BMTC: ನಮ್ಮ ಮೆಟ್ರೋ ಹಳದಿ ಮಾರ್ಗ ತೆರೆಯದಿದ್ದರೂ ಜನ ಸಂಚಾರ ಸಲೀಸು!
ಬೆಂಗಳೂರು, ಜುಲೈ 02: ನಗರದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಹೊಸ ಮೆಟ್ರೋ ಮಾರ್ಗ ತೆರೆಯುವುದನ್ನು ಸಾಕಷ್ಟು ಪ್ರಯಾಣಿಕರು ಎದುರು ನೋಡುತ್ತಿದ್ದಾರೆ. ಅನೇಕ ಸಲ ಗಡುವು ಮೀರಿದರೂ ಸಹಿತ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಿಲ್ಲ. ಹೀಗಿದ್ದರು ಸಹ ಬೊಮ್ಮಸಂದ್ರ, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಜನರು ಸಲೀಸಾಗಿ ಸಂಚಾರ ಮಾಡುತ್ತಿದ್ದಾರೆ. ಅದು ಹೇಗೆ ಅಂತಿರಾ? ಇಲ್ಲಿದೇ ವಿವರ.
ಬೆಂಗಳೂರು ನಮ್ಮ ಮೆಟ್ರೋ ಆರ್‌ವಿ.ರಸ್ತೆ- ಬೊಮ್ಮಸಂದ್ರವರೆಗೆ ಹಳದಿ ಮಾರ್ಗವನ್ನು ನಿರ್ಮಿಸಿದೆ. ಸುಮಾರು 18 ಕಿಲೋ ಮೀಟರ್ ಉದ್ದದ ಈ ಮಾರ್ಗವು ಒಂದೂವರೆ ವರ್ಷದ ಹಿಂದೆಯೇ ವಾಣಿಜ್ಯ ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ ರೈಲುಗಳ ಕೊರತೆ ಕಾರಣದಿಂದಾಗಿ ಸಾರ್ವಜನಿಕರಿಗೆ ಮಾರ್ಗ ಮುಕ್ತವಾಗಿಲ್ಲ. ಮುಂದಿನ ಎಲ್ಲ ಹೊಸ ಮಾರ್ಗಗಳಲ್ಲಿ ಸಹ ರೈಲುಗಳ ಸಂಚಾರ ಆರಂಭವು ಮೆಟ್ರೋ ಪೂರೈಕೆ ಕೊರೆತಯಿಂದ ವಿಳಂಬವಾಗಲಿದ ಎನ್ನಲಾಗುತ್ತಿದೆ.

ಹೀಗಿದ್ದರು ಸಹ ಮೆಟ್ರೋ ಆರಂಭದ ನಿರೀಕ್ಷೆಯ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಿಡಲಾಗಿರುವ ವೇಗಧೂತ ಎಕ್ಸ್‌ಪ್ರೆಸ್ ಬಸ್ ಗಳ ಸಂಚಾರದಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಬಿಎಂಟಿಸಿ ನಿಗಮದ ವತಿಯಿಂದ ಒಟ್ಟು ಐದು ಮಾರ್ಗಗಳಲ್ಲಿ ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್ ಬಿಡಲಾಗಿದೆ. ಇದು ನಾನ್ ಸ್ಟಾಪ್ ಬಸ್ ಆಗಿದೆ. ಕಡಿಮೆ ನಿಲುಗಡೆ ನೀಡುವ ಮೂಲಕ ವೇಗದ ಸಂಚಾರ ನೀಡುತ್ತಿದೆ. ಸಾಕಷ್ಟು ಜನರು ಈ ಬಸ್‌ಗಳನ್ನು ಅವಲಂಬಿಸಿದ್ದಾರೆ.
ಅತ್ತಿಬೆಲೆ-ಬನಶಂಕರಿ, ಅತ್ತಿಬೆಲೆ-ಕೆಂಪೇಗೌಡ ಬಸ್ ನಿಲ್ದಾಣಗಳಿಗೆ ಬಿಎಂಟಿಸಿ ಬಸ್ ಓಡಿಸುತ್ತಿದೆ. ಇವು ವೇಗಧೂತ ಬಸ್ ಆಗಿದ್ದು, ಕಡಿಮೆ ನಿಲುಗಡೆ ನೀಡುತ್ತವೆ. ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತಿವೆ. ಒಂದು ಗಂಟೆ ಸಂಚಾರ ಸಮಯವನ್ನು ಕೇವಲ 30-40 ನಿಮಿಷಗಳ ವರೆಗೆ ಇಳಿಕೆ ಮಾಡಿದೆ. ಹೀಗಾಗಿ ಈ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅತ್ತಿಬೆಲೆಯಿಂದ ಓಡಾಡುವ ಜನರು ಈಗ ಮೆಟ್ರೋ ಇಲ್ಲ ಎಂಬ ಚಿಂತೆ ಇಲ್ಲದೇ ಓಡಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಭಾಗದ ಜನರ ಸಂಚಾರ ಮತ್ತಷ್ಟು ಸಲೀಸಾಗಿದೆ.
ಅತ್ತಿಬೆಲೆ-ಬನಶಂಕರಿ ಮತ್ತು ಅತ್ತಿಬೆಲೆ-ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರತಿ ನಿತ್ಯ 340ಕ್ಕೂ ಅಧಿಕ ಟ್ರಿಪ್‌ಗಳನ್ನು ಹೊಡೆಯುತ್ತಿವೆ. ಇದರಿಂದ ಮೆಟ್ರೋ ಹಳದಿ ಮಾರ್ಗ ಆರಂಭವಾಗದರೆ ಅನುಕೂಲವಾಗುತ್ತೆ ಎಂದಿದ್ದ ಪ್ರಯಾಣಿಕರು ಚಿಂತೆ ಇಲ್ಲದೇ ಬಿಎಂಟಿಸಿ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ಅತ್ತಿಬೆಲೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ಭಾಗದ ಐಟಿ ಕಂಪನಿಗಳಿಗೆ ಬರುತ್ತಿದ್ದಾರೆ. ಕಡಿಮೆ ಸಮಯದಲ್ಲಿ ತಮ್ಮ ಗಮ್ಯ ಸ್ಥಳ ತಲುಪುತ್ತಿದ್ದಾರೆ. ಅಲ್ಲದೆ ಬಿಎಂಟಿಸಿ ವೇಗಧೂತ ಎಕ್ಸ್‌ಪ್ರೆಸ್ ಸೇವೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗ ನಿರ್ಮಾಣವಾಗಿ ಎರಡು ವರ್ಷಗಳು ಕಳೆದಿವೆ. ಈವರೆಗೆ ಮೂರು ರೈಲು ಮಾತ್ರ ಬಂದಿವೆ. ಈ ಮಾರ್ಗ ತೆರೆಯಲು ಕನಿಷ್ಠ ಎಂಟು ರೈಲುಗಳಾದರು ಬೇಕು. ರೈಲು ಪೂರೈಕೆ ಕೊರತೆ ಆಗಿದ್ದರಿಂದ ಮಾರ್ಗ ತೆರೆಯಲಾಗಿಲ್ಲ. ಈ ಸಂಬಂಧ ಬಿಎಂಟಿಸಿ ಬಸ್ ಹೊಸ ಸೇವೆ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.












Click it and Unblock the Notifications