ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಲಸೆ ಕಾರ್ಮಿಕರಿಂದ ದುಪಟ್ಟು ಹಣ ಪಡೆಯಬೇಡಿ -ಸಿಎಂ ಆದೇಶ

|
Google Oneindia Kannada News

ಬೆಂಗಳೂರು, ಮೇ 2: ವಲಸೆ ಕಾರ್ಮಿಕರನ್ನು ಊರಿಗೆ ಕರೆದುಕೊಂಡು ಹೋಗಲು ದುಪಟ್ಟು ಹಣ ಪಡೆಯಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Recommended Video

ಬೆಳಗಾವಿಯಲ್ಲಿ ವಲಸೆ ಕಾರ್ಮಿಕರಿಗೆ ಬಸ್‌ನಲ್ಲಿ ದುಪ್ಪಟ್ಟು ದರ , ಸ್ಪಷ್ಟನೆ ನೀಡಿದ ಲಕ್ಷ್ಮಣ್ ಸವದಿ

''ಕೆಎಸ್ಆರ್‌ಟಿಸಿ ಬಸ್‌ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ 'ಕಾರ್ಮಿಕ'ರಿಗೆ ಹಳೇ ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ'' ಎಂದು ಸುರೇಶ್ ಕುಮಾರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಸರ್ಕಾರಿ ಬಸ್‌ನಲ್ಲಿ ಮೂರು ಪಟ್ಟು ದರ: ಖಂಡಿಸಿದ ಎಎಪಿ ಸರ್ಕಾರಿ ಬಸ್‌ನಲ್ಲಿ ಮೂರು ಪಟ್ಟು ದರ: ಖಂಡಿಸಿದ ಎಎಪಿ

ಬೆಂಗಳೂರಿನಲ್ಲಿ ಇರುವ ರಾಜ್ಯದ ಬೇರೆ ಬೇರೆ ಭಾಗದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಸರ್ಕಾರ ಮುಂದಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವ್ಯವಸ್ಥೆ ಮಾಡಿದ್ದು, ಊರಿಗೆ ಹೋಗಲು ಕಾರ್ಮಿಕರು ದೊಡ್ಡ ಮೊತ್ತವನ್ನು ನೀಡಬೇಕಾಗಿತ್ತು. ಮೂರರಷ್ಟು ಹಣವನ್ನು ಕಾರ್ಮಿಕರಿಂದ ವಸೂಲಿ ಮಾಡುತ್ತಿದ್ದು, ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.

Dont Take Extra Amount From Migrant Labor says Yeddyurappa

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಅನೇಕರು ಸರ್ಕಾರ ಈ ನಿಯಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮೊದಲೇ ಕೆಲಸ, ಕೂಲಿ ಇಲ್ಲದ ಕಾರ್ಮಿಕರು ಸಾವಿರಾರೂ ರೂಪಾಯಿ ಕೊಟ್ಟು ಹೇಗೆ ಊರಿಗೆ ಹೋಗಲು ಸಾಧ್ಯ ಎಂದಿದ್ದರು.

ಇದಕ್ಕೆ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದು, ವಲಸೆ ಕಾರ್ಮಿಕರನ್ನು ಊರಿಗೆ ಕರೆದುಕೊಂಡು ಹೋಗಲು ದುಪಟ್ಟು ಹಣ ಪಡೆಯಬೇಡಿ ಎಂದಿದ್ದಾರೆ. ಹಳೇ ದರದಲ್ಲಿ ಅವರು ಊರಿಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

English summary
Don't take extra amount from migrant labor says CM Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X