• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಟುಂಬದ ಜೊತೆ ಕುಮಾರಸ್ವಾಮಿ ಜನ್ಮದಿನ, ಫ್ಲೆಕ್ಸ್‌ ಹಾಕದಂತೆ ಮನವಿ

|

ಬೆಂಗಳೂರು, ಡಿಸೆಂಬರ್15: ತಮ್ಮ ಜನ್ಮದಿನವಾದ ಡಿಸೆಂಬರ್ 16 ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬದವರೊಂದಿಗೆ ಸಮಯ ಕಳೆಯಲಿದ್ದಾರೆ.

ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಅವರು ಲಭ್ಯರಿರುವುದಿಲ್ಲ. ಹಿತೈಷಿಗಳು, ಅಭಿಮಾನಿಗಳು ಬೆಳಗಾವಿ ಅಧಿವೇಶನದ ನಂತರ ಅವರನ್ನು ಭೇಟಿ ಮಾಡಬಹುದಾಗಿದೆ.

ತಮ್ಮ ಜನ್ಮದಿನದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ ಹಾಕದಂತೆ ಅವರು ಮನವಿ ಮಾಡಿದ್ದು, 'ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ' ಎಂದು ಅವರು ವಿನಂತಿಸಿದ್ದಾರೆ.

ಸೋಮವಾರ, ಡಿಸೆಂಬರ್ 17ರಂದು ಅವರು ಭೋಪಾಲ್ ನಲ್ಲಿ ಮಧ್ಯಪ್ರದೇಶ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

English summary
CM Kumaraswamy will celebrate his 59th birthday with his family. He will not be available in his JP Nagar residence. He requested his followers not to tie flex and banners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X