ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದು ಜೈ.. ಅಂದ ಸಿಎಂ ಸಿದ್ದರಾಮಯ್ಯ; ಕಾರಣ ಇಲ್ಲಿದೆ
CTR Masala Dosa: ರಾಜ್ಯದಲ್ಲಿ ಕೆಲವೊಂದು ಹೋಟೆಲ್‌ಗಳು ಮಾತ್ರ ಆಹಾರ ಪದ್ಧತಿಯಲ್ಲಿ ಹಿಂದಿನ ರುಚಿಯನ್ನೇ ಉಳಿಸಿಕೊಂಡು ಬಂದಿವೆ. ಈ ಗುಂಪಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸೆಂಟ್ರಲ್ ಟಿಫನ್ ರೂಮ್ ಕೂಡ ಒಂದಾಗಿದೆ. ಇನ್ನು ಇಲ್ಲಿನ ಮಸಾಲೆ ದೋಸೆ ಸವಿದು ಸಿಎಂ ಸಿದ್ದರಾಮಯ್ಯ ಅವರು ಏನು ಹೇಳಿದ್ರು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರಾಜ್ಯದಲ್ಲಿ ಇದೀಗ ಜಾತಿಗಣತಿ ವರದಿ ಜಾರಿಯ ಬಗ್ಗೆ ಪರ-ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇಂತಹ ತಲೆಬಿಸಿಯ ನಡುವೆಯೂ ಬಿಡುವು ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಜೊತೆ ನಿನ್ನೆ (ಏಪ್ರಿಲ್ 18) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರಸಿದ್ಧ ಹೋಟೆಲ್ ಸೆಂಟ್ರಲ್ ಟಿಫನ್ ರೂಮ್‌ಗೆ ಹೋಗಿ ಮಸಾಲೆ ದೋಸೆ ಸವಿದು ಗಮನ ಸೆಳೆದಿದ್ದಾರೆ. ಅಲ್ಲದೆ, ಮೊದಲಿನ ರುಚಿಯನ್ನೇ ಹಾಗೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಸಿಟಿಆರ್‌ನಲ್ಲಿ ಮಸಾಲೆ ದೋಸೆ ಸವಿದ ಬಗ್ಗೆ ಅವರು ಸಾಮಾಜಿಕ ಜಾಲತಾಣದ ಭಾಗವಾಗಿರುವ ತಮ್ಮ ಟ್ವಿಟರ್ ಖಾತೆಯನ್ನು ಹಂಚಿಕೊಂಡಿದ್ದಾರೆ. ವರ್ಷಗಳ ಹಿಂದೆ ಅಲ್ಲಿ ದೋಸೆ ಸವಿದ ನೆನಪಾಯಿತು. ದೋಸೆಯ ರುಚಿಯ ಗುಣಮಟ್ಟವನ್ನು ಈಗಲೂ ಸಿಟಿಆರ್‌ನಲ್ಲಿ ಕಾಯ್ದುಕೊಂಡು ಬಂದಿದ್ದಾರೆ ಎಂದು ಅಲ್ಲಿ ಮಸಾಲೆ ದೋಸೆ ತಿಂದ ಮೇಲೆ ನೆನೆಪಿಗೆ ಬಂದಿತು ಎಂದು ಬರೆದುಕೊಂಡಿದ್ದಾರೆ.
ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು
— Siddaramaiah (@siddaramaiah) April 18, 2025
ಸಿಟಿಆರ್ ಎಂದೇ ಜನಪ್ರಿಯವಾಗಿರುವ
ಮಲ್ಲೇಶ್ವರಂನ ಸೆಂಟ್ರಲ್ ಟಿಫಿನ್
ರೂಮ್‌ಗೆ ಹೋಗಿದ್ದೆ.
ವರ್ಷಗಳ ಹಿಂದೆ ಅಲ್ಲಿ ದೋಸೆ ತಿಂದದ್ದು ನೆನಪಾಯಿತು.
ದೋಸೆಯ ರುಚಿಯ ಗುಣಮಟ್ಟವನ್ನು ಈಗಲೂ ಸಿಟಿಆರ್ ನಲ್ಲಿ ಕಾಯ್ದುಕೊಂಡು ಬಂದಿದ್ದಾರೆ ಎನ್ನುವುದು ಇಂದು ಅಲ್ಲಿ ಮತ್ತೆ ಮಸಾಲೆ ದೋಸೆ ತಿನ್ನುವಾಗ… pic.twitter.com/AClukorkII
ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರಿಗೆ ಸಾಥ್ ನೀಡಿದ್ದರು. ದೋಸೆ ಸವಿದ ಬಳಿಕ ಅವರು ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ರಾಯಲ್ ಚಾಲೆಂಜರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು ವೀಕ್ಷಣೆ ಮಾಡಿ ಗಮನ ಸೆಳೆದರು.
