ಮೆಟ್ರೋಗೆ ಶೇ ನೂರರಷ್ಟು ಹಣಕಾಸು ನೆರವು ಕೇಂದ್ರ ನೀಡಲಿ: ವಜೂಭಾಯಿ ವಾಲಾ

ಬೆಂಗಳೂರು, ಜೂನ್ 17: ಮೆಟ್ರೋ ಕಾಮಗಾರಿ ನಡೆಯುವ ಯಾವುದೇ ನಗರಕ್ಕೆ ಶೇ ನೂರರಷ್ಟು ಹಣವನ್ನು ಕೇಂದ್ರದಿಂದ ನೀಡಬೇಕು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಹೇಳಿದರು. ಕರ್ನಾಟಕದ ರೈತರ ಸ್ಥಿತಿ ಚೆನ್ನಾಗಿಲ್ಲ. ಕಾಮಗಾರಿಗೆ ಆಗುವ ಖರ್ಚನ್ನು ಬೇರೆಯದಕ್ಕೆ ಬಳಸಬಹುದು ಎಂದರು.

ವಿಧಾನಸೌಧದಲ್ಲಿ ಶನಿವಾರ ಬೆಂಗಳೂರು ಮೆಟ್ರೋದ ಹಸಿರು ಲೈನ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಟ್ರೋದಿಂದ ದ್ವಿಚಕ್ರ ವಾಹನ, ಕಾರಿನ ಬಳಕೆ ನಿಲ್ಲುತ್ತದೆ. ಪೆಟ್ರೋಲ್ ಉಳಿತಾಯದಿಂದ ಕೇಂದ್ರಕ್ಕೆ ಲಾಭ. ಆದ್ದರಿಂದ ಎಲ್ಲೇ ಮೆಟ್ರೋ ಕಾಮಗಾರಿ ಆದರೂ ಕೇಂದ್ರ ಸರಕಾರ ನೆರವು ನೀಡಬೇಕು ಎಂದರು.

'Centre has to provide 100 percent financial assistance to Metro rail projects'

ಬೆಂಗಳೂರಿನಲ್ಲಿ ಕಾರ್ಖಾನೆ, ಸೇವಾ ವಲಯ ಹೆಚ್ಚಾಗಿದೆ. ಹೊಸ ತಂತ್ರಜ್ಞಾನವನ್ನು ಕಲಿಯಲು ಬೆಂಗಳೂರಿಗೆ ವಿದ್ಯಾರ್ಥಿಗಳು ಬರುತ್ತಾರೆ. ಇಂಥ ನಗರಕ್ಕೆ ಮೆಟ್ರೋ ಅಗತ್ಯ್. ಇನ್ನು ಎರಡನೇ ಹಂತದ ಮೆಟ್ರೋ ಕಾಮಗಾರಿ ಯೋಜನೆಗೆ ಕೇಂದ್ರದಿಂದ ಪೂರ್ತಿ ಹಣವನ್ನು ನೀಡಬೇಕು. ಆ ಕಾಮಗಾರಿ ಹಣವನ್ನು ರೈತರ ಕಷ್ಟ ನಿವಾರಿಸಲು, ಉಳಿದ ಖರ್ಚುಗಳಿಗೆ ಬಳಸಬಹುದು ಎಂದು ರಾಜ್ಯಪಾಲರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+