• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗಾಗಿ ಓಟ : ಕಲ್ಯಾಣನಗರದ ಶಾಲಾ ಮಕ್ಕಳೊಂದಿಗೆ ಪಾಲ್ಗೊಳ್ಳಿ

|

ಬೆಂಗಳೂರು, ನವೆಂಬರ್ 16: ನಗರದ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ (ಸಿಎಂಆರ್ ಎನ್‍ಪಿಎಸ್) ವಿದ್ಯಾರ್ಥಿಗಳು ಉತ್ತಮ ಬೆಂಗಳೂರು ನಿರ್ಮಾಣಕ್ಕಾಗಿ ಎಕ್ಸಲರೇಟ್ 2ಕೆ18 ಓಟವನ್ನು ಆಯೋಜಿಸಿದ್ದಾರೆ.

2018ರ ನವೆಂಬರ್ 17 ರಂದು ಶನಿವಾರ ಬೆಳಗ್ಗೆ 5 ಗಂಟೆ ನಂತರ ಓಟ ಚಾಲನೆ ಪಡೆಯಲಿದೆ. ಇಲ್ಲಿ ಮೂರು ವಿಭಾಗ ಮಾಡಲಾಗಿದ್ದು, 2 ಕಿ.ಮಿ., 5 ಕಿ.ಮಿ. ಹಾಗೂ 10 ಕಿ.ಮಿ. ಎಂದು ವಿಭಾಗಿಸಲಾಗಿದ್ದು, ಆಸಕ್ತರು ತಮಗೆ ಬೇಕಾದ ಓಟ ಆಯ್ಕೆಮಾಡಿಕೊಳ್ಳಬಹುದು.

ಎಲ್ಲಾ ಓಟಗಳ ಆರಂಭ ಹಾಗೂ ಕೊನೆ ಬೆಂಗಳೂರಿನ ಕಲ್ಯಾಣನಗರದ ಎಚ್‍ಬಿಆರ್ ಲೇಔಟ್‍ನಲ್ಲಿರುವ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲೇ ಆಗಲಿದೆ. ಓಟಕ್ಕೆ ಚಾಲನೆ ನೀಡಲು ಹಾಗೂ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಚಿತ್ರನಟಿ ರೂಪಿಕಾ ಆಗಮಿಸುತ್ತಿದ್ದಾರೆ.

ಸಿಎಂಆರ್ ಎನ್‍ಪಿಎಸ್‍ನ ಗ್ರೇಡ್ 11ನೇ ತರಗತಿಯ ವಿದ್ಯಾರ್ಥಿಗಳು ಈ "ಎಕ್ಸಲರೇಟ್' ಮ್ಯಾರಾಥಾನ್ ಓಟದ ಆಯೋಜನೆ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಓಟದ ಆಯೋಜನೆ ಕೂಡ ಅವರ ಕಲಿಕೆಯ ಒಂದು ಭಾಗವಾಗಿದೆ.

ಓಟದಲ್ಲಿ ಎಲ್ಲಾ ವಯೋಮಾನದವರೂ ಭಾಗವಹಿಸಬಹುದಾಗಿದೆ. ಇದರ ಆಯೋಜನೆಯ ಹಿಂದಿನ ಉದ್ದೇಶ ನಾಗರಿಕರು ಹಾಗೂ ವಿದ್ಯಾರ್ಥಿ ಸಮುದಾಯವನ್ನು ಒಟ್ಟಾಗಿ ಕರೆದೊಯ್ಯುವುದಾಗಿದೆ.

ಪರಿಸರ ಸಂರಕ್ಷಣೆ ವಿಚಾರದಲ್ಲಿ ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಓಟವನ್ನು ಆಯೋಜಿಸಲಾಗಿದೆ. ಒಟ್ಟಾರೆ ಓಟದ ಗುರಿ ಜನಜಾಗೃತಿಯಾಗಿದೆ. ಈ ಓಟಕ್ಕಾಗಿ ಮಕ್ಕಳಿಂದ ನಿಧಿ ಸಂಗ್ರಹ ಮಾಡಲಾಗುತ್ತಿದೆ.

