Breaking: ಹವಾಮಾನ ವೈಪರಿತ್ಯ: ಬೆಂಗಳೂರಲ್ಲಿ ಅ.2 ರವರೆಗೆ ಮಳೆ

ಬೆಂಗಳೂರು, ಸೆಪ್ಟಂಬರ್ 27: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನದಿಂದ ಹಗುರ ಮಳೆ ಜತೆಗೆ ಚಳಿ ದಾಖಲಾಗಿದೆ. ಈ ವಾತಾವರಣ ಮುಂದಿನ ಅಕ್ಟೋಬರ್ 2ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರದವರೆಗೆ ನಗರದಲ್ಲಿ ಆಗಾಗ ಬಿಸಿಲಿನ ವಾತವರಣ ಕಂಡು ಬಂದರೂ ಸಹ ಮಧ್ಯಾಹ್ನದ ನಂತರ ಕೆಲವು ಬಡಾವಣೆಗಳಲ್ಲಿ ಪ್ರದೇಶಗಳಲ್ಲಿ ತುಂತುರು ಇಲ್ಲವೇ ಹಗುರದಿಂದ ಸಾಧಾರಣ ಮಳೆ ಆಗಬಹುದು. ಗುರುವಾರದಿಂದ ಅಕ್ಟೋಬರ್ 2ರ ವರೆಗೆ ಬಿಸಿಲಿನ ದರ್ಶನ ಅಪರೂಪ ಎನ್ನಲಾಗಿದೆ. ಇಡೀ ದಿನ ಮೋಡ ಕವಿದ ವಾತವರಣವೇ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ವೇಳೆ ಗರಿಷ್ಠ 30ಡಿಗ್ರಿ ಸೆಲ್ಸಿಯಸ್ ಮತ್ತು ಕನಿ‍ಷ್ಠ 20ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಈ ಸುಳಿಗಾಳಿ ಒಡಿಶಾ ಕರಾವಳಿ ಭಾಗದತ್ತ ಸಾಗಲಿದ್ದು, ನಂತರ ದುರ್ಬಲವಾಗಲಿದೆ. ಈ ಸಣ್ಣ ಪ್ರಮಾಣದ ಹವಾಮಾನ ಬದಲಾವಣೆ ಪ್ರಭಾವದಿಂದ ಬೆಂಗಳೂರು ನಗರ ಜಿಲ್ಲೆ ಸೇರಿ ಒಳನಾಡು ಜಿಲ್ಲೆಗಳಲ್ಲಿ ಮಳೆ ವಾತಾವರಣ ಕಂಡು ಬಂದಿದೆ. ಬೆಂಗಳೂರಿನಲ್ಲಿ ಶನಿವಾರದಿಂದ ಮಳೆ ಆರಂಭವಾಗಿದೆ. ಸೋಮವಾರ ಮಧ್ಯಾಹ್ನದ ನಂತರ ಸುರಿದ ಮಳೆ ಪೈಕಿ ಸಂಪಂಗಿರಾಮನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ತಿಳಿಸಿದೆ.

Cloudy sky with moderate rain expected in Bengaluru till October 2nd

ಸಂಪಂಗಿರಾಮನಗರ 33.5ಮಿಲಿ ಮೀಟರ್, ಸಂಪಂಗಿರಾಮನಗರ (2) 20ಮಿ.ಮೀ., ದಯಾನಂದಸಾಗರ 18ಮಿ.ಮೀ, ಕೊಟ್ಟಿಗೇಪಾಳ್ಯ, ಬೆಂಗಳೂರು ಉತ್ತರ ತಲಾ 15.5ಮಿ.ಮೀ, ವಿವಿಪುರಂನಲ್ಲಿ 13.5ಮಿ.ಮೀ. ಹಾಗೂ ರಾಜಾಜಿನಗರ ಮತ್ತು ನಾಗಪುರದಲ್ಲಿ ತಲಾ 10ಮಿ.ಮೀ. ಮಳೆ ಸುರಿದಿದೆ. ಉಳಿದ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಹಗುರ ಮಳೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+