯ ತೆರಿಗೆ ಇಲಾಖೆಗೆ ದೂರು ನೀಡಲಾಗಿತ್ತು ಅಲ್ಲದೆ, ಸೌಂದರ್ಯ ಸ್ಪರ್ಧೆಯನ್ನು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭಿಸಿದಲ್ಲದೆ, ತಮಗೆ ಕಿರೀಟ ಧಾರಣೆ ಮಾಡುವಾಗ ವಿದ್ಯುತ್ ಕಡಿತಗೊಳ್ಳುವಂತೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+