ರೈತರ ಹಾಲು ಉತ್ಪಾದಕರ ಡೈರಿ ನೋಂದಣಿಗೂ 25 ಸಾವಿರ ಲಂಚ: ಎಸಿಬಿ ಬಲೆಗೆ ಅಧಿಕಾರಿ

ಬೆಂಗಳೂರು, ಫೆ. 15: ದಾಸನಪುರದ ಮೈಹಿಮಣ್ಣನ ಪಾಳ್ಯದಲ್ಲಿ ರೈತರ ಹಾಲು ಉತ್ಪಾದಕರ ಸಂಘ ಪ್ರಾರಂಭಕ್ಕಾಗಿ ನೋಂದಣಿ ಮಾಡಲು 25 ಸಾವಿರ ರೂ. ಲಂಚ ಸ್ವೀಕರಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಮಲ್ಲೇಶ್ವರಂನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಕೇಸ್ ವರ್ಕರ್‌ ಸುನೀಲ್ ಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಲಂಚ ಹಣದ ಸಮೇತ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿತ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಕೇಸು ದಾಖಲಿಸಿದ್ದಾರೆ.

ಬೆಗಳೂರು ಉತ್ತರ ತಾಲೂಕು ದಾಸನಾಪುರ ಹೋಬಳಿಯ ಮೈಹಿಮಣ್ಣ ಪಾಳ್ಯದಲ್ಲಿ ರೈತರ ಹಾಲು ಉತ್ಪಾದಕರ ಸಹಕಾರ ಸಂಘ ತೆಗೆಯಲು ಮಲ್ಲೇಶ್ವರಂನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು.

Co-operative department corruption exposed by ACB officials

ಅರ್ಜಿ ವಿಲೇವಾರಿ ಮಾಡಲು 40 ಸಾವಿರ ರೂ. ಲಂಚ ನೀಡುವಂತೆ ಕೇಸ್ ವರ್ಕರ್ ಸುನೀಲ್ ಕುಮಾರ್ ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ 25 ಸಾವಿರ ರೂ. ಲಂಚಕ್ಕೆ ಪೀಡಿಸಿದ್ದು, ನಂತರದಲ್ಲಿ ಹತ್ತು ಸಾವಿರ ನೀಡುವಂತೆ ಸೂಚಿಸಿದ್ದಾನೆ.

ಮುಂಗಡವಾಗಿ ಹಣ ಪಡೆದಿದ್ದ ಸುನೀಲ್ ಕುಮಾರ್, ಎರಡನೇ ಸಲ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Recommended Video

      ಕನ್ನಡಿಗರ ಬಗ್ಗೆ ಕರುಣೆ ಇಲ್ಲದ RCB,ಅಭಿಮಾನಿಗಳಿಗೆ ಈ ರೀತಿ ಮೋಸ‌ ಮಾಡ್ಬಾರ್ದಿತ್ತು.. | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+