ಇದನ್ನು ಕಲ್ಯಾಣ ನಗರದ ಸುತ್ತಲಿನ ಐದು ಕಿ.ಮಿ. ವ್ಯಾಪ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್‍ಗಾಗಿ ಹಾಗೂ ಬೆಂಗಳೂರಿನೆಲ್ಲೆಡೆ ಸಸಿಗಳನ್ನು ನೆಡಲು ಬಳಕೆ ಮಾಡಲಾಗುತ್ತದೆ. ಮಹಾನಗರಕ್ಕೆ ಮತ್ತೊಮ್ಮೆ ಸ್ವಚ್ಛನಗರ ಎಂಬ ಖ್ಯಾತಿಯನ್ನು ಮರಳಿಸಲು ಈ ಯತ್ನ ಮಾಡಲಾಗುತ್ತಿದೆ. ಈ ಸ್ವಚ್ಛತಾ ಕಾರ್ಯವು 50,000 ಚದರ ಅಡಿ ಪ್ರದೇಶವನ್ನು ವ್ಯಾಪಿಸಲಿದೆ. ಸ್ವಚ್ಛತಾ ಕಾರ್ಯವು ವಿದ್ಯಾರ್ಥಿಗಳು ಪ್ರದೇಶದ ಚಿತ್ರಸಂಗ್ರಹ, ದುಸ್ಥಿತಿಗೆ ಒಳಗಾದ ಪ್ರದೇಶ ಗುರುತಿಸುವಿಕೆ ಹಾಗೂ ಗೋಡೆಗೆ ಬಣ್ಣ ಬಳಿಯುವ ಕಾರ್ಯ ಮಾಡಲಿದ್ದಾರೆ.

ಗೋಡೆ ಮೇಲೆ ಗೀಚುಬರಹ, ಹೂವಿನ ಕುಂಡಗಳನ್ನು ಇರಿಸುವುದು ಇತ್ಯಾದಿ ಕಾರ್ಯ ಕೂಡ ಇದರಲ್ಲಿ ಸೇರಿದೆ. ಈ ಮೂಲಕ ಗುರುತಿಸಿದ ತಾಣವನ್ನು ಅಸ್ವಚ್ಛತೆಯಿಂದ ಸ್ವಚ್ಛತೆಗೆ ಕೊಂಡೊಯ್ಯುವುದು ಮಕ್ಕಳ ಉದ್ದೇಶವಾಗಿದೆ. ಬೆಂಗಳೂರಿನಾದ್ಯಂತ ಈ ಕಾರ್ಯಕ್ರಮದ ಭಾಗವಾಗಿ ಮಕ್ಕಳು 5,000 ಗಿಡಗಳನ್ನು ನೆಡಲಿದ್ದಾರೆ. ಈ ಮೂಲಕ ಮಕ್ಕಳು ಬೆಂಗಳೂರು ನಗರವನ್ನು ಹಸಿರು ಹಾಗೂ ಸ್ವಚ್ಛ ನಗರವನ್ನಾಗಿ ರೂಪಿಸುವ ಸಂಕಲ್ಪ ತೊಟ್ಟಿದ್ದಾರೆ.

ಈಗಾಗಲೇ ಓಟದಲ್ಲಿ ಪಾಲ್ಗೊಳ್ಳಲು 600ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಿಎಂಆರ್ ಎನ್‍ಪಿಎಸ್ ವಿದ್ಯಾರ್ಥಿಗಳು ಆಯೋಜಿಸಿರುವ ಎಕ್ಸಲರೇಟ್ 2ಕೆ18 ಅತಿಹೆಚ್ಚು ನಾಗರಿಕರನ್ನು ತಲುಪುವ ಉದ್ದೇಶದಿಂದ, ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ನಡೆಯುತ್ತಿದೆ. ಸ್ಥಳದಲ್ಲಿಯೇ ಕೂಡ ಪಾಲ್ಗೊಳ್ಳುವವರು ಹೆಸರು ನೋಂದಣಿ ಮಾಡಿಕೊಳ್ಳಬಹುದು.

English summary
CMR National Public School students to organize Accelerate 2K18 – Run for a better Bengaluru . 5,000 saplings will be planted across Bengaluru and spot fixing of 50,000 sq ft. around Kalyan Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X