ಉದ್ಘಾಟನೆಗಳಲ್ಲೇ ಶುಕ್ರವಾರವಿಡೀ ಕಳೆಯಲಿರುವ ಸಿದ್ದು
ಬೆಂಗಳೂರು, ಜೂ. 6 : ಎರಡು ದಿನಗಳ ನವದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉದ್ಘಾಟನೆಗಳಲ್ಲೇ ಬ್ಯುಸಿಯಾಗಲಿದ್ದಾರೆ. ಇಂದು ಸಿಎಂ ಆರು ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.
ಬುಧವಾರ ಮತ್ತು ಗುರುವಾರ ನವದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದಾರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ಕೇಂದ್ರ ಸಚಿವರನ್ನು ಭೇಟಿಯಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಸಭೆ ನಡೆಸಿ, ರಾಜ್ಯಸಭೆ ಮತ್ತು ವಿಧಾನಪರಿಷತ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಮರಳಿದ್ದಾರೆ. [ಮೋದಿ ಭೇಟಿ ಮಾಡಿದ ಸಿದ್ದರಾಮಯ್ಯ]

ಇಂದು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲೇ ಬ್ಯುಸಿಯಾಗಲಿದ್ದಾರೆ. ಎಲ್ಲಾ ಕಾರ್ಯಕ್ರಮಗಳು ಇರುವುದು ಬೆಂಗಳೂರಿನಲ್ಲಿ. ಶುಕ್ರವಾರ ಒಟ್ಟು ಆರು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದು, ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮಗಳು ಆರಂಭವಾಗಲಿವೆ. ಸಿಎಂ ಕಾರ್ಯಕ್ರಮಗ ವಿವರ ಹೀಗಿದೆ
* ಬೆಳಗ್ಗೆ 10 ಗಂಟೆ : ವಿಧಾನಸೌಧದಲ್ಲಿ ದೇವರಾಜ್ ಅರಸ್ ಪ್ರತಿಮೆಗೆ ಮಾಲಾರ್ಪಣೆ
* 10.30 : ಮಹಾತ್ಮ ಗಾಂಧಿ ಪ್ರತಿಮ ನಿರ್ಮಾಣಕ್ಕೆ ಶಂಕುಸ್ಥಾಪನೆ [ಗಾಂಧಿ ಪ್ರತಿಮೆ ಬಗ್ಗೆ ವಿವರ ಇಲ್ಲಿದೆ]
* 11.30 ಬೆಂಗಳೂರು ಟ್ರಾಫಿಕ್ ಪೊಲೀಸ್ ತರಬೇತಿ ಸಂಸ್ಥೆ ಉದ್ಘಾಟನೆ ಥಣಿಸಂದ್ರದಲ್ಲಿ
* 12.30 ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಹಲವಾರು ಕಾರ್ಯಕ್ರಮಗಳ ಉದ್ಘಾಟನೆ, ಇನ್ ಫೆಂಟ್ರಿ ರಸ್ತೆ
* 1.30 ಮೈಸೂರು ರಸ್ತೆಯಲ್ಲಿ ಪೊಲೀಸ್ ಕ್ಯಾಂಟೀನ್ ಉದ್ಘಾಟನೆ
* 3.30 ರಾಜೀವ್ ಗಾಂಧಿ ವಿದ್ಯಾರ್ಥಿ ವೇತನ ಕಾರ್ಯಕ್ರಮ ಉದ್ಘಾಟನೆ, ಜ್ಞಾನಜ್ಯೋತಿ ಆಡಿಟೋರಿಯಮ್ [ಸಿದ್ದರಾಮಯ್ಯ ದೆಹಲಿ ಪ್ರವಾಸದಲ್ಲಿ ಏನಾಯ್ತು?]












Click it and Unblock the Notifications