ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿ: ಅತಿವೃಷ್ಟಿಯಿಂದ ವಿದ್ಯುತ್ ಅಡಚಣೆ; ದಾಖಲಾತಿಗಳ ಪರಿಶೀಲನೆಗೆ ಮತ್ತಷ್ಟು ಅವಕಾಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ರಾಜ್ಯಾದ್ಯಂತ ವಿಪರೀತ ಮಳೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಗೊಂಡಿರುವ ಹಿನ್ನೆಲೆಯಲ್ಲಿ, ಸಿಇಟಿ ಬರೆದಿರುವ ಅಭ್ಯರ್ಥಿಗಳಿಗೆ ಕೆಲವು ಆನ್ ಲೈನ್ ದಾಖಲಾತಿಗಳನ್ನು ಸರಿಯಾಗಿ ನಮೂದಿಸಲು ಮತ್ತಷ್ಟು ಕಾಲಾವಕಾಶ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸಿಇಟಿ ಬರೆದಿರುವ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೀಡಲಾಗಿರುವ ಈ ಕಾಲಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಸಿಇಟಿ ಬಿಕ್ಕಟ್ಟು: 75:25 ಅನುಪಾತ ಸೂತ್ರ ತಿರಸ್ಕರಿಸಿದ ಕೆಇಎಸಿಇಟಿ ಬಿಕ್ಕಟ್ಟು: 75:25 ಅನುಪಾತ ಸೂತ್ರ ತಿರಸ್ಕರಿಸಿದ ಕೆಇಎ

ಶಾಲಾ ದಾಖಲಾತಿ ಪರಿಶೀಲನೆ ಆಗದಿರುವ ಅಭ್ಯರ್ಥಿಗಳಿಗೆ

ಇದರಂತೆ ಶಾಲಾ ವ್ಯಾಸಂಗದ ವಿವರಗಳನ್ನು ಮೊದಲು ಅಪೂರ್ಣವಾಗಿ ತುಂಬಿರುವವರು ಸರಿಯಾದ ವಿವರಗಳನ್ನು ತುಂಬಲು ಸೆ.1ರಿಂದ 7ರವರೆಗೆ ಪ್ರತಿದಿನ ರಾತ್ರಿ 10ರಿಂದ ಮರುದಿನ ಬೆಳಗ್ಗೆ 8ರವರೆಗೆ (ಭಾನುವಾರ ಪೂರ್ತಿ ದಿನ) ಅವಕಾಶ ಇರಲಿದೆ. ಇದು ಈವರೆಗೂ ಶಾಲಾ ದಾಖಲಾತಿ ಪರಿಶೀಲನೆ ಆಗದಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ ಆಗಲಿದೆ.

CET: Power Interruption due to Heavy Rain; Further opportunity for verification of records

ಹಾಗೆಯೇ, ಶಾಲಾ ವಿವರಗಳು ಮತ್ತು ಜಿಲ್ಲಾ/ತಾಲ್ಲೂಕು ವಿವರಗಳನ್ನು ತುಂಬದೆ ಇದ್ದಲ್ಲಿ ಅಂಥವರಿಗೆ ಇದಕ್ಕೆ ಆಯಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇದನ್ನು ಸರಿಪಡಿಸಿಕೊಳ್ಳಲು ಸೆ.7ರವರೆಗೆ ಅವಕಾಶ ಕೊಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾತಿ ಪ್ರಮಾಣ ಪತ್ರ ಆರ್‌ಡಿ ನಂಬರ್ ತಿದ್ದುಪಡಿಗೂ ಅವಕಾಶ

ಒಂದೆರಡು ವರ್ಷಗಳ ಶಾಲಾ ವಿವರಗಳನ್ನು ತಪ್ಪಾಗಿ ನಮೂದಿಸಿರುವವರಿಗೆ ಸೆ.8ರ ಬಳಿಕ ಅವಕಾಶ ಕೊಡಲಾಗುವುದು. ಜತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಂಥವರು ಸೆ.3ರ ಬೆಳಿಗ್ಗೆ 8ರಿಂದ ಸೆ.5ರ ಸಂಜೆ 5 ಗಂಟೆಯ ಒಳಗೆ ಅದನ್ನು ಸರಿ ಪಡಿಸಿಕೊಳ್ಳಬಹುದು ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

CET: Power Interruption due to Heavy Rain; Further opportunity for verification of records

ವಿದ್ಯಾರ್ಥಿಗಳು ತಮಗೆ ಲಭ್ಯವಾಗಿರುವ ಸಮಯಾವಕಾಶವನ್ನು ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಸಚಿವ ಅಶ್ವಥ್‌ ನಾರಾಯಣ ತಿಳಿಸಿದ್ದು ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸಮಯಾವಕಾಶವನ್ನು ನೀಡಲಾಗಿದೆ.

English summary
Education Minister Dr. CN Aswattha Narayan clarified that in the wake of disruption of power supply due to heavy rains across the state, more time has been given to the candidates who have written the CET to enter some online documents correctly, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X