ಜೆಜೆ ನಗರ ಚಂದ್ರು ಕೊಲೆ ಪ್ರಕರಣದಲ್ಲಿ ಪೊಲೀಸ್ ಆಯುಕ್ತರಿಂದಲೇ ಸುಳ್ಳು: ಬಿಜೆಪಿ

ಬೆಂಗಳೂರು, ಏಪ್ರಿಲ್ 9: ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿರುವ ಚಂದ್ರು ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಸ್ವತಃ ಪೊಲೀಸ್ ಆಯುಕ್ತರೇ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉರ್ದು ಬರಲಿಲ್ಲ ಎಂಬ ಕಾರಣಕ್ಕಾಗಿಯೇ ಚಂದ್ರುರನ್ನು ಕೊಲೆ ಮಾಡಲಾಗಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿರುವ ಮಾತು ಸರಿಯಾಗಿದೆ ಎಂದರು. ಈ ಪ್ರಕರಣವು ತಮ್ಮ ತಲೆಗೆ ಬರುತ್ತದೆ ಎಂಬ ಕಾರಣಕ್ಕೆ ಪೊಲೀಸ್ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ ಎಂದು ದೂಷಿಸಿದರು.

"ಬೈಕ್ ಅಪಘಾತ ನಡೆದಿರುವುದು ನಿಜವಾಗಿದ್ದು, ಈ ವೇಳೆ ಗಲಾಟೆ ನಡೆದಿದೆ. ಉರ್ದುವಿನಲ್ಲಿ ಮಾತನಾಡುವಂತೆ ಚಂದ್ರುಗೆ ಹೇಳಿದ್ದಾರೆ. ಉರ್ದು ನಹಿ ಎಂದು ಹೇಳಿದಾಗ ಚಂದ್ರುನನ್ನು ಚಾಕುವಿನಿಂದ ಚುಚ್ಚು ಹತ್ಯೆ ಮಾಡಲಾಗಿದೆ. ಮುಸ್ಲಿಂ ಗೂಂಡಾಗಳು ಚಂದ್ರುವಿನ ಹತ್ಯೆ ಮಾಡಿದ್ದಾರೆ," ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ದೂಷಿಸಿದ್ದಾರೆ.

Chandru Murder case; He was murdered for not speaking Urdu and the Police commissioner had lied says BJP MLC Ravikumar

ಚಂದ್ರುವಿನ ಸ್ನೇಹಿತ ಸೈಮನ್ ಹೇಳಿರುವುದು ಸತ್ಯ:

"ಬೆಂಗಳೂರು ಗೋರಿಪಾಳ್ಯದಲ್ಲಿ ನಡೆದಿರುವ ಚಂದ್ರು ಹತ್ಯೆ ಪ್ರಕರಣದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಸತ್ಯವಾಗಿದೆ. ಈ ವಿಚಾರದಲ್ಲಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಸುಳ್ಳು ಹೇಳುತ್ತಿದ್ದಾರೆ. ಚಂದ್ರುವಿನ ಸ್ನೇಹಿತ ಸೈಮನ್ ಹೇಳುತ್ತಿರುವು ಸತ್ಯವಾಗಿದೆ. ಈ ಕುರಿತು ತನಿಖೆ ನಡೆಸಲಿ," ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದೇನು?:

"ಕಳೆದ ಏಪ್ರಿಲ್ 5ರ ಮಧ್ಯ ರಾತ್ರಿ ಸ್ನೇಹಿತನೊಂದಿಗೆ ಚಂದ್ರು ಮೈಸೂರು ರಸ್ತೆ ಕಡೆಗೆ ಹೋಗಿದ್ದರು. ವಾಪಸ್ಸು ಮರಳುತ್ತಿದ್ದಾಗ ಅವರ ಬೈಕ್ ಮತ್ತೊಂದು ಬೈಕ್‌ಗೆ ತಗುಲಿದೆ. ಈ ವೇಳೆ ಗಲಾಟೆ ನಡೆದಿದೆ. ಗಲಾಟೆಗೆ ಸ್ಥಳೀಯ ಗುಂಪು ಸೇರಿಕೊಂಡಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಚಂದ್ರು ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಗಾಯಗೊಂಡಿದ್ದ ಚಂದ್ರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಧಿಕ ರಕ್ತ ಸ್ರಾವದಿಂದಾಗಿ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ," ಎಂದು ಘಟನೆಯ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಟ್ವೀಟ್ ಮಾಡಿದ್ದರು.

ಮೊದಲು ಹೇಳಿಕೆ ನೀಡಿ ಉಲ್ಟಾ ಹೊಡೆದ ಅರಗ:

ಬೆಂಗಳೂರಿನಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ತದನಂತರದಲ್ಲಿ ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದಿದ್ದರು. 'ನನ್ನ ಹೇಳಿಕೆಯಲ್ಲಿ ತಪ್ಪಾಗಿದೆ. ತಕ್ಷಣದ ಮಾಹಿತಿಯನ್ನು ಆಧರಿಸಿ ಮಾಹಿತಿಯನ್ನು ಕೊಟ್ಟಿದ್ದನು. ಅದು ಭಾಷೆ ವಿಚಾರಕ್ಕೆ ಆಗಿರುವ ಹತ್ಯೆ ಅಲ್ಲ. ಮಾಹಿತಿ ಇಲ್ಲದೇ ಮಾತನಾಡಿದ್ದು, ತಪ್ಪಾಗಿದೆ. ಬೈಕ್ ಡಿಕ್ಕಿಯಾಗಿದ್ದು ಬಿಟ್ಟರೆ ಯಾವುದೇ ಹಿನ್ನೆಲೆ ಇಲ್ಲ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಉಲ್ಟಾ ಹೊಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+