ಆಂಬಿಡೆಂಟ್ ಕಂಪಿನಿಯಿಂದ ಪಡೆದ ಹಣ ವಾಪಸ್ ನೀಡುವಂತೆ ನೋಟಿಸ್

ಬೆಂಗಳೂರು, ಡಿಸೆಂಬರ್ 7:ಆಂಬಿಡೆಂಟ್ ಕಂಪನಿ 950 ಕೋಟಿ ರೂ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಿಗೆ ಹಣವನ್ನು ಹಿಂದಿರುಗಿಸುವ ನಿಟ್ಟಿನಲ್ಲಿ ಕಂಪನಿಯಿಂದ ಹಣ ಪಡೆದುಕೊಂಡವರಿಗೆ ವಾಪಸ್ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಆಂಬಿಡೆಂಟ್ ಕಂಪನಿಯಿಂದ ಯಾರ್ಯಾರಿಗೆ ಹಣ ವರ್ಗಾವಣೆಯಾಗಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕೆಲವರಿಗೆ ಹಣವನ್ನು ವಾಪಸ್ ವಾಪಸ್ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಸಿಸಿಬಿ ಪರವಾಗಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ ಅವರೇ ವಾದ ಮಂಡಿಸಲಿದ್ದಾರೆ.

ಯಾರ್ಯಾರ ಬಳಿ ಎಷ್ಟು ಹಣವಿದೆ?

ಯಾರ್ಯಾರ ಬಳಿ ಎಷ್ಟು ಹಣವಿದೆ?

ಅಶ್ರಫ್ ಅಲಿಖಾನ್ ಎಂಬಾತನಿಂದ 5 ಕೋಟಿ, ವಹಾಬ್ ನಿಂದ 3.6 ಕೋಟಿ, ಅಲಿಖಾನ್‌ನಿಂದ 20 ಕೋಟಿ. ವಿಜಯ್‌ತಾತಾನಿಂದ 5 ಕೋಟಿ ಬರಬೇಕಿದೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ.

ಅಲಿಖಾನ್ ಇನ್ನೂ ಹಣ ನೀಡಿಲ್ಲ

ಅಲಿಖಾನ್ ಇನ್ನೂ ಹಣ ನೀಡಿಲ್ಲ

ಆರೋಪಿ ಅಲಿಖಾನ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ. ಅಲಿಖಾನ್ 57ಕೆಜಿ ತೂಕದ ಚಿನ್ನವನ್ನು ದೇವಸ್ಥಾನಕ್ಕೆ ಅರ್ಪಿಸಿದ್ದಾರಂತೆ ಯಾವ ದೇವಸ್ಥಾನ ಎಂದು ಕೇಳಿದರೆ ಮರೆತು ಹೋಗಿದೆ ಎನ್ನುವ ಉತ್ತರ ಕೊಡುತ್ತಿದ್ದಾರೆ. ಅಲ್ಲದೆ ಆತನೇ 18 ಕೋಟಿ ರೂ ವಾಪಸ್ ನೀಡುವುದಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾನೆ. ಆದರೆ ಇದುವರೆಗೂ 20 ಪೈಸೆಯೂ ಬಂದಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಅಲಿಖಾನ್ ಜಾಮೀನಿಗೆ ಸಿಸಿಬಿ ಆಕ್ಷೇಪ

ಅಲಿಖಾನ್ ಜಾಮೀನಿಗೆ ಸಿಸಿಬಿ ಆಕ್ಷೇಪ

ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಅಲಿಖಾನ್‌ಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸಿಸಿಬಿ ಅಧಿಕಾರಿಗಳ ಮನವಿ ಮೇರೆಗೆ 8 ದಿನಗಳ ಕಾಲ ವಿಚಾರಣೆಗೆಂದು ಅಲಿಖಾನ್‌ನನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿತ್ತು. ಅಲಿಖಾನ್‌ಗೆ ಜಾಮೀನು ನೀಡದಂತೆ ಸಿಸಿಬಿ ಪೊಲೀಸರು 1 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ.

20 ಕೋಟಿ ಕೊಡ್ತೀನಿ ನನ್ನನ್ನು ಏನೂ ಕೇಳ್ಬೇಡಿ ಎಂದ ಅಲಿಖಾನ್

20 ಕೋಟಿ ಕೊಡ್ತೀನಿ ನನ್ನನ್ನು ಏನೂ ಕೇಳ್ಬೇಡಿ ಎಂದ ಅಲಿಖಾನ್

ಆಂಬಿಡೆಂಟ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಅಲಿಖಾನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಇದೀಗ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ನೀಡಿದೆ. ಆಂಬಿಡೆಂಟ್ ಕಂಪನಿಯಿಂದ 20 ಕೋಟಿ ಪಡೆದಿದ್ದೇನೆ, ಅದನ್ನು ವಾಪಸ್ ಕೊಡ್ತೀನಿ, ನನ್ನನ್ನು ಬಿಟ್ಟುಬಿಡಿ ಬೇರೇನು ಗೊತ್ತಿಲ್ಲ ಎಂದು ಅಲಿಖಾನ್ ಹೇಳಿಕೆ ನೀಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಸಿಬಿ ಅಧಿಕಾರಿಗಳು 8 ದಿನಗಳ ವಿಚಾರಣೆ ನಡೆಸಿದ್ದರೂ ಹೆಚ್ಚಿನ ಮಾಹಿತಿಗಳನ್ನು ಆತ ಎಲ್ಲಿಯೂ ಬಾಯ್ಬಿಟ್ಟಿಲ್ಲ, ಕೇಳಿದ್ದಕ್ಕೆಲ್ಲಾ ನನಗೆ ಗೊತ್ತಿಲ್ಲ ಮರೆತು ಹೋಗಿದೆ ಎಂದಷ್ಟೇ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+