ಚಾಮರಾಜಪೇಟೆ ಚುನಾವಣಾ ಫಲಿತಾಂಶ 2023: ಅಬ್ಬಬ್ಬಾ ಲಾಟರಿ! ಜಮೀರ್ ಅಬ್ಬರಕ್ಕೆ ಬಿಜೆಪಿ ಧೂಳಿಪಟ!
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಬರಕ್ಕೆ ಬಿಜೆಪಿ ಧೂಳಿಪಟವಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿ ಇಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಜಮೀರ್ ಅಹ್ಮದ್ ವಿರುದ್ಧ ಹಿಂದೂ ಅಸ್ತ್ರವನ್ನು ಪ್ರಯೋಗಿಸಲು ಮುಂದಾದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಕನಿಷ್ಠ ಹೋರಾಟವನ್ನು ನೀಡದೆ ಭಾಸ್ಕರ್ ರಾವ್ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಜಮೀರ್ ಅಹಮದ್ ಗೆಲುವು ಕಂಡಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಸದ್ಯದ ಮಾಹಿತಿ ಪ್ರಕಾರ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಕಂಡಿದ್ದಾರೆ.

2005ರಿಂದ ಜಮೀರ್ ಅಹ್ಮದ್ ಇಲ್ಲಿ ಸೋಲಿಲ್ಲದ ಸರದಾರನಾಗಿದ್ದು, ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. 2005ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಅವರು ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. 2008 ಮತ್ತು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಅವರು, ನಂತರ ಹೆಚ್ ಡಿ ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ಕಾಂಗ್ರೆಸ್ ಸೇರಿಕೊಂಡಿದ್ದರು.
6 ಜನ ಜೆಡಿಎಸ್ ಶಾಸಕರ ಜೊತೆ ಕಾಂಗ್ರೆಸ್ ಸೇರಿದ ಜಮೀರ್ ಅಹಮದ್ 2018ರ ಚುನಾವಣೆಯಲ್ಲಿ ಕೂಡ ಭರ್ಜರಿ ಗೆಲುವು ಕಂಡಿದ್ದರು. 2018ರಲ್ಲಿ ಅಭ್ಯರ್ಥಿ ಎಂ ಲಕ್ಷ್ಮಿನಾರಾಯಣ ವಿರುದ್ಧ 33,137 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಮುಸ್ಲಿಂ ಸಮುದಾಯದ ಮತಗಳೇ ಜಮೀರ್ ಶಕ್ತಿ
ಚಾಮರಾಜಪೇಟೆ ಮುಸ್ಲಿಮ್ ಸಮುದಾಯ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಇಲ್ಲಿ 80 ಸಾವಿರ ಮುಸ್ಲಿಂ ಮತದಾರರಿದ್ದು ಕಾಂಗ್ರೆಸ್‌ಗೆ ಸಾಮೂಹಿಕವಾಗಿ ಮತ ಹಾಕಿದ್ದಾರೆ. ದಲಿತ ಸಮುದಾಯದ 65 ಸಾವಿರ ಮತದಾರರು ಇದ್ದು, ಒಕ್ಕಲಿಗ 10 ಸಾವಿರ, ಕುರುಬರು 9500, ಕ್ರೈಸ್ತರು 12 ಸಾವಿರ, ಬ್ರಾಹ್ಮಣರು 5 ರಿಂದ 8 ಸಾವಿರ, ತಮಿಳು ಭಾಷಿಕರು 26 ಸಾವಿರ, ಇತರರು 35000 ಮತದಾರರು ಇದ್ದಾರೆ.












Click it and Unblock the Notifications