• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳ ಸಾಹಿತಿ ಸೂ. ಸುಬ್ರಮಣ್ಯ ವಿಧಿವಶ

|
Google Oneindia Kannada News

ಬೆಂಗಳೂರು, ನವೆಂಬರ್ 15; ಮಕ್ಕಳ ಸಾಹಿತಿ ಸೂ. ಸುಬ್ರಹ್ಮಣ್ಯ ವಿಧಿವಶರಾದರು. ಮೂಲತಃ ತುಮಕೂರು ಜಿಲ್ಲೆಯವರಾದ ಅವರು ಬೆಂಗಳೂರಿನ ಜಯನಗರದಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಸೋಮವಾರ ಸಂಜೆ 7.30ರ ಸುಮಾರಿಗೆ ಜಯನಗರದಲ್ಲಿನ ನಿವಾಸದಲ್ಲಿ ಸೂ. ಸುಬ್ರಮಣ್ಯ ವಿಧಿವಶರಾದರು. ಎಸ್. ಸೂರ್ಯನಾರಾಯಣ ರಾವ್, ತಾಯಿ ಕನಕಲಕ್ಷ್ಮಮ್ಮ ಪುತ್ರರಾದ ಸುಬ್ರಮಣ್ಯ 1935ರ ಜೂನ್ 5ರಂದು ಜನಿಸಿದ್ದರು.

2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪಟ್ಟಿ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪಟ್ಟಿ

ಪ್ರಾಥಮಿಕ ಶಿಕ್ಷಣವನ್ನು ಶ್ರೀರಂಗಪಟ್ಟಣ ಹಾಗೂ ಚನ್ನಪಟ್ಟಣದಲ್ಲಿ ಪೂರ್ಣಗೊಳಿಸಿದ್ದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿಎಸ್‌ಸಿ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ ಪಡೆದಿದ್ದರು. ಬಳಿಕ ರಿಸರ್ವ್ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದರು. ಕಚೇರಿಯಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು ಕನ್ನಡ ಸಂಘವನ್ನು ಸ್ಥಾಪಿಸಿದ ಹೆಗ್ಗಳಿಗೆ ಸೂ. ಸುಬ್ರಮಣ್ಯ ಅವರದ್ದಾಗಿತ್ತು.

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ! ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ!

ಪಂಜೆ ಮಂಗೇಶರಾವ್, ಹೊಯ್ಸಳ, ತೋನ್ಸೆ ಮಂಗೇಶರಾಯರು, ಮಚ್ಚಿಮಲೆ ಶಂಕರನಾರಾಯಣರಾಯರು, ರಾಜರತ್ನಂ ಮುಂತಾದವರ ಪ್ರಭಾವದಿಂದ ಮಕ್ಕಳ ಸಾಹಿತ್ಯವನ್ನು ಸೂ. ಸುಬ್ರಮಣ್ಯ ರಚಿಸಿದರು. ಫ್ರಾನ್ಸ್‌ನಲ್ಲಿ ನ್ಯಾಷನಲ್ ರಿಸರ್ಚ್ ಸೊಸೈಟಿ ಫಾರ್ ಚಿಲ್ಡನ್ಸ್ ಲಿಟರೇಚರ್ (1983) ಆಯೋಜಿಸಿದ್ದ ಸಮ್ಮೇಳನದಲ್ಲಿ ಹಾಗೂ ಜರ್ಮನಿಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು 'ಕನ್ನಡ ಮಕ್ಕಳ ಸಾಹಿತ್ಯದ ಮೇಲೆ ಭಾರತದ ಪ್ರಾಚೀನ ಸಾಹಿತ್ಯದ ಪ್ರಭಾವ' ಎಂಬ ಪ್ರಬಂಧವನ್ನು ಮಂಡಿಸಿದ್ದರು.

ಅಮೆರಿಕದ ಜಾರ್ಜಿಯಾದಲ್ಲಿ 'ಕನ್ನಡ ಭಾಷಾ ದಿನ ಮತ್ತು ರಾಜ್ಯೋತ್ಸವ ದಿನ' ಅಮೆರಿಕದ ಜಾರ್ಜಿಯಾದಲ್ಲಿ 'ಕನ್ನಡ ಭಾಷಾ ದಿನ ಮತ್ತು ರಾಜ್ಯೋತ್ಸವ ದಿನ'

'ಕನ್ನಡ ವಿಜ್ಞಾನ ಪರಿಷತ್ತು' ಸ್ಥಾಪಿಸಿ ಅದರ ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಸೂ. ಸುಬ್ರಮಣ್ಯ ರಚಿಸಿದ 'ರಕ್ತದ ಕಥೆ' ನಾಟಕದಲ್ಲಿ ಬಿಳಿಯ ರಕ್ತ ಕಣಗಳು, ಕೆಂಪು ರಕ್ತ ಕಣಗಳು, ಪ್ಲಾಟ್ ಲೆಟ್ಸ್ ಪಾತ್ರರೂಪದಲ್ಲಿ ಮಾತನಾಡುತ್ತವೆ. ಇದನ್ನು ನೋಡಿದ ಮಕ್ಕಳಿಗೆ ರಕ್ತದ ಮಹತ್ವವನ್ನು ಅರಿಯಲು ಸಹಕಾರಿಯಾಗುತ್ತದೆ.