ರಾಜ್ಯದ ಎಲ್ಲಾ ಜಿಲ್ಲೆಗಳು ಅವುಗಳದ್ದೇ ಆದ ವಿಶೇಷತೆಯನ್ನು ಒಳಗೊಂಡಿವೆ. ಅದರಲ್ಲೂ ಊಟದ ವಿಚಾರದಲ್ಲಿ ಜಿಲ್ಲೆಯಿಂದ ಜಿಲ್ಲೆಗಳಿಗೂ ವಿಭಿನ್ನವಾಗಿರುತ್ತದೆ. ಮತ್ತೊಂದೆಡೆ ನೋಡೋದಾದ್ರೆ ಎಲ್ಲಾ ಜಿಲ್ಲೆಯವರು ಕೂಡ ಬೆಂಗಳೂರಿನಲ್ಲಿ ಇದ್ದು, ಅವರದ್ದೇ ಶೈಲಿಯ ಅಡುಗೆಗಳನ್ನು ಮಾಡುತ್ತಾ ಗುರುತಿಸಿಕೊಂಡಿದ್ದಾರೆ. ನಗರದ ಬಹುತೇಕ ಹೋಟೆಲ್‌ಗಳಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿ, ರುಚಿಯನ್ನು ಬದಲಾಯಿಸಿಬಿಡುತ್ತಾರೆ.
ಇನ್ನೂ ಕೆಲವೇ ಹೋಟೆಲ್‌ಗಳಲ್ಲಿ ಮಾತ್ರ ಅದೇ ಹಳೆಯ ರುಚಿಯನ್ನು ಮುಂದುವರೆಸಿಕೊಂಡು ಪ್ರಸಿದ್ಧಿಯಾಗಿರುವ ಉದಾಹರಣೆಗಳು ಕೂಡ ಇವೆ. ಈ ಸಾಲಿಗೆ ಸಿಟಿಆರ್ ಕೂಡ ಸೇರಿದೆ. ಇದು ದೋಸೆ ಪ್ರಿಯರ ಅಚ್ಚುಮೆಚ್ಚಿನ ಹೊಟೇಲ್, ಪುರಾತನ ದೋಸೆ ಹೋಟೆಲ್ ಅಂತಲೇ ಪ್ರಸಿದ್ಧಿ ಹೊಂದಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರೇ ನಿನ್ನೆ ಹೇಳಿದ್ದಾರೆ.
ನಗರದ ಪ್ರಸಿದ್ಧ ದೋಸೆ ಹೋಟೆಲ್‌ಗಳಲ್ಲಿ ಸಿಟಿಆರ್ ಕೂಡ ಒಂದಾಗಿದೆ. ಮಾಹಿತಿಯ ಪ್ರಕಾರ, ಇದು 1920ರಲ್ಲಿ ಮಲ್ಲೇಶ್ವರದಲ್ಲಿ ಆರಂಭವಾಗಿದ್ದು, ಬೆಣ್ಣೆ ಮಸಾಲೆ ದೋಸೆ, ಫಿಲ್ಟರ್ ಕಾಫಿಗೆ ಅತ್ಯಂತ ಜನಪ್ರಿಯ ಆವಾಗಿದೆ. ಸಿನಿ ತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಇಲ್ಲಿಗೆ ಬಂದು ದೋಸೆ ಸವಿದು ಹೋಗುತ್ತಲೇ ಇರುತ್ತಾರೆ. ವಾರಾಂತ್ಯದಲ್ಲಂತೂ ಸಿಟಿಆರ್‌ನಲ್ಲಿ ದೋಸೆ ಸವಿಯಲು ಸರದಿಯಲ್ಲಿ ನಿಂತುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಈ ಹೋಟೆಲ್ ಪ್ರಸಿದ್ಧಿಯಾಗಿದೆ.
ಹಾಗೆಯೇ ಜಿಲ್ಲೆಗಳಲ್ಲಿ ನೋಡೋದಾದ್ರೆ ದಾವಣಗೆರೆ ಬೆಣ್ಣೆ ದೋಸೆ ಕೂಡ ಪ್ರಸಿದ್ಧಿ ಆಗಿದೆ. ಈಗಲೂ ದಾವಣಗೆರೆಯಲ್ಲಿ ಕೆಲವೆಡೆ ಕಟ್ಟಿಗೆ ಒಲೆಗಳಲ್ಲಿ ಬೆಣ್ಣೆ ದೋಸೆ ಮಾಡುತ್ತಾರೆ. ಇಲ್ಲಿಗೆ ಭೇಟಿ ನೀಡಿದವರು ಯಾರೇ ಆದರೂ ಇಲ್ಲಿನ ಬೆಣ್ಣೆ ದೋಸೆ ಸವಿಯದೇ ತಮ್ಮ ಊರುಗಳಿಗೆ ಹಿಂದಿರುಗುದಿಲ್ಲ. ಈ ದಾವಣಗೆರೆ ಬೆಣ್ಣೆ ದೋಸೆ ಹೆಸರಿನಲ್ಲೂ ಸಹ ಬೆಂಗಳೂರಿನಲ್ಲಿ ಹೋಟೆಲ್‌ಗಳನ್ನು ತೆರೆದಿರುವುದನ್ನು ನಾವು ಕಾಣಬಹುದು.












Click it and Unblock the Notifications