ಭಾರತ ಟ್ರಂಪ್ ಮಾತು ಕೇಳಿದ್ದು ಮುಜುಗರದ ಸಂಗತಿ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಮೇ 15: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯ ಯುದ್ಧ ಶುರುವಾಗಿತ್ತು. ಪಾಕ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ದಾಳಿ ಮುಂದಾಗಿದ್ದ ಪಾಕ್‌ಗೆ ಭಾರತ ತಕ್ಕ ಪಾಠ ಕಲಿಸಿತ್ತು. ಇನ್ನೂ ಯುದ್ಧ ಮುಂದುವರಿಯುತ್ತದೆ ಎನ್ನುಷ್ಟರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ತಿಕೆ ವಹಿಸಿತ್ತು. ಕದನ ವಿರಾಮ ಘೋಷಣೆ ಬಳಿಕ ಯುದ್ಧ ಶಾಂತವಾಗಿದ್ದು, ಇದೀಗ ಈ ಬಗ್ಗೆ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ಪದೇ ಪದೇ ಕಾಲ್ಕೆರೆದು ಚೇಷ್ಟೆ ಮಾಡುತ್ತಲೇ ಇದೆ. ಹೀಗಾಗಿ ಮೊನ್ನೆ ಪಾಕಿಸ್ತಾನಕ್ಕೆ ಚೆನ್ನಾಗಿ ಬುದ್ದಿ ಕಲಿಸಬೇಕಿತ್ತು.

ಈ ವಿಚಾರದಲ್ಲಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದರು. ಇಂತಹ ವೇಳೆ ಪಾಕ್ ಅನ್ನು ಬಗ್ಗು ಬಡಿಯುವ ಕೆಲಸ ಮಾಡಬೇಕಿತ್ತು ಎಂದು ಅವರು ಭಾರತ ಸರ್ಕಾರ ಹಾಗೂ ಸೇನೆ ಪರವಾಗಿ ಮಾತನಾಡಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಇನ್ನಷ್ಟು ಬುದ್ಧಿ ಕಲಿಸಬೇಕಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನವಶ್ಯವಾಗಿ ಮಧ್ಯಪ್ರವೇಶ ಮಾಡಿದರು. ಟ್ರಂಪ್ ಮಾತು ಕೇಳಿದ್ದು ಮುಜುಗರದ ಸಂಗತಿ ಎಂದು ಅವರು ತಿಳಿಹೇಳಿದ್ದಾರೆ. ಸಚಿವರು ಪ್ರಕಾರ, ಭಾರತದ ಮೇಲೆ ಇನ್ನಷ್ಟು ಕಾಲ ಯುದ್ಧ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕಿತ್ತು. ಉಗ್ರರ ದಾಳಿ ಇನ್ನಷ್ಟು ಬುದ್ಧಿ ಕಲಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಹಲ್ಗಾಮ್ ದಲ್ಲಿ ಉಗ್ರರ ದಾಳಿ ಮಾಡಿ ಭಾರತೀಯ 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಆ ಉಗ್ರರ ಪೈಕಿ ಮೂವರನ್ನು ಜಮ್ಮುವಿನ ಕೆಲ್ಲಾರ್ ಅರಣ್ಯ ಪ್ರದೇಶದಲ್ಲಿ ಭಾರತೀಯ ಯೋಧರು ಎನ್‌ಕೌಂಟರ್ ಮಾಡಿದ್ದಾರೆ. ಒಟ್ಟು 14 ಮಂದಿ ಉಗ್ರರ ಪಟ್ಟಿ ಮಾಡಿದ್ದು, ಉಳಿದವರಿಗಾಗಿ ಅರಣ್ಯ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಯುದ್ಧ ಕುರಿತು ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ತಮ್ಮ ಪಾತ್ರವಿದೆ ಎಂದು ಪದೇ ಪದೆ ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯ ಪರಿಣಾಮವಾಗಿ ಉಭಯ ರಾಷ್ಟ್ರಗಳ ನಡುವೆ ಪರಮಾಣು ಯುದ್ಧ ತಪ್ಪಿದೆ, ಮಿಲಿಯನ್‌ಗಟ್ಟಲೇ ಜನರ ಜೀವ ಉಳಿದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಭಾರತ ಪಾಕಸ್ತಾನ ನಡುವೆ ಅಣ್ವಸ್ತ್ರ ಯುದ್ಧಾವಗೋದನ್ನು ತಪ್ಪಿಸಿದ್ದು ಅಮರಿಕ. ಯುದ್ಧ ವೇಳೆ ಅಮರಿಕಾ ಮಧ್ಯ ಪ್ರವೇಶ ಮಾಡಿತು ಎಂದು ಪ್ರಧಾನಿ ಹೇಳಿದ್ದರು.












Click it and Unblock the Notifications