ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೊಂದು ತಿಂಗಳು ಉದ್ಯಾನನಗರಿ ಬೆಂಗಳೂರಲ್ಲಿ ಚಳಿರಾಯಂದೇ ಹವಾ!

|
Google Oneindia Kannada News

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್...

ಎಲ್ಲೋ ದೂರದಿಂದ ಕೇಳುತ್ತಿದ್ದ ಸುಪ್ರಭಾತ ಕಿವಿಗೆ ಬೀಳುತ್ತಿದ್ದಂತೆಯೇ ಸಮಯ ನೋಡಿದ್ರೆ ಅದಾಗಲೇ ಬೆಳಿಗ್ಗಿನ ಐದೂವರೆ! ಹೊರಗೆ ಕತ್ತಲು, ಕತ್ತಲು. ಈ ಚಳಿಲೀ ಏಳೋಕೆ ಸೋಮಾರಿತನವಾಗಿ ಸೂರ್ಯನೂ ಮಲಗಿರಬೇಕು! ಏನಾದರಾಗಲಿ ಇನ್ನೈದೇ ನಿಮಿಷ ನಾನೂ ಬೆಚ್ಚಗೆ ಹೊದ್ದು ಮಲಗಿಬಿಡೋಣ ಅನ್ನೋ ಅಷ್ಟರಲ್ಲಿ... ಬಾಸ್ ಮುಖ ನೆನಪಾಗಿ 'ಇಂಥ ಚಳಿಗಾಲದಲ್ಲಿ ಯಾಕಪ್ಪ ದೇವರೇ ಈ ಆಫೀಸು...' ಎಂದು ಶಪಿಸುತ್ತಲೇ ಬಾಯಲ್ಲಿ ಗೊಣಗಾಟದ ಸುಪ್ರಭಾತವೂ ತನ್ನಷ್ಟಕ್ಕೇ ಉಲಿದಿತ್ತು!

ಹೊರಗೆ ದಟ್ಟನೆ ಹೊಗೆಯಂತೆ ಆವರಿಸಿರೋ ಮಂಜು, ಮೈನಡುಗಿಸುವ ಚಳಿ... ಆ ಸುಂದರ ಬೆಳಗನ್ನು ಆಸ್ವಾದಿಸುತ್ತ ಹಬೆಯಾಡುವ ಕಾಫಿಯನ್ನು ಬಾಲ್ಕನಿಯಲ್ಲಿ ಕೂತು ಹೀರುತ್ತಿದ್ದರೆ... ಆಹಾ..! ಅದು ರಜೆಯ ದಿನದ ಕತೆವಾಯ್ತು.. ಆಫೀಸಿಗೆ ಹೋಗಬೇಕಾದಾಗ?

ಬೆಂಗಳೂರಲ್ಲಿ ಕೊರೆವ ಚಳಿ, ರೋಗಗಳ ಭೀತಿ, ಸಲಹೆಗಳು ಬೆಂಗಳೂರಲ್ಲಿ ಕೊರೆವ ಚಳಿ, ರೋಗಗಳ ಭೀತಿ, ಸಲಹೆಗಳು

ಕಳೆದೊಂದು ವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ಯಾರ ಬಾಯಲ್ಲಿ ಕೇಳಿದರೂ 'ಚಳಿ ಚಳಿ ತಾಳೆನು ಈ ಚಳಿಯಾ...' ಹಾಡು! ಮಳೆಗಾಲ ಮುಗಿದು, ಅಕ್ಟೋಬರ್ ತಿಂಗಳು ಬಂದರೂ ಬೆಂಗಳೂರಿನಲ್ಲಿ ಉರಿ ಉರಿ ಸೆಕೆ ಎಂದು ಹಲುಬುತ್ತಿದ್ದವರಿಗೆ ನವೆಂಬರ್ ಕೊನೆಯ ವಾರದ ಹೊತ್ತಿಗೆ ಚಳಿರಾಯನ ದರ್ಶನವಾಗಿದೆ. ಆದರೆ ಬೆಳಿಗ್ಗೆ ಎದ್ದು ಆಫೀಸಿಗೆ, ಸ್ಕೂಲು, ಕಾಲೇಜಿಗೆ ಹೋಗುವವರ ಪಾಲಿಗೆ ಮಾತ್ರ ಈ ಚಳಿರಾಯ ವಿಲನ್ ಆಗಿ ಅವತರಿಸಿದ್ದಾನೆ!

ಕನಿಷ್ಠ 13 ಡಿಗ್ರಿ ಸೆ.ಗೆ ತಲುಪಲಿದೆ ತಾಪಮಾನ!

ಕನಿಷ್ಠ 13 ಡಿಗ್ರಿ ಸೆ.ಗೆ ತಲುಪಲಿದೆ ತಾಪಮಾನ!

ಸ್ಕೈಮೆಟ್ ವೆದರ್ ವರದಿ ಪ್ರಕಾರ ಇಂದು(ನ.30) ಬೆಂಗಳೂರಿನಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಮತ್ತಷ್ಟು ಹೆಚ್ಚಲಿದ್ದು, ಕನಿಷ್ಠ 13 ಡಿಗ್ರಿ ಸೆಲ್ಷಿಯಸ್ ನಷ್ಟು ತಾಪಮಾನ ದಾಖಲಾಗಲಿದೆ. ಡಿಸೆಂಬರ್-ಜನವರಿಯಲ್ಲಿ ಮತ್ತಷ್ಟು ಕಡಿಮೆಯಾಗಬಹುದು.

