Bengaluru: ಬೆಂಗಳೂರಿನಲ್ಲಿಂದು ಮೋಡ ಕವಿದ ವಾತಾವರಣ- ಮಳೆಯಾದರೆ ಮೋದಿ ರೋಡ್ ಶೋ ಕಥೆ ಏನು?

ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಶುರುವಾಗಿದೆ. ಕಳೆದ ದಿನವಷ್ಟೇ ಕೊಂಚ ಬ್ರೇಕ್ ಪಡೆದುಕೊಂಡ ಮಳೆರಾಯ ಇಂದು ಮತ್ತೆ ಧರೆಗಿಳಿಯುವ ಸಾಧ್ಯತೆ ಇದೆ. ಬೆಳಿಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಅಥವ ಸಂಜೆ ಹೊತ್ತಿಗೆ ಮಳೆಯಾಗುವ ಲಕ್ಷಣಗಳಿವೆ. ಜೊತೆಗೆ ಇಂದು ಮತ್ತು ನಾಳೆ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಕೆ ನೀಡಿದೆ.

ಬೆಂಗಳೂರಿನಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಮೋದಿ ಹೋದಲೆಲ್ಲಾ ರಸ್ತೆಯುದ್ದಗಲಕ್ಕೂ ಜನ ಸಾಗರವೇ ನೆರೆದಿದೆ. ಇಂದು ಮಧ್ಯಾಹ್ನದವರೆಗೂ ರೋಡ್ ಶೋ ನಡೆಯಲಿದ್ದು, ಒಂದು ವೇಳೆ ಮಳೆಯಾದರೆ ರೋಡ್‌ ಶೋಗೆ ತೊಂದರೆಯಾಗಲಿದೆ. ಹೀಗಾಗಿ ಮಧ್ಯಾಹ್ನದ ವೇಳೆ ರೋಡ್ ಶೋ ಮುಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಮೋದಿ ರೋಡ್ ಶೋ ಮಾಗಡಿ ರಸ್ತೆ ತಲುಪುತ್ತಿದೆ. ಮಾಗಡಿ ರಸ್ತೆ ಮೂಲಕ ಮೋದಿ ರೋಡ್ ಶೋ ಸಾಗಲಿದ್ದು ಈಗಾಗಲೇ ಮೋದಿ ನೋಡಲು ಜನ ಸಾಗರವೇ ಸೇರಿದೆ.

Cloudy weather in Bangalore- If it rains, is Modis road show cancelled?

ದೇಶದ ಹಲವೆಡೆ ಮಳೆ ಸ್ಥಿತಿಗತಿ ಹೇಗಿದೆ?

ಭಾರತದ ಬಹುತೇಕ ಭಾಗಗಳಲ್ಲಿ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಜೊತೆಗೆ ಮುಂದಿನ 5 ದಿನಗಳವರೆಗೆ ದೇಶದಲ್ಲಿ ಯಾವುದೇ ಶಾಖದ ಅಲೆಯ ಪರಿಸ್ಥಿತಿಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳ ಕಾಲ ಆಹ್ಲಾದಕರ ವಾತಾವರಣ ಇರಲಿದೆ. ಇಂದು ಶನಿವಾರ (ಮೇ 06) ದೆಹಲಿಯಲ್ಲಿ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.

ಹವಾಮಾನ ಇಲಾಖೆ ಪ್ರಕಾರ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಇಂದು ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಲಿದೆ. ಮುಂದಿನ ಕೆಲವು ದಿನಗಳಲ್ಲಿ ವಾಯುವ್ಯ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಜೊತೆಗ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 7 ಮತ್ತು 9 ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ಮೇ 7 ರಂದು ವಾಯುವ್ಯ ಭಾರತದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎನ್ನಲಾಗಿದೆ.

Cloudy weather in Bangalore- If it rains, is Modis road show cancelled?

ಇನ್ನೂ ಇಂದು (ಮೇ 6) ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗುವ ಸಾಧ್ಯತೆಯಿದ್ದು, ಇದರಿಂದಾಗಿ ಮೇ 7 ರ ಸುಮಾರಿಗೆ ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಮೇ 8 ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕೇಂದ್ರೀಕೃತವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

ನಂತರ ಇದು ಉತ್ತರಾಭಿಮುಖವಾಗಿ ಮಧ್ಯ ಬಂಗಾಳ ಕೊಲ್ಲಿಯ ಕಡೆಗೆ ಚಲಿಸುವಾಗ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಐಎಂಡಿ ತನ್ನ ದೈನಂದಿನ ಹವಾಮಾನ ಬುಲೆಟಿನ್‌ನಲ್ಲಿ ಮೇ 7 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ದಕ್ಷಿಣ ಒಳಗಿನ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮೇ 7 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹೇಳಿದೆ.

ಆಗ್ನೇಯ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮುದ್ರಕ್ಕೆ ಇಳಿಯದಂತೆ IMD ಮೀನುಗಾರರಿಗೆ ಸಲಹೆ ನೀಡಿದೆ. ಮುಂದಿನ 3 ದಿನಗಳ ಕಾಲ ಈ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ಬೀಸಲಿದೆ. IMD ಪ್ರಕಾರ, ಮುಂದಿನ 2 ದಿನಗಳಲ್ಲಿ ಈಶಾನ್ಯ ಭಾರತದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ರಭಸದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+