ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಸ್‌ಮಸ್, ಹೊಸವರ್ಷ : ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿದೆ. ಡಿ.24 ಮತ್ತು 31ರಂದು ರೈಲುಗಳು ತಡರಾತ್ರಿ ತನಕ ಸಂಚಾರ ನಡೆಸಲಿವೆ.

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ಕುರಿತು ಪ್ರಕಟಣೆ ಹೊರಡಿಸಿದೆ. ಎಂ.ಜಿ ರಸ್ತೆ- ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗದ ರೈಲುಗಳು ಮಾತ್ರ ಎರಡು ದಿನ ಹೆಚ್ಚು ಹೊತ್ತು ಸಂಚಾರ ನಡೆಸಲಿವೆ. [ಕ್ರಿಸ್ ಮಸ್ ರಜೆ : ವಿಶೇಷ ಬಸ್ ಸೇವೆ]

namma metro

ಡಿಸೆಂಬರ್ 24 ಗುರುವಾರ ಮತ್ತು ಡಿ. 31ರ ಗುರುವಾರ ರೀಚ್‌-1 ಮಾರ್ಗ ಹಾಗೂ ರೀಚ್‌-3, 3ಎ ಮತ್ತು 3ಬಿ ಮಾರ್ಗಗಳಲ್ಲಿ ರೈಲುಗಳ ಸಂಚಾರದ ಸಮಯವನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೆಟ್ರೋ ನಿಗಮ ಮನವಿ ಮಾಡಿದೆ. [ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ]

ವೇಳಾಟಪಟ್ಟಿ : ಡಿಸೆಂಬರ್ 24ರ ಮಧ್ಯರಾತ್ರಿ 1 ಗಂಟೆಯ ತನಕ ಮತ್ತು ಡಿಸೆಂಬರ್ 31ರ ರಾತ್ರಿ 11 ರಿಂದ ಜನವರಿ 1ರ ಬೆಳಗ್ಗೆ 2 ಗಂಟೆಯವರೆಗೆ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಈ ಸಮಯದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ರೈಲು ಸಂಚಾರ ನಡೆಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಶೇಷ ಬಸ್ ಸೇವೆ : ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿದೆ. ಡಿಸೆಂಬರ್ 23 ಮತ್ತು 24ರಂದು ಬಸ್ಸುಗಳು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸಂಚಾರ ನಡೆಸಲಿವೆ. ವಿಶೇಷ ಬಸ್ಸುಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.

English summary
Bangalore Metro Rail Corporation (BMRCL) extended Namma metro train services till 1 am on December 25 for Christmas and till 2 am on New Year’s day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X