ಚಳಿ ಕಳಚಿ ಬೇಸಿಗೆಯತ್ತ ಹೆಜ್ಜೆ: ತಾಪಮಾನ ಹೆಚ್ಚಳ ಚಳಿ ಕಳಚಿ ಬೇಸಿಗೆಯತ್ತ ಹೆಜ್ಜೆ: ತಾಪಮಾನ ಹೆಚ್ಚಳ

ಉತ್ತರ ಭಾರತ ನೆನೆದು ಸಮಾಧಾನ ಮಾಡ್ಕೊಳ್ಳಿ!

ಉತ್ತರ ಭಾರತ ನೆನೆದು ಸಮಾಧಾನ ಮಾಡ್ಕೊಳ್ಳಿ!

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕನಿಷ್ಠ ಮೈನಸ್ ಡಿಗ್ರಿಯವರೆಗೂ ತಲುಪುವ ತಾಪಮಾನ ನೆನೆದರೆ ಬೆಂಗಳೂರಿನ ಚಳಿ ಯಾವ ಮಹಾ ಎಂದು ಸಮಾಧಾನಪಟ್ಟುಕೊಳ್ಳಬೇಕು. ಜಮ್ಮು-ಕಾಶ್ಮೀರ, ಉತ್ತರಾಖಂಡ, ಕೆಲವೊಮ್ಮೆ ದೆಹಲಿ, ಹಿಮಾಚಲಪ್ರದೇಶದಂಥ ರಾಜ್ಯಗಳಲ್ಲಿ ಕನಿಷ್ಠ ಮೈನಸ್ ಡಿಗ್ರಿಯಷ್ಟು ತಾಪಮಾನ ದಾಖಲಾಗುವುದು ಸಾಮಾನ್ಯ. ಅದಕ್ಕೆ ಹೋಲಿಸಿದರೆ ಬೆಂಗಳೂರಿನ ಚಳಿ ಏನೂ ಅಲ್ಲ!

ಬೆಂಗಳೂರಿಗರೇ ಬೆಚ್ಚಗಿರಿ ಚಳಿ ಇನ್ನೂ ಹೆಚ್ಚಾಗಲಿದೆ!ಬೆಂಗಳೂರಿಗರೇ ಬೆಚ್ಚಗಿರಿ ಚಳಿ ಇನ್ನೂ ಹೆಚ್ಚಾಗಲಿದೆ!

ಉದ್ಯಾನ ನಗರಿಯ ಸೊಬಗು ಹೆಚ್ಚಿಸಿದ ಚಳಿರಾಯ

ಉದ್ಯಾನ ನಗರಿಯ ಸೊಬಗು ಹೆಚ್ಚಿಸಿದ ಚಳಿರಾಯ

ಅದೇನೇ ಇದ್ದಿರಲಿ, ತಣ್ಣನೆ ಬೀಸೋ ಗಾಳಿ, ತಂಪು ತಂಪು ವಾತಾವರಣ ಉದ್ಯಾನನಗರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿರುವುದಂತೂ ಸುಳ್ಳಲ್ಲ. ಕಬ್ಬನ್ ಪಾರ್ಕ್, ಲಾಲ್ ಬಾಗ್, ಸ್ಯಾಂಕಿ ಟ್ಯಾಂಕ್ ಮುಂತಾದ ಬೆಂಗಳೂರಿನ ಹಸಿರು ತಾಣಗಳು ಇಬ್ಬನಿಗೆ ಮೈಸೋಕಿಸಿಕೊಂಡಿವೆ. ಈ ಹಸಿರ ಸೊಬಗಿನೊಂದಿಗೆ ಸೇರಿ ಮೈಕೊರೆವ ಚಳಿಯೂ ಆಪ್ಯಾಯಮಾನವೆನ್ನಿಸಿದೆ.

ಇನ್ನೊಂದು ತಿಂಗಳು ಹೀಗೇ...

ಇನ್ನೊಂದು ತಿಂಗಳು ಹೀಗೇ...

ಇನ್ನೊಂದು ತಿಂಗಳಿಗೂ ಹೆಚ್ಚು ಕಾಲ ಉದ್ಯಾನ ನಗರಿಯಲ್ಲಿ ಚಳಿರಾಯಂದೇ ಹವಾ! ಸ್ಕೈಮೆಟ್ ವೆದರ್ ವರದಿ ಪ್ರಕಾರ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ಚಳಿಯ ಅನುಭವವಾಗಲಿದೆ. ಅದರಲ್ಲೂ ಡಿಸೆಂಬರ್ ಮೊದಲ ವಾರದಲ್ಲಿ ತಾಪಮಾನ ಕನಿಷ್ಠ 13 ಡಿಗ್ರಿ ಸೆಲ್ಷಿಯಸ್ ವರೆಗೂ ತಲುಪಲಿದೆ. ಯಾವುದಕ್ಕೂ ಮನೆಯಿಂದ ಆಚೆ ಹೊರಡೋ ಮುನ್ನ ಸ್ವೆಟರ್, ಶಾಲ್ ಅನ್ನಂತೂ ಮರೀಬೇಡಿ!

English summary
Winter in Garden city Bengaluru: Chill weather in Bengaluru will be continuing till December end. In first week of December temperature will be recorded minimum 13 degree celsius.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X