ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಮುಂದುವರಿಸುವ ನಿರ್ಧಾರದತ್ತ ಸರ್ಕಾರ ಒಲವು, ಶೀಘ್ರ ನಿರ್ಧಾರ

|
Google Oneindia Kannada News

ಬೆಂಗಳೂರು, ಮೇ 21: ಕರ್ನಾಟಕದಲ್ಲಿ ಲಾಕ್‌ಡೌನ್ ಮತ್ತಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್‌ಡೌನ್ ಮುಂದುವರಿಸುವ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ಸಭೆಯನ್ನು ಕರೆದಿದ್ದು ಇದರಲ್ಲಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆಯೇ ಹೆಚ್ಚುನ ಅಭಿಪ್ರಾಯಗಳು ವ್ಯಕ್ತವಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಮುಖ್ಯಮಂತ್ರಿಗಳ ಕಚೇರಿಯಿಂದ ದೊರೆತ ಮಾಹಿತಿಯ ಪ್ರಕಾರ ಹೆಚ್ಚಿನ ಸಚಿವರು ಹಾಗೂ ತಜ್ಞರು ಲಾಕ್‌ಡೌನ್ ಮುಂದುವರಿಸುವ ಒಲವು ಹೊಂದಿದ್ದಾರೆ. ಕೊರೊನಾ ವೈರಸ್ ಪರೀಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿದರೂ ಪಾಸಿಟಿವ್ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಅಭಿಪ್ರಾಯಕ್ಕೆ ಕಾರಣವಾಗಿದೆ.

ಕೋವಿಡ್ 2ನೇ ಅಲೆ; ಕರ್ನಾಟಕದಲ್ಲಿ ಹೊಸ ಕೇಸ್, ಸಾವಿನಲ್ಲಿ ದಾಖಲೆಕೋವಿಡ್ 2ನೇ ಅಲೆ; ಕರ್ನಾಟಕದಲ್ಲಿ ಹೊಸ ಕೇಸ್, ಸಾವಿನಲ್ಲಿ ದಾಖಲೆ

ಈಗ ಘೋಷಿಸಿರುವ ಲಾಕ್‌ಡೌನ್ ಮೇ 24ರವರೆಗೂ ಇರಲಿದೆ. ಅದಕ್ಕೂ ಒಂದು ದಿನ ಮುನ್ನ ಲಾಕ್‌ಡೌನ್ ಮುಂದುವರಿಸುವ ನಿರ್ಧಾರವನ್ನು ಘೋಷಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಮಾಹಿತಿಯನ್ನು ನೀಡಿದ್ದರು. ಆದರೆ ಈ ಬಗ್ಗೆ ಶನಿವಾರದೊಳಗೆ ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

CM BS Yediyurappa meeting with ministers on COVID-19 lockdown extension

ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಮೇ 10 ರಂದು ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶವನ್ನು ನೀಡಲಾಗಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲು ಆರಂಭಿಸಿದ ಕಾರಣ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ.

Recommended Video

Congress vs BJP ವೋಟ್ ಹಾಕುವಾಗ ಯೋಚ್ನೆ ಮಾಡಬೇಕಿತ್ತು ! | Oneindia Kannada

ರಾಜ್ಯ ಆರೋಗ್ಯ ಇಲಾಖೆ ನೀಡಿದ ಮಾಹಿರಿಯ ಪ್ರಕಾರ ಕರ್ನಾಟಕದಲ್ಲಿ ಕೊರೊನಾ ವೈರಸ್‌ನ ಒಟ್ಟು ಪ್ರಕರಣಗಳ ಸಂಖ್ಯೆ 23,35,524ಗೆ ಏರಿಕೆಯಾಗಿದೆ. ಇದರಲ್ಲಿ 5,34,954 ಕೊರೊನಾ ವೈರಸ್ ಪ್ರಕರಣಗಳು ಸಕ್ರಿಯವಾಗಿದೆ. 23,854 ಜನರು ಈ ಮಾರಕ ವೈರಸ್‌ಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ.

English summary
Karnataka CM BS Yediyurappa meeting with ministers on COVID-19 lockdown extension and take decision soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X