ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಟರ್ ಪ್ಲಾನ್-2031 ಕರಡು ಪರಿಷ್ಕರಣೆ: ಸಿದ್ದರಾಮಯ್ಯ ಭರವಸೆ

|
Google Oneindia Kannada News

ಬೆಂಗಳೂರು, ಜನವರಿ 17: ಬಿಡಿಎ ಸಿದ್ಧಪಡಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ-2031 ಕರಡು ಅವೈಜ್ಞಾನಿಕವಾಗಿದೆ ಎಂಬ ವ್ಯಾಪಕ ದೂರು, ಆಕ್ಷೇಪಗಳ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಸಲಹೆ ಮೇರೆಗೆ ಸೂಕ್ತ ತಿದ್ದುಪಡಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಾಸ್ಟರ್ ಪ್ಲಾನ್ 2031 ಕುರಿತಂತೆ ಮಂಗಳವಾರ ವಿಧಾನಸೌಧದಲ್ಲಿ ನಗರದ ಸಂಸದರು, ಶಾಸಕರು ಜನಪ್ರತಿನಿಧಿ ಹಾಗೂ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಮೆಟ್ರೋ ಪಾಲಿಟನ್ ಪ್ಲಾನಿಂಗ್ ಕಮಿಟಿ ಸಭೆಯಲ್ಲಿ ಸಿಎಂ ಭರವಸೆ ನೀಡಿದರು.

ಬಿಡಿಎ 'ಮಾಸ್ಟರ್ ಪ್ಲಾನ್ 2031'ಕ್ಕೆ ಛೀಮಾರಿ ಹಾಕಿದ ರಾಜೀವ್ ಚಂದ್ರಶೇಖರ್ಬಿಡಿಎ 'ಮಾಸ್ಟರ್ ಪ್ಲಾನ್ 2031'ಕ್ಕೆ ಛೀಮಾರಿ ಹಾಕಿದ ರಾಜೀವ್ ಚಂದ್ರಶೇಖರ್

ಹಿಂದೆ ಬಿಡಿಎ ವ್ಯಾಪ್ತಿಗೆ ಸೀಮಿತವಾಗಿದ್ದ ಸಿಡಿಪಿಯನ್ನು ಪ್ತಸ್ತುತ ಬಿಎಂಆರ್ ಡಿಎ ವ್ಯಾಪ್ತಿವರೆಗೆ ವಿಸ್ತರಣೆ ಮಾಡಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಬಿಡಿಎ ಪ್ರಕಟಿಸಿರುವ ಈ ಸಿಡಿಪಿ ಕರಡಿನ ಬಗ್ಗೆ ನಗರದ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Chief minister assures RMP draft will be revisited

ಸಾರ್ವಜನಿಕರಿಂದ 2,600ಕ್ಕೂ ಹೆಚ್ಚು ಆಕ್ಷೇಪಗಳು ಸ್ವೀಕೃತವಬಾಗಿವೆ. ಜನವರಿ 23 ರವರೆಗೆ ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಈ ಕುರಿತು ಬಿಡಿಎಯಲ್ಲಿರುವ ಮೇಲುಸ್ತುವಾರಿ ಸಮಿತಿ ಪರಿಶೀಲಿಸಿ ಸೂಕ್ತ ತೀರ್ಮಾಣ ಕೈಗೊಳ್ಳಲಿದೆ ಎಂದರು.

ಮಾಸ್ಟರ್ ಪ್ಲಾನ್ ಕರಡು ಬಗ್ಗೆ ಆಕ್ಷೇಪ ಸಲ್ಲಿಕೆ ಅವಧಿ ವಿಸ್ತರಣೆ ಮಾಡಬೇಕೆಂಬ ಜನಪ್ರತಿನಿಧಿಗಳ ಸಲಹೆ ಮಾಡಿದ್ದಾರೆ, ಆದರೆ ದಿನಾಂಕ ವಿಸ್ತರಣೆ ಅಗತ್ಯವಿಲ್ಲ. ಈಗಾಗಲೇ ನೀಡಿರುವ ಗಡುವಿಗೆ ಬದ್ಧರಾಗಬೇಕು ಎಂಬುದು ನನ್ನ ಅಭಿಪ್ರಾಯ, ಕೆರೆಗಳ ಬಫರ್ ಜೋನ್ ಗುರುತಿಸುವ ಸಂಬಂಧ ಹಸಿರು ಪೀಠದ ನಿರ್ದೇಶನದಂತೆ ನಡೆದುಕೊಳ್ಳಲಾಗಿದೆ ವೈಜ್ಞಾನಿಕವಾಗಿ ಸಿಡಿಪಿ ಸಿದ್ಧಪಡಿಸಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

English summary
Chief minister Siddaramaiah has been assured that the BDA planning committee will review the objections filed by the general public and opposition party regarding Revised Master Plan draft prepared by the authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X