Get Updates
Get notified of breaking news, exclusive insights, and must-see stories!

ಬಾಲಿವುಡ್ ನಟ ಶಾರುಖ್ ಖಾನ್‌ಗೆ ಕುಟುಕಿದ ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು, ಜನವರಿ 23: ಬಾಲಿವುಡ್ ನಟ ಶಾರುಖ್ ಖಾನ್ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದರ ಬಗ್ಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅಣಕವಾಡಿದ್ದಾರೆ.

ಗುರುವಾರ ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಸೂಲಿಬೆಲೆ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಶಾರುಖ್ ಖಾನ್ ಕ್ಯಾರವಾನ್ ಇಳಿದು ಬರುತ್ತಾ ಸೇದಿದ ಸಿಗರೇಟ್‌ನ್ನು ರಸ್ತೆಯಲ್ಲೇ ಎಸೆಯುತ್ತಾರೆ. ಆಗ ಅವರ ಅಂಗ ರಕ್ಷಕ ಆ ಸಿಗರೇಟ್‌ನ್ನು ಕಾಲಿನಿಂದ ತುಳಿದು ಆರಿಸುತ್ತಾರೆ.

Chakravarti Sulibele Share A Video On Twitter About Shahrukh Khan Smoking

''ಬಾಲಿವುಡ್ ಬಾದಶಾ ಇಲ್ಲಿ ಏನು ಮಾಡುತ್ತಿದ್ದಾರೆ ನೋಡಿ? ಭವಿಷ್ಯದ ಭಾರತಕ್ಕೆ ಈ ರೀತಿ ಪಾಠ ಮಾಡುತ್ತಿರಬಹುದಾ?'' ಎಂದು ಸೂಲಿಬೆಲೆ ಅಣಕ ಆಡಿದ್ದಾರೆ. ಈ ವಿಡಿಯೋ ಎಲ್ಲಿ ನಡೆದಿದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಸಾರ್ವಜನಿಕ ಸ್ವಚ್ಛತೆ ಬಗ್ಗೆ ಮಾದರಿಯಾಗಬೇಕಿದ್ದ, ಬಾಲಿವುಡ್ ನಟ ಈ ರೀತಿ ನಡೆದುಕೊಂಡಿದ್ದಕ್ಕೆ ನೆಟ್ಟಿಗರು ಅಸಮಾಧಾನ ತೋರ್ಪಡಿಸಿದ್ದಾರೆ.

ಈ ವಿಷಯದ ಬಗ್ಗೆ ನೆಟ್ಟಿಗರು ಸೂಲಿಬೆಲೆ ಕಾಲೆಳದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದರ ಬಗ್ಗೆ ಏನೂ ಮಾತಾಡುತ್ತಿಲ್ವಲ್ಲ? ಈ ವಿಡಿಯೋ ಎಲ್ಲಿಂದ ಎತ್ತಾಕಿಕೊಂಡು ಬಂದಿದ್ದೀರಾ? ಎಂದು ಷರೀಫ್ ಕೋಡಿಪಾಳ್ಯ ಎನ್ನುವರು ಸೂಲಿಬೆಲೆ ಕೆಣಕಿದ್ದಾರೆ. ಇನ್ನೂ ಕೆಲವರು ಶಿವಸೇನೆಯ ಬಾಳಾ ಠಾಕ್ರೆ ಸಿಗರೇಟ್ ಸೇದುವ ಫೋಟೊ ಹಾಕಿ ಕಾಲೆಳದಿದ್ದಾರೆ. ವಿಜಯ್ ಎನ್ನುವರು, ''ಏನಪ್ಪಾ ಚಕ್ರವರ್ತಿ ನೆನ್ನೆ ಮಂಗಳೂರಿನಲ್ಲಿ ಬಾಂಬ್ ಇಟ್ಟವನ ಬಗ್ಗೆ ಟ್ವೀಟ್ ಮಾಡ್ಲೆ ಇಲ್ಲ ಯಾಕೆ ಅವನು ಹಿಂದೂ ಅಂತಾನಾ...? ಇಲ್ಲಿ ಒಬ್ಬ ಸಿಗರೇಟ್ ಇಟ್ಟಿದಕ್ಕೆ ನಿನ್ನ ಪೌರುಷ ತೋರಿಸ್ತಾ ಇದ್ದೀಯ?'' ಎಂದು ಸೂಲಿಬೆಲೆ ಯಾವಾಗಲೂ ಇಬ್ಬಗೆಯ ನೀತಿಯನ್ನು ಟ್ವಿಟ್ಟರ್‌ನಲ್ಲಿ ಅನುಸರಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+