ಸೂ. ಸುಬ್ರಮಣ್ಯ ನಮ್ಮ ಸೂರ್ಯ, ಶಬ್ದಸಾಗರದಲ್ಲಿ ಮತ್ತು ನಕ್ಷತ್ರ ನಕ್ಕಿತು. ಇವುಗಳಲ್ಲದೆ ಅದೃಷ್ಟವೇ, ಅನ್ವೇಷಣಯೇ?, ಮೇಘನಾದ ಸಹಾ, ಪ್ರಾಣಿಗಳ ಮೋಜು, ಅಲೆಗ್ಸಾಂಡರ್ ಪ್ಲೆಮಿಂಗ್, ಧೂಮಕೇತು, ಪೆನಿಸಿಲನ್ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಷ್‌ನಿಂದ 'ದಿ ರೆಡ್ ರಿವರ್ ಆಫ್ ಲೈಫ್', 'ಆಲ್ಬರ್ಟ್ ಐನ್ ಸ್ಟೈನ್, 'ವಿಸ್ಮಯಕರ ವಿಜ್ಞಾನ', 'ಮಾಲಿನ್ಯ' 'ಈ ನಮ್ಮ ಜಗತ್ತು' ಕೃತಿಗಳನ್ನು ಅನುವಾದಿಸಿದ್ದಾರೆ.

ಆಲ್ ಫ್ರೆಡ್ ನೊಬೆಲ್, ಜಗದೀಶ್ ಚಂದ್ರಬೋಸ್, ಆಚಾರ‍್ಯ ಪ್ರಫುಲ್ಲ ಚಂದ್ರ ರಾಯ್, ಅಲೆಕ್ಸಾಂಡರ್ ಫ್ಲೆಮಿಂಗ್ ಹೀಗೆ ಇತರೆ ವಿಜ್ಞಾನಿಗಳ ಜೀವನ ಚರಿತ್ರೆ ರಚಿಸಿದ್ದಾರೆ. 'ಬಿಳಲುಗಳು' (ಪ್ರಬಂಧಗಳು), 'ಹಣ್ಣಾಗದ ಹೂ' (ಕಥಾ ಸಂಕಲನ), 'ಸಾಕೋದ್ನರಿ ತಾತಾ (ನಾಟಕ), 'ಕಣ್ಣುಗಳು (ರೇಡಿಯೋ ನಾಟಕ)' 'ಸೀಕರಣೆ' (ಸಂಕೀರ್ಣ) ಕೃತಿಗಳಲ್ಲದೆ ಬಿ. ಜಿ. ಎಲ್ ಸ್ವಾಮಿಯವರ ಸಂಸ್ಮರಣೆ ಗ್ರಂಥ 'ಸ್ವಾಮಿಯಾನ', ಪ್ರೊ. ಜಿ. ವೆಂಕಟಸುಬ್ಬಯ್ಯನವರ ಅಭಿನಂದನಾ ಗ್ರಂಥ 'ಚಿರಂಜೀವಿ' ಮತ್ತು ಹಾಸ್ಯ ಸಾಹಿತಿ ಟಿ. ಸುನಂದಮ್ಮನವರ ಅಭಿನಂದನಾ ಗ್ರಂಥ 'ಸುನಂದಾಭಿನಂದನ' ಗ್ರಂಥಗಳನ್ನು ಸಂಪಾದಿಸಿದ್ದಾರೆ.

ಪ್ಯಾರೀಸ್‌ನ ಅಂತಾರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಂಶೋಧನ ಸಂಸ್ಥೆ, ಭಾರತೀಯ ಜಿಯಾಲಾಜಿಕಲ್ ಸೊಸ್ಯೆಟಿಯ ಫೆಲೊ ಆಗಿ ಕಾರ್ಯ ನಿರ್ವಹಿಸಿದ ಸೂ. ಸುಬ್ರಮಣ್ಯ 'ರಕ್ತದ ಕಥೆ' ಕೃತಿಗೆ ಮದರಾಸಿನ ಭಾಷಾಪುಸ್ತಕ ಸಂಸ್ಥೆಯಿಂದ ಪ್ರಶಸ್ತಿ 1965ರಲ್ಲಿ ಸಿಕ್ಕಿದೆ.

'ನಮ್ಮ ಸೂರ‍್ಯ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1970ರಲ್ಲಿ ಲಭಿಸಿದೆ. 'ಶಬ್ದ ಸಾಗರದಲ್ಲಿ' ಕೃತಿಗೆ ಎನ್, ಸಿ. ಇ. ಆರ್. ಟಿ. ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಕರ್ನಾಟಕ ಸರಕಾರದ ಬಹುಮಾನ ಮತ್ತು 'ನಕ್ಷತ್ರ ನಕ್ಕಿತು' ಕೃತಿಗೆ ಕಾವ್ಯಾನಂದ ಪುರಸ್ಕಾರ ಮುಂತಾದ ಪ್ರಶಸ್ತಿ, ಗೌರವಗಳು ದೊರೆತಿವೆ.

English summary
Noted Kannada child poet Su Subramanya died on November 15, 2021 at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X