• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ನೇರವಾಗಿ ಮಾತನಾಡುತ್ತಾರೆ ಆದರೆ ಬೆನ್ನಿಗೆ ಚೂರಿ ಹಾಕುವವರಲ್ಲ: ಚೆಲುವರಾಯಸ್ವಾಮಿ

|

ಬೆಂಗಳೂರು, ಆಗಸ್ಟ್ 26: ಸಿದ್ದರಾಮಯ್ಯ ಅವರು ಇದ್ದಿದ್ದನ್ನು ಇದ್ದಹಾಗೆ ನೇರವಾಗಿ ಮಾತನಾಡುವ ಮನುಷ್ಯ ಯಾವುದೇ ಕಾರಣಕ್ಕೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವವರಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ವಾತಾವರಣ ಸರಿಯಿಲ್ಲ, ನಾನೇನು ಮಾಡುವುದಿಲ್ಲ ಎಂದು ಹೇಳಿದ್ದಿರಿ ಈಗ ಎರಡೇ ದಿನಕ್ಕೆ ಎಲ್ಲವೂ ಸರಿಹೋಯಿತೇ, ಈ ಹಿಂದೆ ನೀವು ಏನು ಮಾಡಿದ್ದಿರಿ ಎಂದು ಗೊತ್ತಿಲ್ಲವೇ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

   ಮತ್ತೆ ಸಿಎಂ ಆಗಬೇಕಂತೆ ಸಿದ್ದರಾಮಯ್ಯ | Oneindia Kannada

   ಎಚ್ಡಿಕೆ ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣನ ಹೆಸರು ಹಾಳು ಮಾಡುತ್ತಿದ್ದಾರೆ: ಚೆಲುವರಾಯಸ್ವಾಮಿ

   ಮೊದಲೇ ಸಿದ್ದರಾಮಯ್ಯ ಇರೋದಾದರೆ ನಮಗೆ ಕಾಂಗ್ರೆಸ್​ ಸಹವಾಸ ಬೇಡ ಎಂದು ಹೇಳಬೇಕಿತ್ತು. ಮಂಡ್ಯದಲ್ಲಿ ಡಮ್ಮೀ ಅಭ್ಯರ್ಥಿ ಹಾಕಿಸಿಕೊಂಡು ಗೆದ್ದಿದ್ದೀರಿ. ಒಕ್ಕಲಿಗರ ಸಮಾಜವನ್ನು ಬಳಸಿಕೊಂಡು ಹೀಗೇಕೆ ಮಾಡುತ್ತಿದ್ದೀರಿ.

   ನಿಮಗೆ ಕಾಂಗ್ರೆಸ್ಸನ್ನು ಕಂಡ್ರೆ ಆಗೋದಿಲ್ಲ, ಬಿಜೆಪಿಯೂ ಆಗಲ್ಲ. ಮತ್ಯಾವ ಪಕ್ಷವೂ ನಿಮಗೆ ಆಗೋದಿಲ್ಲ ಎಂದರೇ 120 ಸೀಟು ಗೆಲ್ಲೋವರೆಗೂ ಸುಮ್ಮನಿದ್ದಿರಿ. ನೀವು ಇಲ್ಲಿಯವರೆಗೂ ಯಾವುದೇ ಒಕ್ಕಲಿಗೆ ಕುಟುಂಬವನ್ನು ಬೆಳೆಸಿಲ್ಲ. ಆದರೂ, ನಮ್ಮ ಸಮಾಜದವರು ಯಾರಿಗೂ ಕೊಡದಷ್ಟು ಬೆಂಬಲ ನಿಮಗೆ ನೀಡಿದ್ದಾರೆ.

   ಅನರ್ಹ ಶಾಸಕ ಗೋಪಾಲಯ್ಯ, ನಾರಾಯಣಗೌಡ ಹಾಗೂ ವಿಶ್ವನಾಥ್ ಜೆಡಿಎಸ್ ಶಾಸಕರು ಬಿಜೆಪಿಗೆ ಹೋದರಲ್ಲವೇ ಇದಕ್ಕೆ ಹೊಣೆ ಯಾರು ಎಂದಿದ್ದಾರೆ.

   ಮುಂದೆ ಬರಲಿರುವ ಮಾಜಿ ಸಿಎಂ ಕುಮಾರಸ್ವಾಮಿ, ದೇವೇಗೌಡರು ಹೀಗೆ ಮಾತಾಡುತ್ತಿದ್ದಾರೆ. ತಮ್ಮ ಹಿತಾಸಕ್ತಿ ಬೇಯಿಸಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬಿಟ್ಟರೇ ಯಾವುದಾದ್ರೂ ಒಕ್ಕಲಿಗ ನಾಯಕರ ಕುಟುಂಬ ಉಳಿದಿದೆಯೇ. 20 ವರ್ಷದ ದೇವೇಗೌಡರ ರಾಜಕಾರಣದಲ್ಲಿ ಬಿಜೆಪಿ ಉತ್ತಮ ಅಂದಿದ್ದು ಇದೇ ಮೊದಲು ಎಂದು ವ್ಯಂಗ್ಯವಾಗಿ ಮಾತನಾಡಿದರು.

   English summary
   Former MLA Cheluvarayaswamy has said that Siddaramaiah is who speaks directly to what he has been through.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X