ರೆಸ್ಟೋರೆಂಟ್‌ಗಳಲ್ಲಿ ವಿಕಲಚೇತನರಿಗೆ ರ‍್ಯಾಂಪ್ ಸೌಲಭ್ಯ!

ಬೆಂಗಳೂರು, ಜೂನ್ 10: ವಿಕಲಚೇತನರು ರೆಸ್ಟೋರೆಂಟ್‌ಗಳಿಗೆ ತೆರಳಲು ಕಷ್ಟ ಪಡುತ್ತಿದ್ದಾರೆ, ಅವರ ಸಮಸ್ಯೆ ನಿವಾರಣೆಗೆ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ರ‍್ಯಾಂಪ್ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಡಿಎ ಹಾಗೂ ಬಿಬಿಎಂಪಿ ಪತ್ರ ಬರೆದಿದೆ.

ಮುಂಬೈನ ವಿರಾಲಿ ಮೋದಿ ಎಂಬುವವರು ಅಲ್ಲಿನ ಸಂಸದ ಹುಸೇನ್ ದಾಲ್ವಿಗೆ ಪತ್ರ ಬರೆದು ವಿಕಲಚೇತನರು ರೆಸ್ಟೋರೆಂಟ್‌ಗೆ ತೆರಳುವ ಬವಣೆಯನ್ನು ತಿಳಿಸಿದ್ದರು. ಸಂಸದ ದಾಲ್ವಿ ಅವರು ಕೇಂದ್ರದ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ರವಾನಿಸಿದ್ದರು. ಪತ್ರದಲ್ಲಿ ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಲಾಗಿತ್ತು. ರಾಂಪ್ ನಿರ್ಮಿಇಸಿದರೆ ವಿಕಲಚೇತನರು ಯಾರ ಹಂಗಿಲ್ಲದೆ ಸುಲಭವಾಗಿ ರೆಸ್ಟೋರೆಂಟ್‌ಗೆ ತೆರಳಬಹುದು.

ವಿಕಲಚೇತನರಿಗೆ ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ಓಡಾಡಲು ಪೂರಕ ವಾತಾವರಣ ಕಲ್ಪಿಸಲು ಕಾಯಿದೆ ರೂಪಿಸಲಾಗಿದೆ.

Center writes letter to BBMP and BDA on ramps in hotels

2016ರಲ್ಲಿ ಸಂಸತ್ ಒಪ್ಪಿಗೆ ಸೂಚಿಸಿರುವ ವಿಕಲಚೇತನರ ಹಕ್ಕುಗಳ ಕಾಯಿದೆ ಅನ್ವಯ ಸರ್ಕಾರಿ ಕಚೇರಿಗಳಲ್ಲದೆ ಖಾಸಗಿ ಕಟ್ಟಡಗಳು ವಿಕಲಚೇತನ ಸ್ನೇಹಿಯಾಗಬೇಕಿದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಸೌಲಭ್ಯ ಇಲ್ಲದೆ ವಿಕಲಚೇತನರು ತೊಂದರೆ ಅನುಭವಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+