ಮೆಟ್ರೋದಲ್ಲಿ ಪ್ರಯಾಣಿಸಿ ಸಿಎಂ ಸಿದ್ದರಾಮಯ್ಯ ಏನೆಲ್ಲ ಪರಿಶೀಲನೆ ಮಾಡಿದ್ರು ಗೊತ್ತಾ?

ಬೆಂಗಳೂರು, ಸೆಪ್ಟೆಂಬರ್, 12: ರಾಜ್ಯ ರಾಜಧಾನಿ ಬೆಂಗಳೂರು ಜನರ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಇನ್ನು ಇದರಲ್ಲಿ ಪ್ರತಿ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಇನ್ನು ಇದೀಗ ಇಂದು (ಸೆಪ್ಟೆಂಬರ್‌ 12) ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋದಲ್ಲಿ ಸಂಚಾರ ಮಾಡಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಇಂದು (ಸೆಪ್ಟೆಂಬರ್‌ 12) ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು. ಬಳಿಕ ಕೆಆರ್ ಪುರದಿಂದ ವಿಧಾನ ಸೌಧದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಗಮನ ಸೆಳೆದರು.

CM Siddaramaiah traveled in namma metro train

ಸಿಎಂ ಸಿದ್ದರಾಮಯ್ಯ ಅವರು ಅಪರೂಪಕ್ಕೆ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, ಈ ವೇಳೆ ಅವರು ರೈಲಿನಲ್ಲಿದ್ದ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಜನರೊಂದಿಗೆ ಸಾಮಾನ್ಯರ ರೀತಿಯಲ್ಲಿ ಮಾತನಾಡುತ್ತಾ ಕುಳಿತ್ತಿದ್ದು, ಈ ಫೋಟೋ ಅಂತೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಲೇ ಇದೆ.

ಯತ್ನಾಳ್‌ ಹೇಳಿದ್ದೇನು.?: ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್‌ ಮೇರಿ ಹೆಸರಿಡುವ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದರು. ಈ ಬಗ್ಗೆ ತಮ್ಮ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಯತ್ನಾಳ್‌ ಏನು ಬರೆದುಕೊಂಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡುವಂತೆ ಮನವಿ ಸಲ್ಲಿಕೆಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಟ್ವೀಟ್‌ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

"ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇದೆ ಉದಾಹರಣೆ ಆಗಿದೆ. ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ," ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಹೊಸೂರಿಗೆ ಮೆಟ್ರೋ ವಿಸ್ತರಣೆ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರ

"ಇತಿಹಾಸ ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ ಏಕಾಂಬರೇಶ್ವರ ಸ್ವಾಮಿಯ ದೇವಸ್ಥಾನ, ಮುತ್ಯಾಲಮ್ಮ ದೇವಸ್ಥಾನ, ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಅಂಗಾಲ ಪರಮೇಶ್ವರಿ ಅಮ್ಮನವರ ದೇವಸ್ಥಾನಗಳು ಶಿವಾಜಿನಗರದಲ್ಲಿವೆ," ಎಂದು ಹೇಳಿದ್ದಾರೆ.

"ಓಲೈಕೆ ರಾಜಕಾರಣಕ್ಕೆ, ಹೆಚ್ಚು ವೋಟು ಬೀಳುತ್ತಿರುವ ಸಮುದಾಯವನ್ನು ಸಂತುಷ್ಟಗೊಳಿಸಲು ಈ ರೀತಿ ವ್ಯರ್ಥ ಪ್ರಯತ್ನಗಳು ಬೇಕಾಗಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ಧರ್ಮವನ್ನು ಹೆಸರನ್ನು ಉಳಿಸಿದವರನ್ನೆಲ್ಲ ಬಿಟ್ಟು ರಾಜಕೀಯ ಕಾರಣಕ್ಕಾಗಿ ಮೇರಿಯಮ್ಮನ ಹೆಸರು ನಾಮಕರಣ ಮಾಡುವ ಅವಶ್ಯಕತೆ ಇಲ್ಲ," ಎಂದು ಬರೆದುಕೊಂಡಿದ್ದಾರೆ.

ಇನ್ನು ಸೆಪ್ಟೆಂಬರ್‌ 8ರಂದು ಶಿವಾಜಿನಗರದ ಸಂತ ಮೇರಿ ಜಯಂತ್ಯುತ್ಸವ ಹಿನ್ನೆಲೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಆಗಿದ್ದರು. ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಇದರಿಂದ ಪುಣ್ಯಕ್ಷೇತ್ರ ಮೇರಿ ಚರ್ಚೆಗೆ ಹೆಚ್ಚು ಜನರು ಬರಲು ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಇದೀಗ ಇದಕ್ಕೆ ಶಾಸಕ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+